ಜೆನ್ ಹಾಯ್ಕುಗಳು
(ಓಶೋ ವ್ಯಾಖ್ಯಾನದೊಂದಿಗೆ)
ದೇವರಿಲ್ಲದ ಜಗತ್ತಿನಲ್ಲಾದರೂ ಅವನ ಅಪ್ಪಣೆ, ಆದೇಶಗಳು ಕರಗಿ ಕಣ್ಮರೆಯಾಗಿಬಿಡುತ್ತವೆ. ಆಗ ಇಡೀ ಮನುಷ್ಯ ಜಾತಿ ಒಂದಾಗುತ್ತದೆ. ದೇವರಿಲ್ಲದ ಜಗತ್ತಿನಲ್ಲಿ ಧರ್ಮ, ನೀತಿ, ತಾರತಮ್ಯಗಳೆಲ್ಲವೂ ತಮ್ಮ ತಳಹದಿ ಕಳೆದುಕೊಂಡು ಇಡೀ ಮನುಷ್ಯಕುಲ ಒಂದಾಗುತ್ತದೆ. ಜೆನ್ ಮನುಷ್ಯ ಜಾತಿಯೊಂದಿಗಷ್ಟೇ ಅಲ್ಲ, ಸುತ್ತಲಿನ ಮರಗಿಡಗಳು, ನದಿ ಪರ್ವತಗಳು, ಗ್ರಹ ತಾರೆಗಳೊಂದಿಗೆ ಅವಿನಾ ಭಾವದಿಂದ ಒಂದಾಗಿ ಜೀವಿಸುವ ಬಗೆ ಹೇಗೆ ಎಂಬುದನ್ನು ಬೋಧಿಸುವ ಧರ್ಮವಾಗಿದೆ. ಈ ಇಡೀ ವಿಶ್ವ ಅಖಂಡವಾದುದು ಎಂಬುದು ಜೆನ್ ನ ಒಳನೋಟವಾಗಿದೆ. ಈ ಅಖಂಡ ವಿಶ್ವದ ಚೆಲುವನ್ನು ಹೆಚ್ಚಿಸುವ ನಾನಾ ಬಣ್ಣದ ಹೂವುಗಳ ಹಾಗೆ ನಾವು ಪ್ರತಿಯೊಬ್ಬರೂ ಜನ್ಮ ತಳೆದಿರುವೆವು. ನಾನಾ ಬಣ್ಣದ ಹೂವುಗಳಂತೆಯೇ ನಾವೂ ಬದುಕಿನ ವಿಶಿಷ್ಟ ಅಭಿವ್ಯಕ್ತಿಗಳಾಗಿರುವೆವು. ಈ ವ್ಯಕ್ತಿವಿಶಿಷ್ಟತೆಯ ಅರಿವು ಮನುಷ್ಯನಿಗೊಂದು ಘನತೆ ನೀಡುತ್ತದೆ. ಸುತ್ತಲಿನ ಜಗತ್ತಿನೊಂದಿಗೆ ಗೌರವಭಾವದಿಂದ ನಡೆದುಕೊಳ್ಳುವುದನ್ನು ಕಲಿಸುತ್ತದೆ. ದೇವರಿರುವ ಜಗತ್ತಿನಲ್ಲಿ ಮನುಷ್ಯ ಎಂದಿಗೂ ತನ್ನ ಆತ್ಮಗೌರವವನ್ನು ಸಂಪಾದಿಸಿಕೊಳ್ಳಲಾರ. ಜೆನ್ ನ ಕರೆ ಇನ್ನೂ ಇಡೀ ಮನುಷ್ಯ ಕುಲಕ್ಕೆ ಕೇಳಿಸಿಲ್ಲ. ಈಗಲೂ ಮನುಷ್ಯ ಜಾತಿಯು ಕಲ್ಪನೆ, ಕಟ್ಟುಕತೆಗಳನ್ನು ಪೂಜಿಸುತ್ತಿವೆ.
Reviews
There are no reviews yet.