ಪಡ್ಡಾಯಿ ಅಭಯ ಸಿಂಹ ಅವರ ನಾಲ್ಕನೆಯ ಚಿತ್ರ. ಮೊದಲ ಮೂರು ಚಿತ್ರಗಳು ಕನ್ನಡದಲ್ಲಿದ್ದರೆ, ಈ ಚಿತ್ರ ತುಳು ಭಾಷೆಯಲ್ಲಿದೆ. ರಾಷ್ಟ್ರ ಪ್ರಶಸ್ತಿ ಹಾಗೂ ರಾಜ್ಯ ಪ್ರಶಸ್ತಿ ಪಡೆದ ಈ ಚಿತ್ರವು ಈ ತನಕದ ಅವರ ಚಿತ್ರಯಾನದಲ್ಲಿ ಒಂದು ಮಹತ್ವದ ಹೆಜ್ಜೆ. ನಮ್ಮ ತುಳು ಸಿನೆಮಾ ‘ಪಡ್ಡಾಯಿ’ ಹಲವು ಕಾರಣಗಳಿಗೆ ನನ್ನ ಮಟ್ಟಿಗೆ ಒಂದು ವಿಶಿಷ್ಟ ಅನುಭವ. ಈ ಅನುಭವವನ್ನು ದಾಖಲೀಕರಿಸುವ ಪ್ರಯತ್ನದ ಫಲವಾಗಿ ಈ ಪುಸ್ತಕ ಹೊರತರುವ ಯೋಚನೆ ಆರಂಭವಾಯಿತು. ಹಾಗೆಯೇ, ನಮ್ಮ ಚಿತ್ರಕಥೆಯ ಹೂರಣವನ್ನು ಇನ್ನೊಂದಿಷ್ಟು ಬಿಡಿಸಿಡುವ ಪ್ರಯತ್ನ ಇದು. ನಮ್ಮ ಸಿನೆಮಾದ, ಹಿಂದಿನ ಯೋಚನೆಯನ್ನು ಹಂಚಿಕೊಳ್ಳುವ ಹಾಗೂ ಇನ್ನಷ್ಟು ವಿಮರ್ಶೆಗೆ ತೆರೆದುಕೊಳ್ಳುವ ಪ್ರಯತ್ನವೂ ಇದಾಗಿದೆ. ಸಾಹಿತ್ಯ ಕೃತಿಯೊಂದನ್ನು ಚಲನಚಿತ್ರಕ್ಕೆ ಅಳವಡಿಸುವಾಗ, ಎರಡು ಮಾರ್ಗಗಳನ್ನು ಅನುಸರಿಸುವುದನ್ನು ನಾವು ನೋಡುತ್ತಾ ಬಂದಿದ್ದೇವೆ. ಮೂಲ ಸಾಹಿತ್ಯ ಕೃತಿಗೆ ನಿಷ್ಠವಾಗಿದ್ದು, ಅಲ್ಲಿ ಶಬ್ದಗಳ ಮೂಲಕ ವ್ಯಕ್ತವಾದ ಭಾವನೆಗಳನ್ನು, ಘಟನಾವಳಿಗಳನ್ನು ದೃಶ್ಯ ಬಿಂಬಗಳಲ್ಲಿ ಪುನರ್ರಚಿಸುವುದು ಒಂದು ಮಾರ್ಗ. ಈ ರೀತಿಯ ಅಳವಡಿಕೆಯಲ್ಲಿ, ಬಿಂಬಗಳ ಆಯ್ಕೆಯಲ್ಲಿ ನಿರ್ದೇಶಕ ಸ್ವಾತಂತ್ರ್ಯ ತೆಗೆದುಕೊಳ್ಳುತ್ತಿರುತ್ತಾನೆ. ಆದರೆ ಕೃತಿಯ ಪ್ರಬಂಧ ಧ್ವನಿ, ವೈಚಾರಿಕ ಹಾಗೂ ತಾತ್ವಿಕ ನೆಲೆಗಟ್ಟು ಸಾಹಿತ್ಯ ಕೃತಿ ರಚಿಸಿದ ಸಾಹಿತಿಯದ್ದೇ ಆಗಿರುತ್ತದೆ. ಇದಕ್ಕಿಂತ ಭಿನ್ನವಾದ ಇನ್ನೊಂದು ಮಾರ್ಗವೂ ಇದೆ. ಮೂಲ ಸಾಹಿತ್ಯ ಕೃತಿಯನ್ನು ಆಕರವಾಗಿ ಗಣಿಸಿ, ಅದರಿಂದ ಕವಲೊಡೆದ ಇನ್ನೊಂದೇ ಕಥಾನಕವನ್ನು ಕಟ್ಟುವುದು. ಇದು ಮೂಲ ಸಾಹಿತ್ಯ ಕೃತಿಯಲ್ಲಿ ಇಲ್ಲದ ವಿವರಗಳನ್ನು, ದೃಶ್ಯಗಳನ್ನು, ಪಾತ್ರಗಳನ್ನು ಸೇರಿಸುವಂತಹಾ ಮೇಲ್ಪದರದ ಬದಲಾವಣೆಯೂ ಆಗಿರಬಹುದು, ಅಥವಾ ಚಿತ್ರದ ಪ್ರಬಂಧ ಧ್ವನಿ, ಅದರ ಕಾಣ್ಕೆ, ವೈಚಾರಿಕ ಹಾಗೂ ತಾತ್ವಿಕ ನೆಲೆಗಟ್ಟುಗಳು ಮುಂತಾಗಿ ಒಳಪದರದಲ್ಲೂ ಬದಲಾವಣೆ ಆಗಿರಬಹುದು. ಈ ಎರಡು ಮಾರ್ಗಗಳಲ್ಲಿ ನಾನು ಇಷ್ಟಪಟ್ಟು ಆಯ್ಕೆ ಮಾಡಿಕೊಳ್ಳುವುದು ಎರಡನೆಯ ಮಾರ್ಗವನ್ನೇ. ಯಾಕೆಂದರೆ, ಇಲ್ಲಿ ಚಿತ್ರ ನಿರ್ದೇಶಕ / ಚಿತ್ರ ಕಥಾ ಲೇಖಕ, ಮೂಲ ಕೃತಿಯಲ್ಲಿ ಪ್ರತ್ಯಕ್ಷವಾಗಿರದ ಕೆಲವು ನೆಲೆಗಳನ್ನು ಅನಾವರಣ ಮಾಡುವುದರಿಂದ, ಆತನದೇ ಆದ ತಾತ್ವಿಕತೆ ಏನು ಅನ್ನುವುದು ನಮ್ಮ ಗ್ರಹಿಕೆಗೆ ನಿಲುಕುತ್ತದೆ. (ಮೂಲ ಲೇಖಕನ ಕಾಣ್ಕೆ, ವೈಚಾರಿಕ ಹಾಗೂ ತಾತ್ವಿಕ ನೆಲೆಗಟ್ಟುಗಳು ಏನು ಎನ್ನುವುದನ್ನು ಮೂಲ ಕೃತಿಯನ್ನೇ ಓದುವುದರಿಂದ ತಿಳಿದುಕೊಂಡಿರುತ್ತೇವಲ್ಲ. ಇನ್ನೊಂದು ಮಾಧ್ಯಮದ ಮೂಲಕ ಅದನ್ನೇ ಹೇಳುವ ಅಗತ್ಯ ಏನು?) ಈ ರೀತಿಯ ಅವತರಣಿಕೆಯು / ರೂಪಾಂತರವು, ಇನ್ನೊಂದು ರೀತಿಯ ಅವಲೋಕನಕ್ಕೂ ಹಾದಿಮಾಡಿಕೊಡುತ್ತದೆ. ಸಿನೆಮಾ ಕೃತಿ, ಮೂಲಕೃತಿಯೊಂದಿಗೆ ಎಲ್ಲಿ ಮತ್ತು ಹೇಗೆ ಅನುಸಂಧಾನಗೊಳ್ಳುತ್ತದೆ, ಎಲ್ಲಿ ಭಿನ್ನ ಧ್ವನಿ ಪಡೆದುಕೊಳ್ಳುತ್ತದೆ ಎಂಬ ಅಂತರಪಠ್ಯೀಯ ಶಿಸ್ತಿನಿಂದ ತುಲನೆ ಮಾಡಬಹುದು. ಆಗ ಅದು ಹೊಸದೊಂದು ಗ್ರಹಿಕಾ ಕ್ರಮವನ್ನೇ ತೆರೆದಿಡುತ್ತದೆ.
Ebook
ಪಡ್ಡಾಯಿ
Author: Abhay Simha
$8.00
Genre: Stories
Tags: Abhay Simha, Akshara Prakashana, ebook, Paddayi, Stories
About this Ebook
Information
Additional information
Author | |
---|---|
Publisher | |
Book Format | Ebook |
Language | Kannada |
Category |
Reviews
Only logged in customers who have purchased this product may leave a review.
Reviews
There are no reviews yet.