ನಿರಂತರವಾಗಿ ಸಾಹಿತ್ಯದ ಪುನರುಜ್ಜೀವನ ಕಾರ್ಯ ಕೈಗೊಂಡಿರುವ ಅಶೋಕರು ತಮ್ಮ ಅಂಕಣ ಬರಹದಿಂದ ಅನೇಕರಿಗೆ ಸಾಹಿತ್ಯದ ಒಳ್ಳೆಯ ಅಭಿರುಚಿಯನ್ನು ಬಿತ್ತಿದ್ದಾರೆ. ಈಗಾಗಲೇ ಅಂಕಣ ಬರಹಗಳನ್ನು ವಿಭಾಗಿಸಿ `ಕಾವ್ಯಪ್ರೀತಿ’ ಮತ್ತು `ಕಥನ ಪ್ರೀತಿ’ ಎಂಬ ಎರಡು ಪುಸ್ತಕಗಳು ಹೊರಬಂದಿವೆ. ಅಷ್ಟಾಗಿಯೂ ಅವರ `ಕಥೆಗಳ ಅಂಕಣ ಬರಹಗಳು’ ಇನ್ನೂ ಉಳಿದಿದ್ದರಿಂದ ಅವನ್ನು ಈಗ `ಕಥನ ಕಾರಣ’ ಎಂಬ ಹೆಸರಿನಿಂದ ಹೊರ ತರುತ್ತಿದ್ದೇವೆ. ಈ ಪುಸ್ತಕದಲ್ಲಿ ೭೦ ಲೇಖನಗಳಿವೆ. ಇವು ಪತ್ರಿಕೆಯ ಸಾಪ್ತಾಹಿಕದಲ್ಲಿ ಓದಿ ಮರೆಯುವ ಲೇಖನಗಳಲ್ಲ. ಆಗಾಗ ಮತ್ತೆ ಮತ್ತೆ ಓದಿ ಮಥನ ಮಾಡಿಕೊಳ್ಳಬೇಕಾದ ಲೇಖನಗಳು.
ಈ ಪುಸ್ತಕದಲ್ಲಿ ಮಾಸ್ತಿ, ಪಂಜೆ ಮಂಗೇಶರಾಯರು, ದ.ರಾ.ಬೇಂದ್ರೆ, ಕುವೆಂಪು, ಭಾರತಿಪ್ರಿಯ, ಯಶವಂತ ಚಿತ್ತಾಲ, ಯು.ಆರ್.ಅನಂತಮೂರ್ತಿ, ಪಿ.ಲಂಕೇಶ್, ರಾಘವೇಂದ್ರ ಖಾಸನೀಸ್ ಮುಂತಾದವರ ಕಥೆಗಳ ಕುರಿತಾದ ಲೇಖನಗಳಿವೆ.
-40%
Ebook
ಕಥನ ಕಾರಣ
Author: T.P.Ashok
Original price was: ₹350.00.₹210.00Current price is: ₹210.00.
ಈಗಾಗಲೇ ಅಂಕಣ ಬರಹಗಳನ್ನು ವಿಭಾಗಿಸಿ `ಕಾವ್ಯಪ್ರೀತಿ’ ಮತ್ತು `ಕಥನ ಪ್ರೀತಿ’ ಎಂಬ ಎರಡು ಪುಸ್ತಕಗಳು ಹೊರಬಂದಿವೆ. ಅಷ್ಟಾಗಿಯೂ ಅವರ `ಕಥೆಗಳ ಅಂಕಣ ಬರಹಗಳು’ ಇನ್ನೂ ಉಳಿದಿದ್ದರಿಂದ ಅವನ್ನು ಈಗ `ಕಥನ ಕಾರಣ’ ಎಂಬ ಹೆಸರಿನಿಂದ ಹೊರ ತರುತ್ತಿದ್ದೇವೆ.
About this Ebook
Information
Additional information
Category | |
---|---|
Author | |
Publisher | |
Language | Kannada |
Book Format | Ebook |
Pages | 392 |
Year Published | 2014 |
Reviews
Only logged in customers who have purchased this product may leave a review.
Reviews
There are no reviews yet.