Availability: In StockPrintbook

ಲ್ಯಾಪ್ ಟಾಪ್ ಪರದೆಯಾಚೆಗೆ

Original price was: $1.68.Current price is: $1.51.

ಲ್ಯಾಪ್ ಟಾಪ್ ಪರದೆಯಾಚೆಗೆ

ಈ ಪುಸ್ತಕವನ್ನು ಸಂಯುಕ್ತಾ ಪುಲಿಗಲ್ ಅವರು ಬರೆದ ಕೆಲವು ಲೇಖನಗಳನ್ನು ಹೊಂದಿದೆ

ಲ್ಯಾಪ್ ಟಾಪ್ ಪರದೆಯಾಚೆಗೆ:

ಪುಸ್ತಕದ ಹೆಸರು ಹುಡುಕುತ್ತಿದ್ದಾಗ ನನ್ನ ಮನಸ್ಸಿಗೆ ಬಂದ ಹೆಸರುಗಳಲ್ಲಿ ಒಂದು ‘ಲ್ಯಾಪ್ ಟಾಪ್ ಪರದೆಯಾಚೆಗೆ’. ಇದಕ್ಕೆ ಎರಡು ಕಾರಣಗಳು, ಮೊದಲನೆಯದು ವೃತ್ತಿ. ಕಂಪ್ಯೂಟರ್ ಜಗತ್ತಿನಲ್ಲಿ, ಬೈನರಿಗಳ ಕಣ್ಣಳತೆಯಲ್ಲಿ, ಲ್ಯಾಪ್ಟಾಪ್ನ ಪರದೆಗೆ ಕಣ್ಣು ಕೀಲಿಸಿ ಕೆಲಸ ಮಾಡುವ ಇವಳು ತನ್ನ ಕಣ್ಣೋಟವನ್ನು ಅದಕ್ಕೇ ಮಾತ್ರ ಸೀಮಿತಗೊಳಿಸಿಕೊಳ್ಳದೆ, ಅದರಾಚೆಗೂ ದೃಷ್ಟಿ ಹರಿಸಿದ್ದರಿಂದ ಹುಟ್ಟಿಕೊಂಡ ಬರಹಗಳು ಇವು. ಹಾಗೆ ಚೌಕಟ್ಟಿನಾಚೆಗೂ ನೋಡಬಲ್ಲಳು, ಚೌಕಟ್ಟುಗಳನ್ನು ನಿರಾಕರಿಸಬಲ್ಲಳು ಎನ್ನುವುದು ಈಕೆಯ ಪ್ಲಸ್ ಪಾಯಿಂಟ್. ಆ ಹೆಸರು ಮನಸ್ಸಿಗೆ ಬರಲು ಇನ್ನೊಂದು ಕಾರಣ, ಇಂದು ನಾವು ಬದುಕುತ್ತಿರುವ ಕಾಲಮಾನ. ಎಲ್ಲವನ್ನೂ ಬೈನರಿಗಳಲ್ಲೇ ನೋಡುವ ಕನ್ನಡಕ ಎಲ್ಲರ ಮೂಗನ್ನೂ ಏರಿ ಕೂತಿದೆ. ಆ ಬೈನರಿಯ ಕನ್ನಡಕ ನಮ್ಮ ನೋಟವನ್ನು ವಿಸ್ತಾರಗೊಳಿಸುವ ಬದಲು ಸೀಮಿತಗೊಳಿಸುತ್ತಿದೆ. `ಬಲ’ ಅಲ್ಲ ಅಂದರೆ ಅದು `ಎಡ’ವೇ ಹೌದು, `ಎಡ’ ಅಲ್ಲ ಎಂದರೆ ಅದು ‘ಬಲ’ವೇ ಹೌದು, ನೀನು ನಮ್ಮ ಜೊತೆಗೆ ನಿಲ್ಲದಿದ್ದರೆ, ನಮ್ಮ ಶತೃಗಳ ಜೊತೆಗೇ ಇರುವೆ ಎಂದು ಅಂದುಕೊಳ್ಳುವ ಕಾಲಘಟ್ಟ ಇದು. ಕಪ್ಪು ಬಿಳಿಗಳ ಬೈನರಿಯಲ್ಲಿ ನಾವು ಕಾಮನಬಿಲ್ಲಿನ ಎಲ್ಲಾ ಬಣ್ಣಗಳನ್ನೂ ಕಳೆದುಕೊಳ್ಳುತ್ತಿದ್ದೇವೆ. ಎಲ್ಲೋ ಓದಿದ ನೆನಪು, ಯಾರ ಮಾತು ಎನ್ನುವುದನ್ನು ಮರೆತಿದ್ದೇನೆ, `ನೀನು ಯಾರನ್ನು ತೀವ್ರವಾಗಿ ದ್ವೇಷಿಸುತ್ತಾ ಹೋಗುವೆಯೋ, ವರ್ಷಗಳು ಕಳೆದಂತೆ ನೀನು ಅದೇ ವ್ಯಕ್ತಿ ಆಗಿಬಿಡುವೆ’ ಎಂದು. ಈಗ ಅದೇ ಆಗುತ್ತಿದೆ, ಯಾವುದನ್ನು ನಾವು ಖಂಡಿಸುತ್ತಿದ್ದೆವೋ, ಈಗ ಇನ್ನೊಂದು ಸ್ವರೂಪದಲ್ಲಿ ನಾವು ಅದೇ ಮನೋಭಾವವನ್ನು ಪೋಷಿಸುತ್ತಿದ್ದೇವೆ. ಈ ಅಪಾಯವನ್ನು ಪ್ರಯತ್ನಪೂರ್ವಕವಾಗಿಯಾದರೂ ತಪ್ಪಿಸಿಕೊಳ್ಳಬೇಕಾದ ಜರೂರತ್ತಿದೆ. ಆ ಅಪಾಯದಿಂದ ಸಂಯುಕ್ತೆ ತಪ್ಪಿಸಿಕೊಂಡಿದ್ದಾಳೆ ಎನ್ನುವುದು ನನ್ನ ಖುಷಿ. ಯಾವುದೇ ಕನ್ನಡಕವನ್ನು ಏರಿಸಿಕೊಳ್ಳದೆ ಈಕೆ ಜಗವನ್ನು ನೋಡಬಲ್ಲಳು ಮತ್ತು ಯಾವುದೇ ಪೂರ್ವಾಗ್ರಹವಿಲ್ಲದೆ ಜಗತ್ತಿನ ಮಾತನ್ನು ಕೇಳಬಲ್ಲಳು. ತಮ್ಮ ಮಾತುಗಳ ಸದ್ದನ್ನೇ ಮೋಹಿಸುವವರ ನಡುವೆ ಈಕೆ ಆಡಿದ ಮಾತುಗಳು ಮತ್ತು ಆಡದೆ ಉಳಿದ ಮಾತುಗಳು ಎರಡನ್ನೂ ಆಲಿಸಬಲ್ಲರು ಎನ್ನುವುದು ಈ ಪುಸ್ತಕದ ಬರಹಗಳನ್ನು ಓದುವಾಗ ಅರ್ಥವಾಗುತ್ತದೆ.

Additional information

Author

Publisher

Book Format

Printbook

Language

Kannada

Category

Reviews

There are no reviews yet.

Only logged in customers who have purchased this product may leave a review.