Additional information
Category | |
---|---|
Author | |
Publisher | |
Language | Kannada |
Book Format | Ebook |
Original price was: ₹120.00.₹72.00Current price is: ₹72.00.
ಒಂದು ಆನೆಯ ಸುತ್ತ
(ವಸ್ತುಸ್ಥಿತಿಯನ್ನು ಆಧರಿಸಿದ ಕಾಲ್ಪನಿಕ ಕಾದಂಬರಿ)
ವನ್ಯಜೀವಿಗಳ ಬಗ್ಗೆ ಮಾತಾಡುತ್ತೇವೆ. ಅವುಗಳ ಅಳಿವಿನ ಬಗ್ಗೆ ಕಾಳಜಿ ವ್ಯಕ್ತಪಡಿಸುತ್ತೇವೆ. ಆದರೆ ಬರಿಯ ಮಾತು, ಕಾಳಜಿಗಳಿಂದ ಅವು ಉಳಿಯಲಾರವು. ಅವುಗಳ ಅಳಿವಿಗೆ ಕಾರಣವಾಗುವ ಅಂಶಗಳ ಬಗ್ಗೆ ನಮ್ಮ ಗಮನ ಹರಿಯಬೇಕು. ಆನೆಗಳಂತಹಾ ದೈತ್ಯಜೀವಿಗಳು ಊರೊಳಗೆ ನುಗ್ಗಿ ಆಸ್ತಿ, ಮನೆ, ಬೆಳೆ, ಜೀವಹಾನಿಗಳನ್ನು ಮಾಡಿದಾಗ ಅದರ ನೇರ ಪರಿಣಾಮ ಎದುರಿಸುವವರ ಬವಣೆ ವರ್ಣನಾತೀತ. ಆಗೆಲ್ಲಾ ಸಹಜವಾಗಿಯೇ ಅವುಗಳ ಮೇಲೆ ಆಕ್ರೋಶ ವ್ಯಕ್ತವಾಗುತ್ತದೆ. ಈಗ ಮಲೆನಾಡಿನ ಕೆಲವೆಡೆ ಆಗುತ್ತಿರುವುದು ಇದೇ. ತಿಳಿದೋ ತಿಳಿಯದೆಯೋ ಅನಿವಾರ್ಯ ಎಂದುಕೊಂಡು ಪ್ರಾಣಿಗಳ ವಾಸಸ್ಥಳಗಳನ್ನೆಲ್ಲಾ ನಾವು ಆಕ್ರಮಿಸಿಕೊಳ್ಳುತ್ತಿದ್ದೇವೆ. ವಿಧಿ ಇಲ್ಲದೆ ಅವೇ ಊರೊಳಗೆ ನುಗ್ಗುವ ಪರಿಸ್ಥಿತಿ ನಿರ್ಮಾಣ ಮಾಡಿದ್ದೇವೆ. ತೊಂದರೆಯಾದಾಗ ಮಾತ್ರ ಹಾಹಾಕಾರ ವೆಬ್ಬಿಸುತ್ತೇವೆ. ಆನೆಗಳ ಸ್ವಚ್ಛಂದ ತಿರುಗಾಟಕ್ಕೆ ಅಡ್ಡಿ ಮಾಡಿ ಅವುಗಳ ಆಹಾರ, ನೆಲೆ ನಾಶ ಮಾಡಿದ್ದೇವೆ. ಊರೊಳಗೆ ಬಂದಾಗ ಅವುಗಳನ್ನು ಕೊಲ್ಲುವ ಮಾತೂ ಬರುತ್ತದೆ. ಅಲ್ಲ, ತೊಂದರೆಗೊಳಗಾದ ಜನರೇ ತಮಗೆ ತೋಚಿದ ಯಾವುದಾದರೂ ಒಂದು ರೀತಿಯಲ್ಲಿ ಅವುಗಳನ್ನು ಕೊಲ್ಲುತ್ತಿದ್ದಾರೆ. ಇದಕ್ಕೆಲ್ಲಾ ಪರಿಹಾರವೇ ಇಲ್ಲವೇ ಇಲ್ಲ ಎಂದಲ್ಲ; ಇದೆ, ಪೂರ್ತಿಯಾಗಿ ಅಲ್ಲದಿದ್ದರೂ ಮಿತಿ ಮೀರದಷ್ಟು ಖಂಡಿತಾ ಇದೆ. ಆದರೆ ಒಬ್ಬಿಬ್ಬರು ಮಾಡುವಂಥದ್ದಲ್ಲ. ಸಂಕಲ್ಪ ಬೇಕು. ಘನಸರ್ಕಾರದ ಕೃಪೆಯಾಗಬೇಕು. ಆದಷ್ಟೂ ಈ ಅಪೂರ್ವವಾದ ಪಶ್ಚಿಮಘಟ್ಟವನ್ನು ಭೇದಿಸಬಾರದು. ಅಲ್ಲಿ ಜನ ಜಾತ್ರೆ ಕೂಡದು. ಈಗಿರುವ ಹೆದ್ದಾರಿಗಳ ಹೊರತಾಗಿ ಹೊಸ ದಾರಿಗಳನ್ನು ನಿರ್ಮಿಸಬಾರದು. ಇರುವ ರಸ್ತೆಗಳನ್ನೇ ಸುವ್ಯವಸ್ಥೆಗೊಳಿಸಬೇಕು. ಗೊತ್ತು ಗುರಿ ಇಲ್ಲದೆ ಅರೆಕಟ್ಟುಗಳನ್ನು ಕಟ್ಟಲೇ ಬಾರದು. ಹಾಗಾದರೆ ಅಭಿವೃದ್ಧಿ ಬೇಡವೇ? ಅವಶ್ಯ ಇರುವ ವಿದ್ಯುತ್ತಿನ ಉತ್ಪಾದನೆ ನಿಲ್ಲಿಸಬೇಕೇ? ಎಂದೂ ಅನಿಸಬಹುದು. ಈಗ ದುಬಾರಿ ಎನಿಸಿದರೂ ಅದನ್ನು ಬೇರೆ ಬಗೆಯಲ್ಲಿ ಉತ್ಪಾದಿಸಬೇಕು. ಲಾಭ ನಷ್ಟದ ತೂಕ ಹಾಕಿ ನೋಡಿದರೆ ಮುಂದಾಲೋಚನೆ ಇಲ್ಲದೆ ಮಾಡುವ ಈ ರೀತಿಯ ಕೆಲಸಗಳಿಂದ ಲಾಭಕ್ಕಿಂತ ಅಪಾರವಾದ ನಷ್ಟವೇ ಜಾಸ್ತಿ ಎನ್ನುವುದು ಪ್ರಕೃತಿಯ ಒಳಹೊರಗು ತಿಳಿದವರಿಗೆ ಅರ್ಥವಾಗುತ್ತದೆ. ಇದರ ಪರಿಣಾಮ ಅನುಭವಿಸುವವರು ನಮ್ಮ ಮುಂದಿನ ಪೀಳಿಗೆಯವರು. ಅಂದರೆ ನಮ್ಮ ಮಕ್ಕಳು, ಮೊಮ್ಮಕ್ಕಳು! ಇದು ಒಂದು ತರಹ ‘ಚಿನ್ನದ ಮೊಟ್ಟೆ ಇಡುವ ಕೋಳಿಯ ಹೊಟ್ಟೆ ಸೀಳಿದಂತೆ!’ ಮಳೆ ತರಿಸುವ ಮಳೆಕಾಡುಗಳು, ಪ್ರಕೃತಿಯ ಸಮತೋಲನ ಸಾಧಿಸುವ ವನ್ಯಜೀವಿಗಳು, ಇಡೀ ನಮ್ಮ ದೇಶಕ್ಕೇ ಸಾಲುವಷ್ಟು ಅಪೂರ್ವವಾದ ಔಷಧಿ ಸಂಪತ್ತನ್ನು ಹೊಂದಿದ ಸಸ್ಯಗಳು ಎಲ್ಲಕ್ಕೂ ಮೂಲ ಪಶ್ಚಿಮಘಟ್ಟಗಳ ಸಾಲುಗಳು. ಅವುಗಳ ಮೂಲಗಳನ್ನೇ ನಾಶಮಾಡಿ ನಾವು ಸುಖಪಡುವುದಲ್ಲ. ಅದಕ್ಕೆ ಹಾನಿ ಮಾಡದೆ ಅದರಿಂದ ಸಿಗುವ ಲಾಭವನ್ನು ಪಡೆಯುವುದೇ ವಿವೇಚನೆ. ತೊಂದರೆ ಕೊಡುವ ಆನೆಗಳಂತಹಾ ಪ್ರಾಣಿಗಳು ಊರಿಗೆ ಬಂದರೆ ಅಲ್ಲಿನ ಜನಗಳ ಬದುಕು ನರಕವಾಗುತ್ತದೆ. ಅದಕ್ಕೂ ವ್ಯವಸ್ಥೆಯಾಗಬೇಕು. ಕೆಲವೆಡೆ ತಡೆಗೋಡೆ, ಕೆಲವೆಡೆ ಕಂದಕಗಳನ್ನು ತೋಡಿಯಾದರೂ ಅವು ಊರಿಗೆ ಬಾರದಂತೆ ತಡೆಯಬೇಕು. ಗುಡ್ಡ, ಬೆಟ್ಟ, ತೊರೆ, ಪ್ರಪಾತಗಳಿರುವ ಸಾವಿರಾರು ಕಿ.ಮೀ. ಉದ್ದಕ್ಕೆಲ್ಲಾ ಅದನ್ನು ಮಾಡುವುದೆಂತು? ಎನಿಸಬಹುದು. ವಿಪರೀತ ಖರ್ಚಿನ ಬಾಬ್ತು ನಿಜ, ಆದರೆ ಯಾವ್ಯಾವುದಕ್ಕೋ ಕೋಟಿ ಕೋಟಿ ಖರ್ಚು ಮಾಡುವ ನಮಗೆ ಅದು ಖಂಡಿತಾ ಅಸಾಧ್ಯವಲ್ಲ. ಅಲ್ಲದೆ ಚೀನದ ಮಾಹಾಗೋಡೆಯ ಮುಂದೆ ಇದೆಷ್ಟರ ಕೆಲಸ? ಮನಸ್ಸಿದ್ದರೆ ಮಾರ್ಗ!
Category | |
---|---|
Author | |
Publisher | |
Language | Kannada |
Book Format | Ebook |
Only logged in customers who have purchased this product may leave a review.
Reviews
There are no reviews yet.