ಐದು ದಶಕದ ಕಥೆಗಳು –
ಈ ಇಪ್ಪತ್ತನೆಯ ಶತಮಾನ ಜಗತ್ತಿನ ಇತಿಹಾಸದಲ್ಲೇ ಒಂದು ಸಂಕ್ರಾಂತಿ ಕಾಲ ಎಂದು ತೋರುತ್ತದೆ. ಅತಿ ಪುರಾತನ ಕಾಲದಲ್ಲೇ ನಮ್ಮ ದೇಶ ಧರ್ಮದ ತಳಹದಿಯ ಮೇಲೆ ಸಮಾಜವನ್ನು ಕಟ್ಟಿ ವ್ಯಕ್ತಿ ಮತ್ತು ಸಮಾಜಗಳ ವಿಭಿನ್ನ ಧರ್ಮಗಳಲ್ಲಿ ಒಂದು ಸಮನ್ವಯವನ್ನೂ ಸಾಮರಸ್ಯವನ್ನೂ ಸ್ಥಾಪಿಸಿತ್ತು. ಅತ್ಯುತ್ತಮವಾದ ವ್ಯವಸ್ಥೆಯೂ ಕೂಡಾ ಸಡಿಲಿ ಅವನತಿ ಪರವಾಗಿ ಮಾನವಕುಲ ಪಡಬಾರದ ಪಾಡುಪಟ್ಟು ಮತ್ತೆ ತನ್ನ ಅಗ್ನಿದಿವ್ಯದಿಂದ ಹೊರಬಿದ್ದು ಪುನಃ ತನ್ನ ಸಮತೂಕಕ್ಕೆ ಬೇಕಾದ ಧರ್ಮವನ್ನು ರೂಢಿಸಿಕೊಳ್ಳಬೇಕಾಗುತ್ತದೆ. ಇದೂ ಮತ್ತೆ ಮತ್ತೆ ನಡೆಯುವ ಕೆಲಸ. ಆದ ಕಾರಣ ಮಾನವ ಕುಲದ ಸಮಸ್ಯೆಗಳೆಲ್ಲವೂ ಎಲ್ಲ ಕಾಲದಲ್ಲೂ ಬಹುಶಃ ತತ್ವತಃ ಒಂದೇ. ಜೀವನದಲ್ಲಿ ಕಾಣುವ ದ್ವಂದ್ವ ಅಥವಾ ಬಹುತ್ವ — ಇವೇ ಎಲ್ಲ ಕಾಲದ ಸಮಸ್ಯೆಗಳ ತಾಯಿಬೇರು: ಜನ್ಮ, ಮೃತ್ಯು; ಸುಖ, ದುಃಖ; ದೇಹ, ಆತ್ಮ; ಇಹ, ಪರ; ವ್ಯಕ್ತಿ, ಸಮಾಜ, ಸಮಗ್ರ ಮಾನವಕುಲ; ಮಾನವ ಲೋಕ, ವಿಶ್ವ…
Reviews
There are no reviews yet.