ಜಯಂತ ಕಾಯ್ಕಿಣಿ ಕಥಾಗುಚ್ಛ
ಜಯಂತ ಕಾಯ್ಕಿಣಿ
೧೯೫೫ರಲ್ಲಿ ಉತ್ತರಕನ್ನಡ ಜಿಲ್ಲೆಯ ಗೋಕರ್ಣದಲ್ಲಿ ಲೇಖಕ ಗೌರೀಶ ಕಾಯ್ಕಿಣಿ ಮತ್ತು ಶಾಂತಾ ಕಾಯ್ಕಿಣಿಯವರ ಮಗನಾಗಿ ಜನಿಸಿದ ಜಯಂತ ಕಾಯ್ಕಿಣಿ ಅವರು ಪದವಿ ಪಡೆದದ್ದು ಜೀವರಸಾಯನಶಾಸ್ತ್ರದಲ್ಲಿ. ಹಲವು ವರ್ಷ ಮುಂಬಯಿಯ ಔಷಧ ತಯಾರಿಕಾ ಸಂಸ್ಥೆಯೊಂದರಲ್ಲಿ ಉದ್ಯೋಗ ಮಾಡುತ್ತಿದ್ದ ಅವರು ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿ, ಸಾಹಿತ್ಯರಚನೆಯ ಜೊತೆಗೆ, ಚಲನಚಿತ್ರ ಮತ್ತು ಕಿರುತೆರೆ ಮಾಧ್ಯಮಗಳಲ್ಲಿ ಲೇಖಕರಾಗಿ, ನಿರೂಪಕರಾಗಿ ಕೆಲಸ ಮಾಡುತ್ತಿದ್ದಾರೆ. ’ರಂಗದಿಂದೊಂದಿಷ್ಟು ದೂರ’, ’ಕೋಟಿ ತೀರ್ಥ’, ’ಒಂದು ಜಿಲೇಬಿ’ ಮೊದಲಾದ ಕವನ ಸಂಕಲನಗಳನ್ನೂ ’ತೆರೆದಷ್ಟೇ ಬಾಗಿಲು’, ’ದಗಡೂಪರಬನ ಅಶ್ವಮೇಧ’, ’ಅಮೃತಬಳ್ಳಿ ಕಷಾಯ’, ’ತೂಫಾನ್ ಮೇಲ್’ ಮೊದಲಾದ ಕಥಾಸಂಕಲನಗಳನ್ನೂ ’ಸೇವಂತಿ ಪ್ರಸಂಗ’, ’ಜತೆಗಿರುವನು ಚಂದಿರ’ ಮೊದಲಾದ ನಾಟಕಗಳನ್ನೂ ’ಬೊಗಸೆಯಲ್ಲಿ ಮಳೆ’, ’ಶಬ್ದತೀರ’ ಮೊದಲಾದ ಲೇಖನಸಂಗ್ರಹಗಳನ್ನೂ ಇವರು ಪ್ರಕಟಿಸಿದ್ದಾರೆ. ’ಭಾವನಾ’ ಪತ್ರಿಕೆಯ ಸಂಪಾದಕರಾಗಿದ್ದ ಇವರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಬಿ.ಎಚ್. ಶ್ರೀಧರ ಪ್ರಶಸ್ತಿ, ಡಿಎಸ್‌ಸಿ ಪ್ರೈಸ್ ಫಾರ್ ಸೌತ್ ಏಶಿಯನ್ ಲಿಟರೇಚರ್ ೨೦೧೮ ಪ್ರಶಸ್ತಿಗಳು ದೊರಕಿವೆ.
ಜಯಂತ ಕಾಯ್ಕಿಣಿ ಮುಖ್ಯ ಕೃತಿಗಳು
ಕವನ ಸಂಕಲನ:
ರಂಗದಿಂದೊಂದಿಷ್ಟು ದೂರ
ಕೋಟಿ ತೀರ್ಥ
ಶ್ರಾವಣ ಮಧ್ಯಾಹ್ನ
ನೀಲಿ ಮಳೆ
ಒಂದು ಜಿಲೇಬಿ
ಕಥಾ ಸಂಕಲನ:
ತೆರೆದಷ್ಟೇ ಬಾಗಿಲು
ಗಾಳ
ದಗಡೂ ಪರಬನ ಅಶ್ವಮೇಧ
ಬಣ್ಣದ ಕಾಲು
ಅಮೃತಬಳ್ಳಿ ಕಷಾಯ
ತೂಫಾನ್ ಮೇಲ್
ಚಾರ್‌ಮಿನಾರ್
ನಾಟಕಗಳು:
ಸೇವಂತಿ ಪ್ರಸಂಗ
ಜತೆಗಿರುವನು ಚಂದಿರ
ಇತಿ ನಿನ್ನ ಅಮೃತಾ
ಬರಹಗಳು:
ಬೊಗಸೆಯಲ್ಲಿ ಮಳೆ
ಶಬ್ದತೀರ
Reviews
There are no reviews yet.