ಪರ್ವತಧಾಮಗಳ ರಾಣಿ ಊಟಿ. ಅಲ್ಲಿನ ಕಾಡುಕುದುರೆ ‘ಕ್ಲೀ’ಗೆ ಬೆಟ್ಟದಾಚೆಯ ಹಸುರಿನ ಕನಸು. ಮೈಸೂರು ಅರಮನೆಯ ಅಶ್ವಲಾಯ ಸೇರಿ ರಾಜ ಸೇವೆಯಲ್ಲಿ ತೊಡಗುವ ಮಹತ್ತ್ವಾಕಾಂಕ್ಷೆ. ಮದುಮಲೈ ಅರಣ್ಯಗಳ ಮೂಲಕ ಹಾದು ದಂತಚೋರ ಬೀರಪ್ಪನ್ನ ಕೈಗಳಿಂದ ಪಾರಾಗಿ ಪ್ರಾಣಿ ಪಕ್ಷಿಗಳ ನೆರವಿನೊಂದಿಗೆ ಮೈಸೂರು ತಲುಪಿ ದಸರೆಯ ಪಂಜಿನ ಕವಾಯತಿನ ರಾಜಾಶ್ವವಾದ ‘ಕ್ಲೀ’ಯ ಕನಸು ನನಸಾಯಿತೇ? ಕನಸಾಗೇ ಉಳಿಯಿತೇ? ಈ ಕಾದಂಬರಿ ರ‍್ನಾಟಕದ ಸಾಂಸ್ಕೃತಿಕ ರಾಜಧಾನಿ ಮೈಸೂರು ನಗರದ ದಸರಾ ಉತ್ಸವದ ಸುತ್ತ ಹೆಣೆದ ಅದ್ಭುತ ರಮ್ಯತೆ, ಕಲ್ಪನೆ ಹಾಗೂ ಸಾಂಸ್ಕೃತಿಕ ವಿವರಗಳ ತ್ರಿವೇಣಿ ಸಂಗಮ. ಬಿಟ್ಟ ಬಾಣದಂತೆ ಒಂದೇ ಸಮನೆ ಗುರಿಯತ್ತ ಧಾವಿಸುವ ಉಸುರು ಬಿಗಿಹಿಡಿಸುವ ಸಾಹಸಮಯ ಕಥಾಹಂದರ ಅನನ್ಯವಾಗಿದೆ.
ಕ್ಲಿಂಗ್ ಜಾನ್ಸನ್ ಒಳ್ಳೆಯ ನಟ, ಚಿತ್ರ ನರ‍್ಮಾತೃ, ಬರಹಗಾರ ಹಾಗೂ ಸಂಗೀತ ಪ್ರೇಮಿ. ವೃತ್ತಿಯಿಂದ ಸಿವಿಲ್ ಎಂಜಿನಿಯರ್ ಆಗಿರುವ ಇವರ ವಾಸ ಉಡುಪಿ; ಮಣಿಪಾಲದ ಮಾಹೆ ಪರಿಗಣಿತ ವಿಶ್ವವಿದ್ಯಾನಿಲಯದ ಕಸ್ತರ‍್ಬಾ ಆಸ್ಪತ್ರೆಯಲ್ಲಿ ಅಗ್ನಿಶಾಮಕ ಮತ್ತು ಜೀವರಕ್ಷಕ ಅಧಿಕಾರಿ.
ಕನ್ನಡ ಅವತರಣಿಕೆ ಸಿದ್ಧಪಡಿಸಿದ ಡಾ. ಮಹಾಬಲೇಶ್ವರ ರಾವ್ ಅನನ್ಯ ಶಿಕ್ಷಣ ಚಿಂತಕ, ಲೇಖಕ, ಅಂಕಣಕಾರ ಮತ್ತು ಅನುವಾದಕ. ಸ್ವತಂತ್ರ ಹಾಗೂ ಅನುವಾದ ಈ ಎರಡೂ ಬಗೆಗಳಲ್ಲಿ ನೂರಮೂವತ್ತಕ್ಕೂ ಹೆಚ್ಚು ಕೃತಿಗಳನ್ನು ಪ್ರಕಟಿಸಿದ್ದಾರೆ. ಡಾ. ಹಾಮಾನಾ ಪುರಸ್ಕಾರ, ಗೊರೂರು ಪುರಸ್ಕಾರ, ಧರಣೇಂದ್ರಯ್ಯ ಪುರಸ್ಕಾರ, ವಿಶ್ವೇಶ್ವರಯ್ಯ ಜೀವಮಾನ ಸಾಧನೆ ಪುರಸ್ಕಾರ ಮುಂತಾದ ಹತ್ತು ಹಲವು ಪುರಸ್ಕಾರಗಳಿಗೆ ಇವರು ಭಾಜನರು.
Reviews
There are no reviews yet.