ಕತೆ ಕತೆ ಕಾರಣ
‘ಕತೆ ಕತೆ ಕಾರಣ’ ಸಂಕಲವು  ಹನ್ನೆರಡು ಕಥೆಗಳನ್ನು ಒಳಗೊಂಡಿದೆ. ಈ ಕಥೆಗಳ ಹೆಸರುಗಳಲ್ಲಿ ವೈದೇಹಿ ಪುರಾಣ, ಇತಿಹಾಸ, ಆಖ್ಯಾನ ಎಂಬ ಶಬ್ದಗಳನ್ನು ಬಳಸಿರುತ್ತಾರೆ; ಸ್ಥಳಪುರಾಣ, ವ್ಯಕ್ತಿಪುರಾಣ, ವಲಸೆಪುರಾಣ, ಧರ್ಮಸೂಕ್ಷ್ಮ ಪುರಾಣ, ಬಾಕಿ ಇತಿಹಾಸ, ಆಖ್ಯಾನ ಪ್ರತ್ಯಾಖ್ಯಾನ, ಕತೆ ಕತೆ ಕಾರಣ ಇತ್ಯಾದಿ. ಈ ಹೆಸರುಗಳೆಲ್ಲ ನಮ್ಮ ಪುರಾತನ ಮೌಖಿಕ ಕಥನಸಂಪ್ರದಾಯದ ಸೂಚನೆ ನೀಡುವಂತೆ ಇರುತ್ತವೆ. ಇತಿಹಾಸ, ಪುರಾಣಗಳ ಕಥನಕ್ರಮದೊಂದಿಗೆ ತುಂಬ ನಿಕಟವೆನಿಸುವ ಹಾಗೆ ಈ ಕಥೆಗಳು ಬಿತ್ತರಗೊಳ್ಳುತ್ತವೆ. ಇಲ್ಲಿ ಮುಖ್ಯ ಕಥಕರು-ಕತೆಹೇಳುವವರು ಇದ್ದಾರೆ. ಸುತ್ತಲೂ ಕುಳಿತು ಆಲಿಸುವವರಿದ್ದಾರೆ. ಕಥೆಗಳು ಮುಖ್ಯವಾಗಿರುವ ಹಾಗೆ ಕಥನಕ್ರಮವೂ ಇಲ್ಲಿ ಚರ್ಚೆಗೆ ಬರುವುದನ್ನು ಕಾಣಬಹುದು. ಕಥೆ-ಕಥನಗಳೆರಡೂ ಹೀಗೆ ಕೇಂದ್ರವಾಗಿರುವುದು ವೈದೇಹಿಯವರ ರಚನೆಗಳಲ್ಲಿ ಅಪರೂಪ.

Additional information

Category

Author

Publisher

Language

Kannada

Book Format

Ebook

Year Published

2016

Reviews

There are no reviews yet.

Only logged in customers who have purchased this product may leave a review.