ನಾನೀಗ ಇತಿಹಾಸದ ಪುಟಗಳಿಗೆ ಸೇರಿರುವ ಹೈದರಾಬಾದ ಸಂಸ್ಥಾನ ವಿಮೋಚನೆಯ ಕಥೆಯನ್ನು ಹೇಳುತ್ತಿದ್ದೇನೆ. ಇಡೀ ದೇಶಕ್ಕೆ ಸ್ವಾತಂತ್ರ್ಯ ಅಗಸ್ಟ್ ೧೫, ೧೯೪೭ ರಂದು ದೊರೆತರೆ ಹೈದರಾಬಾದ ಪ್ರದೇಶಕ್ಕೆ ಹದಿಮೂರು ತಿಂಗಳುಗಳ ನಂತರ ಸೆಪ್ಟಂಬರ ೧೭, ೧೯೪೮ ರಂದು ದೊರೆಯಿತು. ಇದಕ್ಕಾಗಿ ಅಲ್ಲಿಯ ಜನರು ಹೋರಾಡಬೇಕಾಯಿತು. ಕಾದಂಬರಿಯಲ್ಲಿ ಈ ಕಾಲಾವಧಿಯಲ್ಲಿ ನಡೆದ ಬದುಕಿನ ಸ್ಥಿತ್ಯಂತರಗಳು, ಹೋರಾಟಗಳು ಜರುಗಿದ್ದರ ಕಥನ ಇಲ್ಲಿದೆ.
ನಾನು ಹೈದರಾಬಾದ ವಿಮೋಚನೆಯ ಸಮಗ್ರ ಇತಿಹಾಸವನ್ನೇನೂ ಹೇಳುತ್ತಿಲ್ಲ, ಅದು ನನ್ನ ಉದ್ದೇಶವಲ್ಲ. ಅದಕ್ಕಾಗಿ ಇತಿಹಾಸದ ಪುಸ್ತಕಗಳಿವೆ. ನಾನು ಬರೆಯುತ್ತಿರುವದು ಕಾದಂಬರಿ. ನನ್ನ ಕಥನದ ಕೇಂದ್ರ ಕೊಪ್ಪಳ ವಿಭಾಗದ ಬಸಾಪುರ ಎಂಬ ಒಂದು ಕಾಲ್ಪನಿಕ ಹಳ್ಳಿ. ಇಲ್ಲಿಯ ವ್ಯಕ್ತಿಗಳು ನಿಜಾಮನ ಆಡಳಿತಕ್ಕೆ ಹೇಗೆ ಪ್ರತಿಕ್ರಿಯಿಸಿದರು, ಏನು ಯೋಚಿಸಿದರು, ಆ ಕಾಲದ ಬದುಕು ಹೇಗಿತ್ತು, ಸಾಮಾನ್ಯರೆಂಬವರು ಕೂಡ ಪ್ರಜಾಪ್ರಭುತ್ವ ನೆಲೆಗೊಳಿಸಲು ತಮ್ಮ ಪ್ರದೇಶವನ್ನು ಬಂಧಮುಕ್ತಗೊಳಿಸಲು ಹೋರಾಟದಲ್ಲಿ ಹೇಗೆ ತೊಡಗಿಕೊಂಡರು, ಯಾವ ಆತಂಕಗಳನ್ನು ಎದುರಿಸಿದರು ಎಂಬುದೆಲ್ಲ ಕಥನವಾಗಿ ನಿಮ್ಮ ಮುಂದಿದೆ. ಬಸಾಪುರ ನನ್ನ ಕಥನದ ಕೇಂದ್ರವಾಗಿದ್ದರೂ ಅದು ಅಲ್ಲಿಂದ ಹೊರಗೂ ಚಾಚಿಕೊಂಡಿದೆ.
-ಮಲ್ಲಿಕಾರ್ಜುನ ಹಿರೇಮಠ
-40%
About this Ebook
Information
Additional information
Author | |
---|---|
Publisher | |
Book Format | Ebook |
Category | |
Language | Kannada |
Pages | 430 |
Year Published | 2021 |
Reviews
Only logged in customers who have purchased this product may leave a review.
Reviews
There are no reviews yet.