ಮಾಲತಿಯವರ ಮೂರನೆಯ ಕಥಾಸಂಕಲನವಾದ ‘ಜೀವನ ಸಂಧ್ಯಾರಾಗ’. ಈ ಸಂಕಲನದಲ್ಲಿ 25ಕ್ಕೂ ಮಿಕ್ಕಿ ಕಥೆಗಳಿವೆ. ಕಥನ ಶೈಲಿ ಲೇಖಕಿಗೆ ಕರಗತವಾಗಿದೆ. ವೈವಿಧ್ಯಮಯ ಕಥಾ ವಸ್ತು, ಅದರ ನಿರ್ವಹಣೆ, ಅವುಗಳಿಗೆ ಕೊಡುವ ತಿರುವಿನಿಂದಾಗಿ ಆಶಾದಾಯಕವಾಗಿವೆ. ಲೇಖಕಿ ಸಾಮಾಜಿಕವಾದ ವಸ್ತುಗಳನ್ನೊಳಗೊಂಡ ಕತೆಗಳೊಂದಿಗೆ, ವೈಜ್ಞಾನಿಕ ಹಾಗೂ ಪತ್ತೆದಾರಿ ಕತೆಗಳನ್ನೂ ಬರೆದಿದ್ದು ಅವರ ಅನುಭವದ ಹರಹನ್ನು ದಾಟಿ, ತಂತ್ರಜ್ಞಾನ ಯುಗದ ಹೊಸ ಆಯಾಮಗಳನ್ನು ಕತೆಗಳಲ್ಲಿ ಬಳಸಿಕೊಂಡಿದ್ದಾರೆ.
ಮಾಲತಿಯವರು ಸಾಹಿತ್ಯ ರಚನೆಗೆ ಬೇಕಾದ ಅನುಭವ ಪರಿಪಕ್ವತೆಯನ್ನು ಹೊಂದಿಯೇ ಕತೆಗಳನ್ನು ಬರೆಯಲು ತೊಡಗಿಸಿಕೊಂಡಿದ್ದು, ಅವರು ಕತೆಗಳಿಗೆ ಆರಿಸಿಕೊಂಡ ಕಥಾವಸ್ತು, ಶೈಲಿ, ಭಾಷೆಯ ಮೇಲೆ ಸಾಧಿಸಿದ ಪರಿಣತಿ-ಪ್ರಬುದ್ಧತೆಯಿಂದಾಗಿ ಅವರ ಕತೆಗಳು ಓದಿಸಿಕೊಂಡು ಹೋಗುತ್ತವೆ. ಬದಲಾದ ಸಮಾಜ ಹಾಗೂ ಕೌಟುಂಬಿಕ ಮೌಲ್ಯಗಳು, ದಾಂಪತ್ಯದ ಸಂಬಂಧಗಳು ಭಾರತೀಯ ಸಂದರ್ಭದಲ್ಲಿ ಅರ್ಥವಂತಿಕೆಯನ್ನು ಉಳಿಸಿಕೊಳ್ಳಲು ಪ್ರಯತ್ನಿಸುತ್ತವೆ.
‘ಸಮರಸವೇ ಜೀವನ’ ದಾಂಪತ್ಯದಲ್ಲಿ ತಿಳಿವಳಿಕೆ ಮತ್ತು ಪ್ರೀತಿ ವಿಶ್ವಾಸದ ಸಾಮರಸ್ಯವನ್ನು ಒತ್ತಿ ಹೇಳುತ್ತದೆ ‘ಅಪ್ಪನ ಸಾವಿತ್ರಿ’. ಕೆಲಸಕ್ಕಾಗಿ ಬಂದ ಲಕ್ಷ್ಮಿ ಮನೆಯ ಒಡೆಯನ ಹೆಂಡತಿ ತೀರಿದಾಗ, ತಂದೆಯಂತಿದ್ದ ಮನೆಯೊಡೆಯನ ಕಾಮಕ್ಕೆ ಬಲಿಯಾಗುತ್ತಾಳೆ. ಆದರೆ ಅನಾಥಳಾದ ಆಕೆ ಮಕ್ಕಳಿಂದ ದೂರವಿದ್ದ ಒಡೆಯನೊಂದಿಗೆ ತನ್ನ ಜೀವನವನ್ನು ರಾಜಿ ಮಾಡಿಕೊಳ್ಳುತ್ತಾಳೆ. ‘ಹ್ಯಾಪಿ ಬರ್ತ್ ಡೇ ಟು ಯು’ ಕತೆಯ ಕಥಾವಸ್ತು ಉಗ್ರಗಾಮಿಗಳ ಆಕ್ರಮಣದಿಂದ ಭಾರತೀಯ ಪ್ರವಾಸಿಗರು ವಿಮಾನದಲ್ಲಿ ಅನುಭವಿಸಿದ ಭಯ, ಆತಂಕಗಳನ್ನು ಮತ್ತು ಸಂಭವಿಸಿದ ದುರಂತವನ್ನು ಕುತೂಹಲಕಾರಿಯಾಗಿ ಚಿತ್ರಿಸುತ್ತದೆ. ‘ಬರಲಿವೆ ಮಾನವರೂಪಿ ಪ್ರಾಣಿಗಳು’ ವೈದ್ಯಕೀಯ ಕ್ಷೇತ್ರದ ಸಂಶೋಧನೆಯನ್ನು ಚಿತ್ರಿಸುವ ವೈಜ್ಞಾನಿಕ ಕತೆ. ‘ವೇನಿ ನಾ ಬಂದೆ’, ‘ನಮ್ಮಮ್ಮ ಸುಂದರಿ’ ಕತೆಗಳು ಮಾನವೀಯ ಅಂತಃಕರಣವನ್ನು ಮಿಡಿಯುತ್ತವೆ. ತಾಯಿ-ಮಗುವಿನ ಕರುಳಿನ ಸಂಬಂಧಗಳು ಎಲ್ಲ ಸಂಬಂಧಗಳನ್ನೂ ಮೀರಿವೆ ಎನ್ನುವುದನ್ನು ತೋರಿಸುತ್ತವೆ.
-40%
Ebook
ಜೀವನ ಸಂಧ್ಯಾರಾಗ
Author: Malati Mudakavi
₹250.00 Original price was: ₹250.00.₹150.00Current price is: ₹150.00.
ಮಾಲತಿಯವರ ಮೂರನೆಯ ಕಥಾಸಂಕಲನವಾದ ‘ಜೀವನ ಸಂಧ್ಯಾರಾಗ’. ಈ ಸಂಕಲನದಲ್ಲಿ 25ಕ್ಕೂ ಮಿಕ್ಕಿ ಕಥೆಗಳಿವೆ.
Genre: Stories
Tags: ebook, Jeevana Sandhya Raaga, Malati Mudakavi, Stories
About this Ebook
Information
Additional information
Author | |
---|---|
Publisher | |
Book Format | Ebook |
Language | Kannada |
Pages | 314 |
Year Published | 2018 |
Category |
Reviews
Only logged in customers who have purchased this product may leave a review.
Reviews
There are no reviews yet.