ಇದು ಲೇಖಕರಾದ ಡಾ.ಸರೋಜಾ.ಕೃ.ಜಾಧವ ಅವರ ಮೊದಲ ಕಥಾ ಸಂಕಲನವಾಗಿದೆ. ಲೇಖಕರು ತಾವು ಕಂಡಂತಹ ಮಹಿಳೆ ಮೇಲಿನ ದೌರ್ಜನ್ಯ, ಅವಳು ತಾಯಿಯಾಗಿ,ಮಗಳಾಗಿ,ಮತ್ತೊಬ್ಬರ ಮನೆಯ ಸೊಸೆಯಾಗಿ, ಮಡದಿಯಾಗಿ,ಅಕ್ಕ-ತಂಗಿಯಾಗಿ ಅನುಭವಿಸುತ್ತಿರುವ ಶೋಷಣೆಗಳನ್ನ, ಅನುಭವಿಸಿದ ಶೋಷಣೆ,ಕಷ್ಟಗಳನ್ನ ಗ್ರಾಮೀಣ ಭಾಷಾ ಸೊಗಡಿನಲ್ಲಿ ವಿವರಿಸಿದ್ದಾರೆ. ಮಹಿಳಾ ಸಂವೇದನೆಗಳು ಅತಿ ಸೂಕ್ಷ್ಮವಾಗಿದ್ದರು ಅವನ್ನು ಸಮಾಜಕ್ಕೆ ತಿಳಿಹೇಳುವ ಪ್ರಯತ್ನ ಮಾಡಿದ್ದಾರೆ ಶ್ರೀಮತಿ. ಡಾ.ಸರೋಜಾ ಅವರು.
ಅದೇ ರೀತಿ ಲೇಖಕರ ಜೀವನವು ಅಷ್ಟು ಸರಳವಾಗಿರಲಿಲ್ಲ, ಅವರು ನಡೆದ ಬಂದ ಹಾದಿ, ತಂದೆ -ತಾಯಿ, ಪತಿಯ ಬೆಂಬಲದಿಂದ ಕಾಲೇಜು ಕಲಿತು,ಮಕ್ಕಳನ್ನು ಹೆತ್ತು ಅವರನ್ನು ಪ್ರೀತಿಯಿಂದ ಸಾಕಿ ಸಲಹುತ್ತಾ ಪಿ.ಎಚ್.ಡಿ ಮುಗಿಸಿ ಡಾಕ್ಟರೇಟ್ ಪದವಿಯನ್ನು ಪಡೆದಿದ್ದಾರೆ. ಇವರ ಬದುಕು,ಸಾಧನೆ ಮುಂಬರುವ ಮಹಿಳೆಯರಿಗೆ ಪ್ರೇರಣೆ ಮತ್ತು ಸ್ಪೂರ್ತಿದಾಯಕವಾಗಿವೆ.
Reviews
There are no reviews yet.