Ebook

ಬೀಜದೊಳಗಣ ವೃಕ್ಷ

Author: Geeta Vasant

Original price was: ₹180.00.Current price is: ₹108.00.

ಬೀಜದೊಳಗಣ ವೃಕ್ಷ
ಶ್ರೀಮತಿ ಗೀತಾ ವಸಂತ ಅವರು ಬೇಂದ್ರೆ ಕಾವ್ಯದ ವಿರಾಟ್ ಸ್ವರೂಪದ ಬಗ್ಗೆ `ಬೀಜದೊಳಗಣ ವೃಕ್ಷ’ ಎಂಬ ಹೆಸರಿನಿಂದ ಅಧ್ಯಯನ ಗ್ರಂಥವೊಂದನ್ನು ಬರೆದು ಪ್ರಸ್ತುತ ಪಡಿಸುತ್ತಿದ್ದಾರೆ. ಈ ವಿಷಯದ ಬಗ್ಗೆ ಅವರು ತುಮಕೂರು ವಿಶ್ವವಿದ್ಯಾಲಯಕ್ಕೆ ಮಹಾಪ್ರಬಂಧವನ್ನು ಸಲ್ಲಿಸಿ ಡಿ.ಲಿಟ್. ಪದವಿ ಪಡೆದಿದ್ದಾರೆ. ಅದನ್ನು ಓದುಗರಿಗೆ ಉಪಯೋಗವಾಗುವ ರೀತಿಯಲ್ಲಿ ಮಾರ್ಪಡಿಸಿ ಕೃತಿ ರಚಿಸಿದ್ದಾರೆ.

ಬೇಂದ್ರೆಕಾವ್ಯವು ಅನುಭವದ ಪ್ರತಿಸೃಷ್ಟಿ, ಅರಿವಿನ ಅನುಸಂಧಾನ. ಅಣುವಿನಿಂದ ಮಹತ್ತಿನವರೆಗೆ ವ್ಯಾಪಿಸಿದ ಈ ಕಾವ್ಯದ ವಿರಾಟ್ ಸ್ವರೂಪವು ಅಭ್ಯಾಸಿಗಳಿಗೆ ಸದಾ ಒಂದು ಸವಾಲು. ಮೊಗೆದಷ್ಟೂ ಮುಗಿಯದ ಒರತೆಯಾಗಿ ತೆರೆದುಕೊಳ್ಳುವ ಬೇಂದ್ರೆಕಾವ್ಯದ ಒಡಲನ್ನು ಬಗೆಯುವುದು ಸಾರ್ಥಕ ಭಾವವನ್ನು ತುಂಬುವಂಥ ಸಾಹಸ. ಅಂಥ ಸಾರ್ಥಕ ಭಾವವನ್ನು ಪ್ರಸ್ತುತ ಕೃತಿಯ ಸಾಕಾರದ ಹಿಂದಿನ ಅಧ್ಯಯನವು ನನ್ನಲ್ಲಿ ಮೂಡಿಸಿದೆ. ಆದರೂ ಇದು ಆಕಾಶವನ್ನು ಅಂಗೈಯಲ್ಲಿ ಹಿಡಿಯುವ ಪ್ರಯತ್ನವೆಂಬ ವಿನಮ್ರಭಾವ ನನ್ನದು. ವಿಜ್ಞಾನ, ತತ್ವಜ್ಞಾನ, ಸಂಖ್ಯಾಶಾಸ್ತ್ರ, ಮನಃಶಾಸ್ತ್ರ, ನಾದ, ಯೋಗ, ತಂತ್ರ, ಕಲೆ, ಮೀಮಾಂಸೆ ಹೀಗೆ ಬಹುದೊಡ್ಡ ಹರಹಿನಲ್ಲಿ ವಿಸ್ತರಿಸಿಕೊಂಡಿರುವ ಬೇಂದ್ರೆಕಾವ್ಯವು ಬಹುಮುಖೀ ಅಧ್ಯಯನವನ್ನು ಬೇಡುವಂಥಹುದು. ಆಧ್ಯಾತ್ಮದ ಅಂತರಂಗದಲ್ಲಿ ಈ ಎಲ್ಲ ಜ್ಞಾನವನ್ನು ಕರಗಿಸಿ ಸಮರಸಗೊಳಿಸಿಕೊಂಡ ಬೇಂದ್ರೆಯವರು ಅನುಭಾವದ ಉನ್ಮನಿಯಲ್ಲಿ ಗುಂಗುಹಿಡಿದಂತೆ ಹಾಡಿದ ಮನುಕುಲದ ಹಾಡುಗಾರ. ಪಟ್ಟಪಾಡುಗಳನ್ನು ಹಾಡಾಗಿಸಿದ ಕಲಾಕಾರ. ಸೃಷ್ಟಿಯ ರಹಸ್ಯವನ್ನು ಕಾವ್ಯಸೃಷ್ಟಿಯ ಮಂತ್ರಮಯತೆಯಲ್ಲಿ ಹಿಡಿದಿಟ್ಟ ಬೇಂದ್ರೆಕಾವ್ಯವು ಸಮರಸವೇ ಜೀವನ ಎಂಬ ದರ್ಶನವನ್ನು ಕನ್ನಡದ ಕನ್ನಡಿಯಲ್ಲಿ ಪ್ರತಿಫಲಿಸಿದೆ.
ಬೀಜದೊಳಗಣ ವೃಕ್ಷದಂತೆ ಎಂಬ ಅಲ್ಲಮನ ನುಡಿ ಬೇಂದ್ರೆಕಾವ್ಯವನ್ನು ವಿವರಿಸುವ ಅದ್ಭುತ ಉಪಮೆಯಾಗಿ ನನಗೆ ಹೊಳೆದಿದೆ. ಅಪಾರ ಸಾಧ್ಯತೆಗಳನ್ನು ಒಡಲಲ್ಲಿ ಹುದುಗಿಸಿಕೊಂಡ ಈ ಕಾವ್ಯವು ಓದುಗರ ಅಂತರಂಗದಲ್ಲಿ ಕುಡಿಯೊಡೆದು ವಿಸ್ತರಿಸುತ್ತ ಹೋಗಲಿ ಎಂಬುದು ನನ್ನ ಆಶಯ.
ಡಾ. ಗೀತಾ ವಸಂತ

Additional information

Category

Author

Publisher

Language

Kannada

Book Format

Ebook

Year Published

2016

Reviews

There are no reviews yet.

Only logged in customers who have purchased this product may leave a review.