ಭೂರಮೆ ಅದೆಷ್ಟು ನಿಟ್ಟುಸಿರು ಬಿಟ್ಟಿಹಳಿಂದು
ಇಡೀ ಜಗವನ್ನೇ ಸ್ತಬ್ಧವಾಗಿಸಿ ತಾನೂ ಮೌನವಾಗಿಹಳು
ಜನಸಂದಣಿಯ ಗದ್ದಲಕ್ಕೆ ತಲೇಶೂಲೆ ಅನುಭವಿಸಿದಳು
ಅದೆಷ್ಟು ಆಕೆ ವಾಹನಗಳ ಶಬ್ಧಕ್ಕೆ ನಲುಗಿದ್ದಳು
ನಿಮಿಷ ನಿಮಿಷಕ್ಕೂ ಅದೆಷ್ಟು ಹೋಗೆ ತುಂಬಿಕೊಂಡಿದ್ದಳು
ಅದೆಷ್ಟು ಬಾರಿ ಕೊಡಲಿ ಪೆಟ್ಟಿಗೆ ಹಸಿರು ರವಿಕೆ ಕುಪ್ಪಸ ಕಳಚಿದಳು
ಸಹನಮೂರ್ತಿ ಧರೆ ಮತ್ತೂ ಮಳೆ ಬೆಲೆ ಸಕಾಲಕ್ಕೆ ಕೊಟ್ಟವಳು
ಎಷ್ಟಾದರೂ ಕೆರೆ ಬಾವಿ ಕಾನನ ನದಿ ಒಂದೂ ಬಿಡದೆ ಮುಚ್ಚಿ ಮರೆದೆವು ನಾವು
ಆದರೂ ಬರಡಾಗಿಸದೆ ಬಿಡಲಿಲ್ಲ ಉಳಿಸಲಿಲ್ಲ ನಿರ್ದಯಿ ಮನುಜ
ಭಾರ ಹೊತ್ತು ಹೊತ್ತು ಬದವಳಿದಳವಳು ಸೋತು ಕಣ್ಣೀರ ಸುರಿಸಿದಳು
ಇಂದು ಮಹಮಾರಿಯ ರೂಪದಿ ಉಗ್ರಪ್ರತಾಪ ತಳೆದಿಹಳು
ಕರುಣಾಮಯಿ ಎಷ್ಟೋಬಾರಿ ಎಚ್ಚರಿಕೆಯ ಗಂಟೆ ಮೊಳಗಿಸಿದ್ದಳು
ಮಿತಿಯ ಮೀರಲು ತನ್ನ ತಾನು ರಕ್ಷಿಸಿಕೊಳ್ಳುತಿಹಳು
ಮನುಜನ ಬಂಧಿಯಾಗಿಸಿ ತನ್ನ ಒಡಲ ಹಸಿರು ಕುಡಿಗಳ ಚಿಗುರಿಸಿಕೊಳ್ಳುತಿಹಳು
ಈ ಒಂದು ದಿನ ತನ್ನ ಚಿತ್ತವ ಶುಚಿಗೊಳಿಸಿ ಅಧಮ್ಯ ಗುರುವಾಗಿ ನಲಿದಿಹಳು
ಸರಿದಾರಿಯ ಪಾಠ ಕಲಿಸುವ ಶಿಕ್ಷಕಿ ಆಗಿಹಳವಳು
ಉಮಾ ಭಾತಖಂಡೆ.