‘ಚೆರ್ರಿ ತೋಪು’ ನಾಟಕದ ಕಥೆ ಆ ಕಾಲದ ರಷಿಯಾದ — ಮತ್ತು ವಿಶಾಲವಾಗಿ ಇಪ್ಪತ್ತನೆಯ ಶತಮಾನದ ಆರಂಭಕಾಲದ ಪಾಶ್ಚಿಮಾತ್ಯ ಜಗತ್ತಿನ — ಚರಿತ್ರೆಯ ಗತಿಯನ್ನೇ ನಿರೂಪಿಸುವಂಥದು; ಬಂಡವಾಳಶಾಹಿ ಯುಗದ ಆರಂಭದ ಲೋಕವೊಂದನ್ನು ಕಾಣಿಸುವಂಥದು. ಈ ನಾಟಕದಲ್ಲಿ, ಸಾಲಕ್ಕೆ ಆಧಾರವಾಗಿರುವ ಒಂದು ಜಮೀನ್ದಾರೀ ಕುಟುಂಬದ ಚೆರ್ರಿ ತೋಟ ಹರಾಜಿಗೆ ಬಂದಿದೆ. ಅದನ್ನು ನಿವೇಶನಗಳಾಗಿ ಮಾರ್ಪಡಿಸಿ ಮಾರಿದರೆ ಸಾಲ ತೀರುತ್ತದೆ. ಆದರೆ ಆ ತೋಟದೊಂದಿಗೆ ಭಾವನಾತ್ಮಕ ಸಂಬಂಧವಿಟ್ಟುಕೊಂಡಿರುವ ಒಡತಿ ರೆನೆವಸ್ಕಾಯಾ ಹಾಗೆ ಮಾಡಲು ಒಪ್ಪುವುದಿಲ್ಲ. ಅತ್ತ, ಹರಾಜೂ ನಿಲ್ಲುವುದಿಲ್ಲ. ಈ ಮನೆಯಲ್ಲಿ ಒಕ್ಕಲಾಗಿದ್ದು ಈಗ ಹಣವಂತನಾಗಿರುವ ಲೋಪಾಹಿನ್‌ನೇ ತೋಟವನ್ನು ಕೊಳ್ಳುತ್ತಾನೆ. ಚೆರ್ರಿಮರಗಳನ್ನು ಕಡಿದು ಉರುಳಿಸುತ್ತಿರುವ ಶಬ್ದದ ಹಿನ್ನೆಲೆಯಲ್ಲಿ ಈ ಕುಟುಂಬ ಮನೆಯನ್ನು ಬಿಟ್ಟು ಹೊರಡುವಲ್ಲಿಗೆ ಈ ನಾಟಕ ಮುಗಿಯುತ್ತದೆ. ವಿಶೇಷವಾದ ನಾಟಕೀಯತೆಯೇನೂ ಇಲ್ಲದ ಈ ಕಥೆಯನ್ನು ಚೆಕಾವ್ ನಿರೂಪಿಸುವ ರೀತಿಯಿಂದಲೇ ಈ ಕೃತಿಯು ಎಲ್ಲ ಕಾಲಕ್ಕೂ ಸಲ್ಲುವ ಮಾನವವ್ಯಾಪಾರಗಳ ಒಂದು ದರ್ಶನವಾಗಿಯೂ ಪರಿವರ್ತಿತವಾಗುತ್ತದೆ.

Additional information

Category

Publisher

Language

Kannada

Author

Book Format

Ebook

Pages

80

Year Published

2010