ಓಲಗ ಕಾದಂಬರಿ ಪ್ರಾದೇಶಿಕ ಅನ್ಯೋನ್ಯತೆಗಳ ಬಗ್ಗೆ ಮಾರ್ಮಿಕವಾಗಿ ತಿಳಿಸುವ ಅತ್ಯಂತ ಗಮನಾರ್ಹ ಕೃತಿ ಎಂದು ಹೇಳಬಹುದಾಗಿದೆ. ಕಲೆಯು ಕಳೆದು ಹೋಗುತ್ತಿದೆ ಎಂಬ ಆತಂಕದ ನಡುವೆ ಇನ್ನೂ ಜೀವಂತವಾಗಿ ತುಳುನಾಡಿನ ಲಕ್ಷಾಂತರ ಮಂದಿಯಲ್ಲಿ ಲವಲವಿಕೆ ತುಂಬಿಸಿದ ತುಳು ಸಂ ಸ್ಕೃತಿಯ ಕವಲುಗಳ ಚಿತ್ರಣ ಇಲ್ಲಿವೆ. ತುಳುವಿನ ವಿವಿಧ ಸಂಪ್ರದಾಯಗಳ ಸೂಕ್ಷತೆಗಳು. ಹೀಗೂ ಉಂಟೆ ಎನಿಸುವ ಅಚ್ಚರಿಯ ತುಳು ಆಚರಣೆಗಳು. ನಂಬಿಕೆಯ ನಡುವೆ ಒಂದಿಷ್ಟು ನವಿರಾದ ಪ್ರೀತಿ ಪ್ರೇಮ, ಒಂದಿಷ್ಟು ಹಳ್ಳಿ ರಾಜಕೀಯಗಳು. ಕೊನೆಗೆ ಉತ್ತಮ ಸಂದೇಶ ನೀಡುವ ಜೀವಾನುಭವ ಇನ್ನಷ್ಟು ವಿಚಾರಗಳನ್ನು ಓದುಗರಿಗೆ ಕಟ್ಟಿಕೊಡುವ ನೀರ್ ಮಾರ್ಗರ “ಓಲಗ” ಕಾದಂಬರಿ ಓಲಗ ನುಡಿಸುವಲ್ಲಿ ಯಶಸ್ವಿಯಾಗಿದೆ. ಬದುಕಿನ ಸುಖಕಷ್ಟಗಳು ನೋವು ನಲಿವುಗಳನ್ನು ವಿಸ್ತಾರವಾಗಿ ಒಂದು ವಿನ್ಯಾಸದಲ್ಲಿ ಕಟ್ಟಿ ಹತ್ತಾರು ಭಾವಗಳನ್ನು ಹಿತವಾಗಿ ಮುಟ್ಟಿ ಕಲ್ಪನೆಯ ಜಾಡು ಹಿಡಿದು ವಿಸ್ಮಯದಿಂದ ನಮ್ಮ ಹೃದಯವನ್ನು ತಟ್ಟುತ್ತದೆ.
-40%
About this Ebook
Information
Additional information
Category | |
---|---|
Author | |
Publisher | |
Language | Kannada |
Year Published | 2022 |
Book Format | Ebook |
Reviews
Only logged in customers who have purchased this product may leave a review.
Reviews
There are no reviews yet.