Ebook

ಉರಿವ ಕೆಂಡದ ಮೇಲೆ

Author: Basavaraj Donur

Original price was: ₹750.00.Current price is: ₹450.00.

ಬಸವರಾಜ ಡೋಣೂರ ಕಾದಂಬರಿ “ಉರಿವ ಕೆಂಡದ ಮೇಲೆ” ಜೂಲೈ ೨೫ ರಿಂದ ಲಭ್ಯ

ಕಾದಂಬರಿ ಸಾಗುವುದು ಇಬ್ಬರು ವ್ಯಕ್ತಿಗಳ ಜಟಾಪಟಿಯ ಗತಿಯಲ್ಲಿ. ಈ ಸಂಘರ್ಷವನ್ನು ದ್ವಿತ್ವದಲ್ಲಿ ಹೇಳುವುದಾದರೆ ಅಕಾರಸ್ಥ-ನೌಕರರ ನಡುವಿನ ಬ್ಯೂರೊಕ್ರಾಟಿಕ್ ಸಂಘರ್ಷ, ಭ್ರಷ್ಟತೆ ಮತ್ತು ಆದರ್ಶಗಳ ನಡುವಿನ ಸಂಘರ್ಷ, ಮುಸ್ಲಿಂ-ಹಿಂದೂ ಸಂಘರ್ಷ, ಹೆಣ್ಣು-ಗಂಡಿನ ನಡುವಿನ ಸಂಘರ್ಷ, ನೈತಿಕತೆ ಮತ್ತು ಅನೈತಿಕತೆಗಳ ಗಡಿರೇಖೆಗಳನ್ನು ಗುರುತಿಸಿಕೊಳ್ಳುವ ಒಳಯುದ್ಧ ಹೀಗೆ ಹಲವಾರು ನೆಲೆಗಳಲ್ಲಿ ಇಡಬಹುದು.

ಮನೋಹರ ಗ್ರಂಥಮಾಲಾ ಅವರ ನೂತನ ಕೊಡುಗೆ

ಭಾಷೆ ನೆರವೂ ಸುಲಭಗ್ರಾಹ್ಯವೂ ಆಗಿರುವುದರಿಂದ ಚಿತ್ರಿತ ಘಟನಾವಳಿಗಳು ದಟ್ಟವೂ ವೈವಿಧ್ಯಪೂರ್ಣವೂ ಆಗಿರುವ ಕಾರಣ
ಈ ಕಾದಂಬರಿ ಓದುಗರಿಗೆ ಒಜ್ಜಿಯಾಗದೆ ಸಲೀಸಾಗಿ ಓದಿಸಿಕೊಳ್ಳುತ್ತದೆ. ಕಾದಂಬರಿಯ ಹೊತ್ತುಗೊತ್ತುಗಳು ಕ್ಯಾಂಪಸ್ ಆಗಿದ್ದರೂ ಆ ಚೌಕಟ್ಟಿನಲ್ಲೇ ನಮಗೆ ವಿಶಾಲ ಜಗತ್ತಿನ ಅನುಭವಗಳು ಜೀವಂತವಾಗಿ ಘಟನೆಗಳಿಗೆ ವಿಶಾಲ ಭಿತ್ತಿಯನ್ನು ನಿರ್ಮಿಸಿವೆ. ಕ್ರೌರ್ಯ ಮತ್ತು ಕುಹಕಗಳ ನಡುವೆಯೂ ತನ್ನ ಇತ್ಯಾತ್ಮಕ ಮುಗುದತೆಯನ್ನು ಜೀವಂತವಾಗಿರಿಸಿಕೊಂಡಿರುವ ಇಲ್ಲಿನ ಕಥಾನಾಯಕ ಓದುಗರ ಹೃನ್ಮಗಳನ್ನು ಗೆದ್ದುಕೊಳ್ಳುವಂತೆ ಕಥಾ ಹಂದರವನ್ನು ನೇಯ್ದಿರುವ ಡೋಣೂರರ ಪ್ರಯತ್ನ ಫಲ ಕೊಡಲಿ ಅವರಿಗೆ ಹೆಚ್ಚು ಹೆಚ್ಚು ಓದುಗರನ್ನೂ ಹೆಚ್ಚು ಹೆಚ್ಚು ಮೆಚ್ಚುಗೆಯನ್ನೂ ಕೊಡಿಸಲಿ ಎಂದು ಪ್ರಾರ್ಥಿಸುತ್ತೇನೆ ” – ಎಚ್. ಎಸ್. ಶಿವಪ್ರಕಾಶ

Additional information

Author

Publisher

Book Format

Ebook

Language

Kannada

Year Published

2021

Category

Reviews

There are no reviews yet.

Only logged in customers who have purchased this product may leave a review.