ಮರಾಠಿಯಿಂದ ಕನ್ನಡಕ್ಕೆ ಅನುವಾದಿಸಿದ ಆಯ್ದ ಹತ್ತು ಕಥೆಗಳು

Original price was: ₹210.00.Current price is: ₹126.00.

ಕನ್ನಡ ಸಾಹಿತ್ಯದಲ್ಲಿ ಕಥಾ ಪ್ರಕಾರಕ್ಕೆ ಅದರದೇ ಆದಂಥ ಒಂದು ವಿಶೇಷ ಸ್ಥಾನಮಾನವಿದೆ. ಕಥೆ ಯಾರಿಗೆ ಇಷ್ಟವಿಲ್ಲ? ಆಬಾಲವೃದ್ಧಾದಿಯಾಗಿ ಕತೆ ಕೇಳುವ, ಓದುವ ಹಂಬಲವಿದ್ದವರೇ ಎಲ್ಲರೂ. ಲೇಖಕಿ ಮಾಲತಿ ಮುದಕವಿಯವರು ಈ ಹತ್ತೂ ಕಥೆಗಳನ್ನು ಮೂಲ ಮರಾಠಿ ಕಥೆಗಳ ಭಾವಕ್ಕೆ ಎಳ್ಳಷ್ಟೂ ಧಕ್ಕೆಯಾಗದ ರೀತಿಯಲ್ಲಿ ಬಹಳ ಪ್ರಬುದ್ಧತೆಯಿಂದ ಕನ್ನಡೀಕರಿಸಿದ್ದಾರೆ. ಓದುಗರನ್ನು ತನ್ನ ಶೈಲಿಯಲ್ಲಿ ಹಿಡಿದಿಡುವ ಸಾಮರ್ಥ್ಯವೇ  ವಿಶೇಷ ಶಕ್ತಿ ಎಂದರೆ ತಪ್ಪಾಗಲಾರದು.  ಕಥೆಗಳು ಹುಟ್ಟುವುದು ಭಾಷೆಗಳಲ್ಲಲ್ಲ, ಪಂಗಡಗಳಲ್ಲಲ್ಲ.. ದೇಶಗಳಲ್ಲಲ್ಲ.. ಇಡಿಯ ವಿಶ್ವದ ಜನರ ಮನದಲ್ಲಿ.. ಅವು ವ್ಯಕ್ತಗೊಳ್ಳುವುದು ಮಾತ್ರ ಅವರವರ ಭಾಷೆಗಳಲ್ಲಿ. ಆಯಾ ಜನರು ನೋಡುವ ದೃಷ್ಟಿಕೋನಗಳಿಂದ ಕಥೆಗಳು ವೈವಿಧ್ಯತೆಯನ್ನು ಪಡೆಯುತ್ತವೆ.
ಬದಲಾವಣೆಗಳು, ಸ್ಥಿತ್ಯಂತರಗಳು ಜನರ ಪ್ರಗತಿಯ ದ್ಯೋತಕವಾಗಬಹುದು.. ಅದರಂತೆ ಒಮ್ಮೊಮ್ಮೆ ಪ್ರಗತಿ ಪಥದಲ್ಲಿಯ ಅಡೆತಡೆಗಳೂ ಆಗಬಹುದು.. ಹೀಗೆಯೇ ಒಮ್ಮೆ ಆ ಕಡೆ, ಒಮ್ಮೆ ಈ ಕಡೆಗೆ ತೋಲಾಡುತ್ತ ಹಗ್ಗ ಜಗ್ಗಾಟದಲ್ಲಿ ತೊಡಗಿ ತನ್ನ ಮೆಟ್ಟಿಲುಗಳನ್ನು ತಾನೇ ನಿರ್ಮಿಸುತ್ತ ಹೊರಡುವುದೇ ಜೀವನ.. ನಮ್ಮ ಪೀಳಿಗೆಯ ಜನರಲ್ಲಿಯೂ ಇತ್ತೀಚೆಗೆ ಸಾಕಷ್ಟು ಈ ಮಟ್ಟಿನ ಬದಲಾವಣೆಗಳಾಗಿವೆ, ಆಗುತ್ತಲಿವೆ. ಜೀವನವು ಹಳಿಯ ಮೇಲಿನ ಬದುಕಾದಲ್ಲಿ ಕಥೆಗಳು ಹುಟ್ಟಲಾರವು.. ಬಡತನ, ಸಿರಿವಂತಿಕೆ, ಸಂಸಾರದ ಮಿಲನ, ವಿರಹಗಳು, ಪ್ರೇಮ-ಕಾಮಗಳು, ಹಿರಿಯರ ಹಾಗೂ ಚಿಕ್ಕವರ ನಡುವಿನ ಸಂಘರ್ಷಗಳು, ನಂತರದ ಕ್ರಾಂತಿ.. ಇವುಗಳನ್ನು ಕಂಡುಂಡ ಜೀವಗಳೋ, ಆ ಬದಲಾವಣೆಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವವರು ಅನುಭವಿಸಿದ ನೋವು-ನಲಿವುಗಳನ್ನು ಕಂಡವರು ಕಂಡಂತೆ ದಾಖಲಿಸದೆ ತಮ್ಮ ಲೇಖನಿಯಿಂದ ಮೆರುಗಿತ್ತು ಬರೆದವುಗಳೋ ಕಥೆಗೆ ಕಾರಣವಾಗುತ್ತವೆ.

Additional information

Pages

204

Language

Kannada

Publisher

Year Published

2022

Translator

Malathi Mudakavi

Reviews

There are no reviews yet.

Only logged in customers who have purchased this product may leave a review.