Availability: In StockPrintbook

ಸೂತ್ರಧಾರ

Author: Amitabh Bagchi

Original price was: $2.10.Current price is: $1.90.

ಸಂಸಾರದ ಜವಾಬ್ದಾರಿ ಮತ್ತು ಸರ್ಕಾರಿ ಉದ್ಯೋಗ ಇವೆರಡರ ನಿರ್ವಹಣೆಯಲ್ಲಿ ಏಕರೂಪದ ಮೌಲ್ಯಗಳು ಇರಬೇಕಾಗಿಲ್ಲ ಎಂಬ ಆಧುನಿಕ ಕಾಲದ ಧ್ಯೇಯವನ್ನು ಶೋಧಿಸುತ್ತ, ಅದರ ಕರಾಳ ಪದರಗಳನ್ನು ಸಶಕ್ತವಾಗಿ ಬಿಚ್ಚಿಡುವ ಕಾದಂಬರಿ “ಸೂತ್ರಧಾರ” (ದ ಹೌಸ್ ಹೋಲ್ಡರ್).

ಸಂಸಾರದ ಜವಾಬ್ದಾರಿ ಮತ್ತು ಸರ್ಕಾರಿ ಉದ್ಯೋಗ ಇವೆರಡರ ನಿರ್ವಹಣೆಯಲ್ಲಿ ಏಕರೂಪದ ಮೌಲ್ಯಗಳು ಇರಬೇಕಾಗಿಲ್ಲ ಎಂಬ ಆಧುನಿಕ ಕಾಲದ ಧ್ಯೇಯವನ್ನು ಶೋಧಿಸುತ್ತ, ಅದರ ಕರಾಳ ಪದರಗಳನ್ನು ಸಶಕ್ತವಾಗಿ ಬಿಚ್ಚಿಡುವ ಕಾದಂಬರಿ “ಸೂತ್ರಧಾರ” (ದ ಹೌಸ್ ಹೋಲ್ಡರ್). ಭ್ರಷ್ಟಾಚಾರ ಎನ್ನುವುದು ಸರ್ಕಾರಿ ಇಲಾಖೆಗಳ ಕಾರ್ಯ ವಿಧಾನ ಮತ್ತು ಅಲ್ಲಿನ ಸಿಬ್ಬಂದಿಯ ಜೀವನ ವಿಧಾನವೇ ಆಗಿರುವಾಗ, ಒಬ್ಬ ಉನ್ನತ ಅಧಿಕಾರಿಯ ಆಪ್ತನಾಗಿರುವ ನರೇಶ್ ಕುಮಾರ್ ಅವೆಲ್ಲದರಲ್ಲಿ ಪಾಲುದಾರ ಆಗಿರುವುದು ವಿಶೇಷವೇನಲ್ಲ. ಆದರೆ ಕುಟುಂಬದ ಮಟ್ಟಿಗೆ ನಿಷ್ಠಾವಂತ ಯಜಮಾನನಾದ ತಾನು, ಮಡದಿ ಮಕ್ಕಳ ಯೋಗಕ್ಷೇಮಕ್ಕಾಗಿ ಲಂಚ ಪಡೆಯುವುದು ಅನಿವಾರ್ಯ ಎಂಬ ಪರೋಕ್ಷ ಸಮರ್ಥನೆ ಅವನಿಗಿದೆ. ಆದರೆ ತನ್ನ ವಲಯದಾಚೆಗೆ ಎಲ್ಲವೂ ನೇರಾನೇರ ಇರಬೇಕು ಎಂಬ ಅಸಹಜ ನಿರೀಕ್ಷೆಯೂ ಅವನಲ್ಲಿದೆ. ಸಾಂಸಾರಿಕ ಜೀವನದಲ್ಲಿ ಎದುರಾಗುವ ಆಸ್ಪತ್ರೆಯ ಅವ್ಯವಹಾರ, ಪೊಲೀಸ್ ಅಧಿಕಾರಿಯ ಹಣದ ಬೇಡಿಕೆ, ಮಗನ ಅವಾಂತರ ಎಲ್ಲವೂ ಅವನನ್ನು ಕೆರಳಿಸುತ್ತವೆ. ಆದರೆ ಅಂಥ ಆಕ್ರೋಶಕ್ಕೆ ಬೇಕಾದ ನೈತಿಕ ನೆಲೆಗಟ್ಟು ಅವನಲ್ಲಿ ಇರುವುದೇ ಇಲ್ಲ. ಏಕೆಂದರೆ ಅವ್ಯವಹಾರ ಮತ್ತು ಭ್ರಷ್ಟಾಚಾರ ಅನ್ನುವುದಕ್ಕೆ ಸಂಸಾರ ಮತ್ತು ಸರ್ಕಾರಗಳಲ್ಲಿ ವಿಭಿನ್ನ ವ್ಯಾಖ್ಯಾನಗಳು ಇರಲು ಸಾಧ್ಯವಿಲ್ಲ. ಸಮಕಾಲೀನ ಸಮಾಜದಲ್ಲಿರುವ ನೈತಿಕತೆ, ನಿಷ್ಠಾವಂತಿಕೆಗಳ ಅಭಾವವನ್ನು ಒಬ್ಬ ವ್ಯಕ್ತಿಯ ಜೀವನ ಮತ್ತು ಒಂದು ಕಚೇರಿಯ ವ್ಯವಹಾರ ಇವುಗಳ ನೆಲೆಯಲ್ಲಿ ಈ ಕಾದಂಬರಿ ದಿಟ್ಟವಾಗಿ ತೆರೆದಿಡುತ್ತದೆ.

Additional information

Author

Translator

Prema N Rao

Publisher

Book Format

Printbook

Language

Kannada

Pages

168

Year Published

2021

Category

Reviews

There are no reviews yet.

Only logged in customers who have purchased this product may leave a review.