ನಾವೆಂದಿಗೂ ಸ್ವತಂತ್ರರಲ್ಲ. ಜೀವನವಿಡೀ ನಾವು ಹಪಹಪಿಸುವ ಆ ಸ್ವಾತಂತ್ರ್ಯ ಜೈಲಿನ ಅನುಭವದ ಮೂಲಕ ಈ ಕಾದಂಬರಿಯ ಮೂಲ ಆಶಯವಾಯಿತು.
ಇವರೇ ಏಕೆ ಖೈದಿಗಳಾದರು? ಹೊರಗಿರುವವರೆಲ್ಲ ಒಳ್ಳೆಯವರೆ? ನನ್ನನ್ನು ಆಗಾಗ ಕಾಡಿದ ಪ್ರಶ್ನೆಯಿದು. ಇದು ನನ್ನನ್ನು ಈ ಕೃತಿ ಬರೆಯಲು ಪ್ರೇರೇಪಿಸಿತೆಂದರೂ ಸುಳ್ಳಲ್ಲ. ಹೀಗೆ ಸ್ವಾತಂತ್ರ್ಯದ ಆಶಯಗಳಲ್ಲಿ ಶುರುವಾದ ಕಾದಂಬರಿ ಕೇವಲ ಒಬ್ಬ ಖೈದಿಗೆ ಮಾತ್ರ ಸೀಮಿತವಾಗಿಲ್ಲ. ಬದಲಿಗೆ, ಒಂದು ಮಹಾನ್ ಸಂಶೋಧನೆಯ ಕಥೆಯೂ ಆಗಿದೆ.
ನಾವು ಬೆಳೆದ ಪರಿಸರದಲ್ಲಿ ನಮ್ಮ ಕಲ್ಪನೆಗೇ ಒಂದು ಕಡಿವಾಣವಿದೆ. ಒಂದು ಹಂತದವರೆಗೂ ನಾವು ಸಂಗತಿಗಳನ್ನು ಒಪ್ಪುತ್ತೇವೆ ಹೊರತು, ಅದನ್ನು ಮೀರಿದ ಸಂಗತಿಗಳನ್ನು ಅಲ್ಲಗಳೆದು ‘ಇದು ಸಾಧ್ಯವಿಲ್ಲ’ ಎಂದು ನಿರ್ಧರಿಸಿಯೇ ಬಿಡುತ್ತೇವೆ. ಅದಕ್ಕೆ ಕಾರಣ, ಅಂತಹ ಕಲ್ಪನೆಗಳಿಗೆ ನಮ್ಮ ಮೆದುಳು ತಯ್ಯಾರಾಗಿಯೇ ಇಲ್ಲ. ಸುಲಭವಾದ ಅಲ್ಲಗಳೆಯುವಿಕೆ ಅದೇ ಮೆದುಳಿನ ಒಂದು ಪಲಾಯನವಾದ. ಯಾವುದು ಕಲ್ಪನೆಗೆ ಮೀರಿದ್ದೋ, ಅದನ್ನ ಸಾಧ್ಯವೇ ಇಲ್ಲ ಅಂದುಬಿಡುವ ದೋರಣೆ. ಅದನ್ನು ಪಕ್ಕಕ್ಕಿಟ್ಟು ಹೊಸ ಆವಿಷ್ಕಾರಗಳನ್ನು, ವಿಸ್ತೀರ್ಣ ಕಲ್ಪನೆಗಳನ್ನು ಸ್ವಾಗತಿಸುವ ಓದುಗರಿಗೆ, ಕಲ್ಪನಾ ಸ್ವಾತಂತ್ರ್ಯ ಇರುವವರಿಗೆ ಈ ಕಾದಂಬರಿ ಬಹುವಾಗಿ ಹಿಡಿಸಬಹುದು.
Reviews
There are no reviews yet.