ದಿವ್ಯ (ಕಾದಂಬರಿ) –

ದಿವ್ಯ ಎಂಬ ಶಬ್ದಕ್ಕೆ ಎರಡು ದಿಕ್ಕಿನ ಅರ್ಥದ ಛಾಯೆಗಳಿದ್ದಾವೆ. ಒಂದು, ಪಣ-ಪರೀಕ್ಷೆ ಇತ್ಯಾದಿ ಸಂಘರ್ಷವನ್ನು ಸೂಚಿಸುವಂಥದಾದರೆ ಇನ್ನೊಂದು ಅಲೌಕಿಕದ ಸಾಕ್ಷಾತ್ಕಾರವನ್ನು ಸೂಚಿಸುವಂಥದು. ಮೇಲ್ನೋಟಕ್ಕೆ ವಿರುದ್ಧವೆಂದು ಕಾಣಿಸಿಕೊಳ್ಳುವ ಈ ಎರಡು ಅರ್ಥವ್ಯಾಪ್ತಿಗಳು ಸಂಗಮಿಸುವ ಒಂದು ವಿಶೇಷ ಬಿಂದುವಿನಲ್ಲಿ ಅನಂತಮೂರ್ತಿಯವರ ಕಾದಂಬರಿ ‘ದಿವ್ಯ’ದ ಉಗಮವಾಗಿದೆ. ಹಾಗಂತ ಈ ಕಾದಂಬರಿಯಲ್ಲಿ ನಾವು ಎದುರಾಗುವ ಲೋಕವೇನೂ ಅಪೂರ್ವ-ಅಪರಿಚಿತವಾದದ್ದಲ್ಲ. ಅನಂತಮೂರ್ತಿ ಅವರ ಹಿಂದಿನ ಕಥನಗಳಲ್ಲಿ ಕಾಣಿಸಿಕೊಂಡ ಸ್ಥಳ-ಪಾತ್ರಸಮುಚ್ಚಯವೇ ಈ ಕಾದಂಬರಿಯಲ್ಲೂ ಇನ್ನೊಂದು ರೂಪದಲ್ಲಿ ಕಾಣಿಸಿಕೊಂಡಿದೆ. ಆದರೆ ಅದನ್ನು ನೋಡುತ್ತಿರುವ ರೀತಿ ಅಥವಾ ಅದನ್ನು ಕಥಿಸುತ್ತಿರುವ ಕ್ರಮ ಮಾತ್ರ ಹಿಂದೆಂದಿಗಿಂತ ವಿಶೇಷವಾದದ್ದು. ಹಿಂದೆ ಕೊಳೆತ ಕೆರೆಯಂತೆ ಕಂಡ ಸ್ಥಳ ಈಗ ನಿಗೂಢವಾದ ಸರಸ್ಸೂ ಇದ್ದೀತೆ ಎನಿಸುವಂತಿದೆ; ಹಿಂದೆ ಕೂಪಮಂಡೂಕಗಳಾಗಿ ಕಂಡ ವ್ಯಕ್ತಿಗಳು ಈಗ ಧ್ಯಾನಸ್ಥ ಋಷಿಗಳೂ ಆಗಿರಬಹುದೆ ಎಂಬ ಅನುಮಾನವನ್ನು ಈ ಕಥನ ಉದ್ದೀಪಿಸುವಂತಿದೆ. ಹಾಗಾಗಿ ಇದೊಂದು ಹಳೆಯ ಲೋಕದ ಹೊಸ ಸೃಷ್ಟಿ. ಅಥವಾ ಏಲಿಯಟ್ ತನ್ನ ಒಂದು ಪದ್ಯದ ಸಾಲಿನಲ್ಲಿ ಹೇಳಿರುವುದನ್ನು ಗದ್ಯದಲ್ಲಿ ಉಲ್ಲೇಖಿಸುವುದಾದರೆ — ‘ಎಲ್ಲ ಆವಿಷ್ಕಾರಗಳೂ ಆತ್ಯಂತಿಕವಾಗಿ ಮುಟ್ಟುವುದು ಹೊರಟ ಸ್ಥಳಕ್ಕೇ, ಆದರೆ ಆ ಸ್ಥಳ ಮಾತ್ರ ಆಗ ಹೊಸತಾಗಿ ಆವಿಷ್ಕಾರಗೊಳ್ಳುತ್ತದೆ.’

Additional information

Category

Author

Publisher

Language

Kannada

Book Format

Ebook

Year Published

2012

Reviews

There are no reviews yet.

Only logged in customers who have purchased this product may leave a review.