ವಿಮರ್ಶೆಯ ಬರಹಗಳು
ಸಾಹಿತ್ಯ ವಿಮರ್ಶೆಯೆಂಬುದು ಹಲವು ಬಗೆಯ ಸಂಚಾರಗಳ ಫಲವಾಗಿ ಹುಟ್ಟುವ ಒಂದು ಅಭಿವ್ಯಕ್ತಿಪ್ರಭೇದ – ಎಂಬೊಂದು ಗ್ರಹಿಕೆಯು ಟಿ.ಪಿ. ಅಶೋಕ ಅವರ ಪ್ರಸ್ತುತ ಲೇಖನಗುಚ್ಛದಲ್ಲಿ ಅವ್ಯಕ್ತವಾಗಿ ಅಡಗಿದೆ. ಇದು ಕೃತಿಯ ಒಳಲೋಕದೊಳಗಣ ಸಂಚಾರ; ಕೃತಿ-ಕೃತಿಗಳ ನಡುವಣ ಸಂಚಾರ; ಕೃತಿಯಿಂದ ಕೃತಿಸಮೂಹದವರೆಗೆ ವಿಸ್ತರಿಸಿ ಕೊಳ್ಳುವ ವಿಶಾಲ ಪರ್ಯಾವರಣದ ಸಂಚಾರ. ನಾವು ಈಗಾಗಲೇ ಗಮನಿಸಿರುವ ಅನೇಕ ಸಂಗತಿಗಳು ಅಶೋಕರ ಜೊತೆಗಿನ ಈ ಸಾಹಿತ್ಯಸಂಚಾರದಲ್ಲಿ ಹೊಸ ಆಯಾಮ ಗಳಲ್ಲಿ ಕಾಣಿಸಿಕೊಳ್ಳುವಂತಿವೆ; ಜತೆಗೆ, ನಮ್ಮ ಗಮನಕ್ಕೆ ಅಷ್ಟಾಗಿ ಬಾರದಿದ್ದ ಅದೆಷ್ಟೋ ಹೊಸ ನೋಟಗಳನ್ನೂ ಅಶೋಕ ನಮ್ಮ ಕಾಣ್ಕೆಗೆ ತರುತ್ತಾರೆ. ಅಷ್ಟೇ ಅಲ್ಲ, ಸಾಹಿತ್ಯದಿಂದ ಸಮಾಜಕ್ಕೆ, ಸಮಾಜದಿಂದ ಸಂಸ್ಕೃತಿಯ ವಿಶಾಲ ನೆಲೆಗಳಿಗೆ ಹಬ್ಬಿಕೊಳುವ ಈ ಸಂಚಾರವು ಕೃತಿಯೊಳಗಣ ನಿಗೂಢಕ್ಕೆ ಕನ್ನಡಿಯೂ ಹೌದು; ಹೊರಗಿನ ಲೋಕಾಕಾರಕ್ಕೆ ಕೈದೀವಿಗೆಯೂ ಹೌದು. ಹೀಗೆ, ಕೃತಿಯ ಮೂಲಕ ಲೋಕವನ್ನೂ, ಲೋಕದ ಮೂಲಕ ಕೃತಿಯನ್ನೂ ಗ್ರಹಿಸುತ್ತ ಎರಡರ ಒಳಗೂ ನಮ್ಮನ್ನು ಆಪ್ತವಾಗಿ ಕರೆದೊಯ್ಯುವ ಅಶೋಕರ ವಿಮರ್ಶೆಯು ಸಾಹಿತ್ಯವನ್ನು ಹಿಂಡಿ ಅರ್ಥದ ಎಣ್ಣೆ ತೆಗೆಯುವ ಪ್ರಯಾಸವಲ್ಲ; ಬದಲು, ತಾನೂ ಸಂಚರಿಸುತ್ತ, ನಮ್ಮನ್ನೂ ಚಾರಣ ಮಾಡಲು ಪ್ರಚೋದಿಸುವ ಒಂದು ಆಪ್ಯಾಯಮಾನ ಪ್ರವಾಸ.

Additional information

Category

Author

Publisher

Language

Kannada

Book Format

Ebook

Year Published

2012

Reviews

There are no reviews yet.

Only logged in customers who have purchased this product may leave a review.