Author Details

VS

Vivek Shanbhag

ವಿವೇಕ ಶಾನಭಾಗ - ವಿವೇಕ ಶಾನಭಾಗ ಇವರು ಕನ್ನಡದ ಪ್ರಸಿದ್ಧ ಕತೆಗಾರ ಕಾದಂಬರಿಕಾರ ಮತ್ತು ನಾಟಕಕಾರರು. ವೃತ್ತಿಯಿಂದ ಎಂಜಿನಿಯರ್ ಆಗಿರುವ ವಿವೇಕ್ ಬಹುರಾಷ್ಟ್ರೀಯ ಕಂಪನಿಯಲ್ಲಿ ಹಿರಿಯ ಹುದ್ದೆಯಲ್ಲಿದ್ದಾರೆ. ವಿವೇಕರು `ಭಾವನಾ' ಹಾಗೂ 'ಪ್ರಜಾ ವಾಣಿ' ಪತ್ರಿಕೆಗೆ ಕೆಲವು ಕಾಲ ಅಂಕಣಗಳನ್ನೂ ಬರೆದಿದ್ದರು. ಉದ್ಯೋಗನಿಮಿತ್ತ ಅಮೇರಿಕ, ಇಂಗ್ಲೆಂಡ್, ಕಲ್ಕತ್ತಾಗಳಲ್ಲಿ ಹಲವು ವರ್ಷ ವಾಸವಾಗಿದ್ದ ವಿವೇಕ್ ಸದ್ಯ ಬೇಂಗಳೂರಿನಲ್ಲಿ ನೆಲೆಸಿದ್ದಾರೆ. ಈವರೆಗೆ ವಿವೇಕ ೪ ಕಥಾಸಂಕಲನಗಳು, ೨ ಕಾದಂಬರಿಗಳು, ೨ ನಾಟಕಗಳು ಹಾಗೂ ೨ ಸಂಪಾದಿತ ಗ್ರಂಥಗಳನ್ನು ಪ್ರಕಟಿಸಿದ್ದಾರೆ. ಇವರು 'ದೇಶಕಾಲ' ಎನ್ನುವ ವಿಶಿಷ್ಟ ಸಾಹಿತ್ಯ ತ್ರೈಮಾಸಿಕವೊಂದನ್ನು ಸಂಪಾದಿಸುತ್ತಿದ್ದಾರೆ. ಸಾಹಿತ್ಯಇವರ ಕೃತಿಗಳು ಇಂತಿವೆ: ಕಥಾಸಂಕಲನ : ಅಂಕುರ ಲಂಗರು ಹುಲಿಸವಾರಿ ಮತ್ತೊಬ್ಬನ ಸಂಸಾರ ಘಾಚರ್-ಘೋಚರ್ ಕಾದಂಬರಿ : ಇನ್ನೂ ಒಂದು ಒಂದು ಬದಿ ಕಡಲು ಊರು ಭಂಗ ನಾಟಕ : ಸಕ್ಕರೆ ಬೊಂಬೆ ಬಹುಮುಖಿ ಸಂಪಾದಿತ ಕೃತಿಗಳು: ಶ್ರೀಕೃಷ್ಣ ಆಲನಹಳ್ಳಿ ವಾಚಿಕೆ ಸಿರಿಗನ್ನಡ - ಇದು ಇಂಗ್ಲಿಷಿನಲ್ಲಿ ಪ್ರಕಟವಾಗಿರುವ ಆಂಥಾಲಜಿ.
View Books

Top Books

HomeShop
Podcast
My Books
Cart