ಸಮಕಾಲೀನ ಭಾರತೀಯ ಲೇಖಕಿಯರಲ್ಲೇ ತುಂಬ ವಿಶಿಷ್ಟರೆಂದೂ, ಮಹತ್ವದವರೆಂದೂ ಮನ್ನಣೆ ಪಡೆದಿರುವ ಲೇಖಕಿ ವೈದೇಹಿ. ವೈದೇಹಿ ಕಳೆದ ಮೂರು ದಶಕಗಳಲ್ಲಿ ಬೆಳೆದಿರುವ ಪರಿ ಒಂದು ಸಂತಸಭರಿತ ಅಚ್ಚರಿ. ಈ ಅವಧಿಯಲ್ಲಿ ಅವರ ಕಥನಕೌಶಲ ಮತ್ತು ಕಾವ್ಯ ಪ್ರತಿಭೆಗಳು ಹೊಸ ಎತ್ತರಗಳಿಗೆ ಏರಿರುವಂತೆ ಅವರ ಲೋಕಗ್ರಹಿಕೆ ಮತ್ತು ಲೋಕದೃಷ್ಟಿಗಳೂ ಹೆಚ್ಚು ಹೆಚ್ಚು ಸೂಕ್ಷ್ಮವಾಗುತ್ತ, ಪ್ರಬುದ್ಧವಾಗುತ್ತ ಬಂದಿವೆ. ಅಷ್ಟೇ ಅಲ್ಲ, ಈ ಅವಧಿಯಲ್ಲಿ ಅವರ ಸಾಹಿತ್ಯವು ಸಾಧಿಸಿಕೊಂಡಿರುವ ಪ್ರಕಾರವೈವಿಧ್ಯವೂ ಗಮನಾರ್ಹವಾಗಿದೆ. ಸಣ್ಣಕತೆಯಿಂದ ಆರಂಭವಾಗಿ ಕಾವ್ಯ, ಕಾದಂಬರಿ, ಪ್ರಬಂಧ, ಮಕ್ಕಳ ನಾಟಕ, ಅಂಕಣಬರಹಗಳಂಥ ವಿವಿಧ ಪ್ರಕಾರಗಳಲ್ಲಿ ವಿಸ್ತರಿಸಿಕೊಂಡಿರುವ ಅವರ ಪ್ರಯೋಗಶೀಲತೆ ಮತ್ತು ಸಾಧನೆ ಎದ್ದುಕಾಣುವಂತಿವೆ. ವೈದೇಹಿ ಬರಹಗಳ ಕೇಂದ್ರ ಹೆಣ್ಣು. ಈ ಹೆಣ್ಣು ವಿವಿಧ ಜಾತಿ, ವಯಸ್ಸು, ಅಂತಸ್ತು, ಸಂವೇದನೆಗಳಲ್ಲಿ ಕಾಣಿಸಿಕೊಳ್ಳುತ್ತಾಳೆ. ವೈದೇಹಿ ಹೆಣ್ಣಿನ ಸಿದ್ಧ ಮಾದರಿಯೊಂದನ್ನು ನಮ್ಮ ಮುಂದೆ ಇಡುತ್ತಿಲ್ಲ. ತೀರಾ ಸಂಪ್ರದಾಯಸ್ಥರಿಂದ ತೀರಾ ಆಧುನಿಕರವರೆಗೆ, ಅವಿವಾಹಿತೆಯರಿಂದ ವಿಧವೆಯರವರೆಗೆ, ಗೃಹಿಣಿಯರಿಂದ ವೇಶ್ಯೆಯರವರೆಗೆ ಈ ಪ್ರಪಂಚ ಹರಡಿಕೊಳ್ಳುತ್ತದೆ. ಇಲ್ಲಿ ವಿದ್ಯಾವಂತರು, ಅವಿದ್ಯಾವಂತರು, ಕಳ್ಳರು, ಹುಚ್ಚರು ಇದ್ದಾರೆ; ಶೋಷಿಸುವವರು, ಶೋಷಣೆಗೆ ಒಳಗಾದವರು ಇದ್ದಾರೆ. ಅಂದರೆ ವೈದೇಹಿ ಕತೆಗಳಲ್ಲಿ ಹೆಣ್ಣು ವಿವಿಧ ಆಕೃತಿಗಳಲ್ಲಿ, ಭಾವಸ್ಥಿತಿಗಳಲ್ಲಿ ಕಾಣಿಸಿಕೊಳ್ಳುತ್ತಾಳೆ. ಇ ಪುಸ್ತಕವು 25 ಕಥೆಗಳನ್ನು ಒಳಗೊಂಡಿದೆ.
Ebook
ವೈದೇಹಿ ಕಥಾಗುಚ್ಛ
Author: Vaidehi
$9.99
Genre: Stories
Tags: Akshara Prakashana, ebook, Stories, vaidehi, Vaidehi Kathaguccha
About this Ebook
Information
Additional information
Category | |
---|---|
Book Format | Ebook |
Author | |
Language | Kannada |
Publisher |
Reviews
Only logged in customers who have purchased this product may leave a review.
Reviews
There are no reviews yet.