ಕಾದಂಬರಿ
ಚಿತ್ತದ ಅಗ್ನಿಯಲ್ಲಿ ಅಹಂಕಾರ ಭಸ್ಮೀಭೂತವಾದಾಗ
ಹುಟ್ಟಿಕೊಳ್ಳುವ ಜ್ಞಾನವೇ ದೇವರು.
ಈ ಕಾದಂಬರಿಯ ಕಥಾವರಣ ದಕ್ಷಿಣ ಕನ್ನಡದ ಸುಳ್ಯ, ಪುತ್ತೂರುಗಳ ಸುತ್ತಮುತ್ತಲೇ ಇದೆಯಾದ್ದರಿಂದ ಶಿಶಿಲರು ತಮ್ಮ ಕಾಲ್ಪನಿಕ ವ್ಯಕ್ತಿ, ಸನ್ನಿವೇಶಗಳನ್ನು ನಿಜಗೊಳಿಸುವುದಕ್ಕಾಗಿ ಆ ಸುತ್ತಮುತ್ತಿನ ಭೌಗೋಳಿಕ, ಸಾಂಸ್ಕೃತಿಕ ಹಾಗೂ ಭಾಷಿಕ ವಿವರಗಳನ್ನು ಬಳಸಿಕೊಂಡಿರುವುದು ಸೊಗಡೆನಿಸುತ್ತದೆ. ಹಾಗಾಗಿ ಸದಾಶಿವರಾಯ, ಸೈಫುದ್ದೀನ್, ಶ್ರೀರಾಜ, ಶಿವರಾಮರಾವ್, ಪದ್ಮಾವತಮ್ಮ, ಕಾವ್ಯ ದೇವಪ್ಪ ಸೇರೆಗಾರ, ಮೋಹಿನಿ, ವಾಸುದೇವ ಅಡಿಗರು, ದಾಮೋದರ ಬೆಳ್ಳಪ್ಪಾಡ, ದಿಲ್ಪುಕಾರ್ ಇಬ್ರಾಹಿಂ, ಸದಾಶಿವರಾಯನ ಅಮ್ಮ, ತಮ್ಮ, ನಾದಿನಿ, ಸ್ವಾಮಿ ಯೋಗೀಶ್ವರಾನಂದ ಸರಸ್ವತಿ, ಮನೋಹರ ಪ್ರಸಾದ, ಡಾ. ಕೇಶವ, ಮೈಸೂರಿನ ಸೇಟು ಬನ್ವರಿಲಾಲ್, ಅವನ ಹೆಂಡತಿ ಮೀರಾಬಾಯಿ ಮುಂತಾದ ಎಲ್ಲಾ ಪಾತ್ರಗಳು ಕಾದಂಬರಿಕಾರರ ಕಲ್ಪನೆಯ ಹೆಸರುಗಳಾಗಿ ಉಳಿಯದೆ ಓದುಗನನ್ನು ಬೇರೆ ಬೇರೆ ರೀತಿಯಲ್ಲಿ ಕಾಡುವ ಪರಿಚಿತ ವ್ಯಕ್ತಿಗಳೇ ಆಗಿಬಿಡುತ್ತಾರೆ. ಹಾಗೆಯೇ ಬೇಕಲ, ಆತೂರು, ಪೂಮಲೆ, ಮಂಜೇಶ್ವರ ಈ ನಿಜದ ಹೆಸರುಗಳು ಕಾದಂಬರಿಯಲ್ಲಿ ಬೇರೊಂದು ಬಗೆಯಲ್ಲಿ ನಿಜಗೊಳ್ಳುತ್ತವೆ. ಕಾದಂಬರಿಯ ಕತೆಯೊಳಗೆ ಸಂಭವಿಸಿರುವ ವಿಸ್ಮಯವೇ ಅದು. ಅದು ಹಾಗೆ ಸಂಭವಿಸುವ ಹಾಗೆ ಮಾಡುವುದೇ ಶಿಶಿಲರ ಕಾದಂಬರಿ ನಿರೂಪಣೆಯ ಕೌಶಲ, ಕಲೆ : ಇಲ್ಲಿ ಭೌತಿಕ ನಿಜವನ್ನು ಮತ್ತು ಕಾಲ್ಪನಿಕ ನಿಜವನ್ನು ಕಾದಂಬರಿಯ ವಿನ್ಯಾಸದೊಳಗೆ ವಿಲೀನಗೊಳಿಸಿ ಶಿಶಿಲರು ತಮ್ಮ ಕಲಾವಂತಿಕೆಯನ್ನು ಮೆರೆಯುತ್ತಾರೆ.
ಭಾರತದ ಪ್ರಜಾಪ್ರಭುತ್ವ ನಿಜವಾದ ಅರ್ಥದಲ್ಲಿ ಉಳಿಯಬೇಕಾದರೆ ದೇಶ ಜಾತ್ಯತೀತವಾಗಬೇಕು. ಈ ನಿಟ್ಟಿನಲ್ಲಿ ದಿಟ್ಟ ಹೆಜ್ಜೆ ಇರಿಸಿದ ಸೇರೆಗಾರ ಸಮುದಾಯದ ವ್ಯಕ್ತಿಗಳನ್ನೇ ಈ ಕೃತಿಯ ನಾಯಕ ಮತ್ತು ನಾಯಕಿರಾಗಿಸಿದ್ದೇನೆ. ಜಾತ್ಯತೀತವಾದ ಈ ಸಮುದಾಯಕ್ಕೆ ನಾನು ವಂದನೆ ಸಲ್ಲಿಸುತ್ತೇನೆ.
ಈ ಕೃತಿ ಒಂದು ಹಂತದವರೆಗಿನ ಆಧ್ಯಾತ್ಮಿಕ ಸಾಧನೆಯನ್ನು ಸಮರ್ಥಿಸುತ್ತದೆ. ಆದರೆ ವ್ಯಕ್ತಿಯೊಬ್ಬನ ಆಧ್ಯಾತ್ಮಿಕ ಸಾಧನೆಯಿಂದ ಸಮಷ್ಟಿಗೇನು ಪ್ರಯೋಜನ ಎಂಬ ಪ್ರಶ್ನೆಯನ್ನೂ ಎತ್ತುತ್ತದೆ. ಅದಕ್ಕೆ ಬದಲಾಗಿ ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದವರ ಸೇವೆ ಮಾಡುವುದೇ ನಿಜವಾದ ಸಾಧನೆ ಎಂಬ ಪರಿಹಾರವನ್ನು ನೀಡುತ್ತದೆ.
Reviews
There are no reviews yet.