Ebook

ದಿನಚರಿಯ ಕಡೇ ಪುಟದಿಂದ…

Original price was: $1.32.Current price is: $0.79.

ದಿನಚರಿಯ ಕಡೇ ಪುಟದಿಂದ…
ಸುಮಾರು ಎರಡು ದಶಕಗಳ ತಮ್ಮ ಬರವಣಿಗೆಯುದ್ದಕ್ಕೂ ಶ್ರೀಮತಿ ಜಯಶ್ರೀಯವರು ಕಥನ ಶೈಲಿಯಲ್ಲಿ ನಡೆಸಿರುವ ಪ್ರಯತ್ನಗಳು ಮಹಿಳಾ ಕಥಾ ಪರಂಪರೆಯಲ್ಲಿ ಮಾತ್ರವಲ್ಲ, ಒಟ್ಟು ಕನ್ನಡ ಕಥನ ಪರಂಪರೆಯಲ್ಲೂ ಮುಖ್ಯವಾಗಿವೆ. ಇದರ ಮುಖ್ಯ ಗುಣವೆಂದರೆ ಅದು ದಶದಿಕ್ಕುಗಳಿಗೂ ಕುತೂಹಲದಿಂದ ಕೈಚಾಚುವ ಬಗೆಯದ್ದಲ್ಲ. ತನ್ನ ಅನುಭವಕ್ಕೆ ಆಳವಾಗಿ ದಕ್ಕಿರುವ, ತನಗೆ ಪರಿಚಿತವಾದ, ತಾನು ಅಧಿಕಾರದಿಂದ ಮಾತನಾಡಾಬಲ್ಲ ಬದುಕಿನ ಮಾದರಿಗಳನ್ನೇ ಅದು ಹಲವು ಮಗ್ಗುಲುಗಳಿಂದ ನೋಡಲು ಬಯಸುತ್ತದೆ. ಈ ನಿರ್ದಿಷ್ಟ ಮಾದರಿಯನ್ನು ಅದು ಈಗಾಗಲೆ ಮತ್ತೆ ಮತ್ತೆ ನೋಡಲಾಗಿರುವ ದೃಷ್ಟಿಕೋನದಾಚೆಗೆ ವಿಸ್ತರಿಸಲು ತೀವ್ರವಾಗಿ ಹಂಬಲಿಸುತ್ತದೆ. ಹೆಣ್ಣಿನ ಘರ್ಷಣೆಗಳ ಮೂಲ ಒಳಗಿನದೇ ಹೊರಗಿನದೇ ಅಥವಾ ಅವುಗಳ ಒಳಹೊರಗುಗಳನ್ನು ಮೂರ್ತವಾಗಿ ಬೇರ್ಪಡಿಸುವುದಾದರೂ ಸಾಧ್ಯವಿದೆಯೇ ಎಂದು ಆತಂಕ ಮತ್ತು ಆರ್ತತೆಗಳೆರಡೂ ಬೆರೆತೆ ಸ್ಥಿತಿಯಲ್ಲಿ ಇವರ ಬಹುಪಾಲು ಕಥೆಗಳಿವೆ.

ತಮ್ಮ ಬರವಣಿಗೆಯುದ್ದಕ್ಕೂ ಶ್ರೀಮತಿ ಜಯಶ್ರೀಯವರು ಕಥನ ಶೈಲಿಯಲ್ಲಿ ನಡೆಸಿರುವ ಪ್ರಯತ್ನಗಳು ಮಹಿಳಾ ಕಥಾ ಪರಂಪರೆಯಲ್ಲಿ ಮಾತ್ರವಲ್ಲ, ಒಟ್ಟು ಕನ್ನಡ ಕಥನ ಪರಂಪರೆಯಲ್ಲೂ ಮುಖ್ಯವಾಗಿವೆ. ಇದರ ಮುಖ್ಯ ಗುಣವೆಂದರೆ ಅದು ದಶದಿಕ್ಕುಗಳಿಗೂ ಕುತೂಹಲದಿಂದ ಕೈಚಾಚುವ ಬಗೆಯದ್ದಲ್ಲ. ತನ್ನ ಅನುಭವಕ್ಕೆ ಆಳವಾಗಿ ದಕ್ಕಿರುವ, ತನಗೆ ಪರಿಚಿತವಾದ, ತಾನು ಅಧಿಕಾರದಿಂದ ಮಾತನಾಡಾಬಲ್ಲ ಬದುಕಿನ ಮಾದರಿಗಳನ್ನೇ ಅದು ಹಲವು ಮಗ್ಗುಲುಗಳಿಂದ ನೋಡಲು ಬಯಸುತ್ತದೆ. ಈ ನಿರ್ದಿಷ್ಟ ಮಾದರಿಯನ್ನು ಅದು ಈಗಾಗಲೆ ಮತ್ತೆ ಮತ್ತೆ ನೋಡಲಾಗಿರುವ ದೃಷ್ಟಿಕೋನದಾಚೆಗೆ ವಿಸ್ತರಿಸಲು ತೀವ್ರವಾಗಿ ಹಂಬಲಿಸುತ್ತದೆ. ಹೆಣ್ಣಿನ ಘರ್ಷಣೆಗಳ ಮೂಲ ಒಳಗಿನದೇ ಹೊರಗಿನದೇ ಅಥವಾ ಅವುಗಳ ಒಳಹೊರಗುಗಳನ್ನು ಮೂರ್ತವಾಗಿ ಬೇರ್ಪಡಿಸುವುದಾದರೂ ಸಾಧ್ಯವಿದೆಯೇ ಎಂದು ಆತಂಕ ಮತ್ತು ಆರ್ತತೆಗಳೆರಡೂ ಬೆರೆತೆ ಸ್ಥಿತಿಯಲ್ಲಿ ಇವರ ಬಹುಪಾಲು ಕಥೆಗಳಿವೆ.
ಜಯಶ್ರೀಯವರ ಕಥೆಗಳಲ್ಲಿ ಇಷ್ಟೇ ಮುಖ್ಯವಾದ ಇನ್ನೊಂದು ಮಾದರಿಯಿದೆ.ಅದು ನಿರ್ದಿಷ್ಟವಾಗಿ ಹೆಣ್ಣಿನದು, ಹೆಣ್ಣಿನದು ಮಾತ್ರ ಎಂದು ವರ್ಗೀಕರಿಸಲಾಗದ ಮಾನವಾನುಭವದ ನೆಲೆ. ಆಧುನಿಕತೆಯೂ ಸೇರಿದಂತೆ ಇತರ ಹತ್ತು ಹಲವು ಕಾರಣಗಳಿಗಾಗಿ ಅನೂಹ್ಯ ಬದಲಾವಣೆಗಳನ್ನು ಕಂಡಿರುವ ಬದುಕು ಮತ್ತು ಮನುಷ್ಯ ಸಂಬಂಧಗಳಲ್ಲಿನ ಸಮೀಕರಣಗಳು ನಮ್ಮಲ್ಲಿ ಹುಟ್ಟಿಸಿರುವ, ಹುಟ್ಟಿಸುತ್ತಿರುವ ದಿಗ್ಭ್ರಮೆಗಳು ಜಯಶ್ರೀ ಅವರ ಕಥೆಗಳ ಮೂಲ ವಸ್ತುಗಳಲ್ಲೊಂದಾಗಿದೆ.

Additional information

Category

Author

Publisher

Language

Kannada

ISBN

9789381822395

Book Format

Ebook

Year Published

2014

Reviews

There are no reviews yet.

Only logged in customers who have purchased this product may leave a review.