ಭಾರತದ ಸೈನಿಕರು ಶೌರ್ಯ ಮತ್ತು ಪರಾಕ್ರಮಗಳಿಗೆ ಮಾತ್ರವಲ್ಲದೆ, ತಮ್ಮ ಶಿಸ್ತುಬದ್ಧ ನಡುವಳಿಕೆಗಳಿಂದ ವಿಶ್ವಮಾನ್ಯರಾಗಿರುತ್ತಾರೆ . ಸೈನಿಕ, ಸೈನ್ಯ, ಸೈನಿಕ ವೃತ್ತಿ ಹಾಗೂ ಯುದ್ದಇವುಗಳ ಬಗ್ಗೆ ಜನತೆಯಲ್ಲಿ ವಿಶೇಷವಾಗಿ ಯುವ ಪೀಳಿಗೆಯಲ್ಲಿ ಅರಿವು ಮತ್ತು ಆಸಕ್ತಿಗಳನ್ನು ಹುಟ್ಟಿಸುವಲ್ಲಿ ಮತ್ತು ದೇಶಪ್ರೇಮ ಹಾಗೂ ಸ್ಫೂರ್ತಿಯನ್ನು ಬೆಳೆಸಿಕೊಳ್ಳಲು ಅನುವು ಮಾಡಿಕೊಡುವ ಪುಸ್ತಕಗಳು, ಅದರಲ್ಲೂ ಕನ್ನಡದ ವಿರಳ. ಈ ದಿಸೆಯಲ್ಲಿ ನಿವೃತ್ತ ಲೆಫ್ಟಿನೆಂಟ್ ಜನರಲ್ ಎಸ್ ಸಿ. ಸರದೇಶಪಾಂಡೆಯವರು ಸೈನಿಕರ ಬಾಳು-ಬದುಕು ಹಾಗೂ ಯುದ್ದದ ಬಗ್ಗೆ ಚಿತ್ರಿಸುವ ‘ಯುದ್ದ-ಯೋಧ’ ಕನ್ನಡ ಕೃತಿಯನ್ನು ಜನಸಾಮಾನ್ಯರಿಗೂ ಅರ್ಥವಾಗುವ ಶೈಲಿಯಲ್ಲಿ ಹೊರತಂದಿರುವುದು ಪ್ರಶಂಸನೀಯ.
ರೈತ ಹಾಗೂ ಸೈನಿಕ ನಮ್ಮ ರಾಷ್ಟ್ರದ ಬೆನ್ನೆಲುಬುಗಳು. ಸೈನಿಕನ ಹಗಲಿರುಳಿನ ನಿಸ್ವಾರ್ಥ ಸೇವೆಯಿಂದಲೇ ನಾವು ನಾಡಿನಲ್ಲಿ ನಿರ್ವಿಘ್ನವಾಗಿ ಜೀವನ ನಡೆಸಲು ಸಾಧ್ಯವಾಗಿದೆ. ಆದರೆ ಸೈನಿಕನ ಜೀವನಶೈಲಿ, ಆತನ ನ ಹಾಗೂ ಕುಟುಂಬದ ಬವಣೆಗಳು, ಆತನ ಕಾರ್ಯ ನಿರ್ವಹಣೆಯಲ್ಲಿ ಎದುರಾಗುವ ಎಡರುತೊಡರುಗಳು ನಮ್ಮ ಕಲ್ಪನೆಗೆ ಮೀರಿದ್ದಾಗಿರುತ್ತದೆ . ಇತ್ತೀಚಿನ ದಿನಗಳಲ್ಲಿ ದೇಶದ ಗಡಿಭಾಗಗಳಲ್ಲಿ ಪ್ರತಿದಿನ ನಡೆಯುತ್ತಿರುವ ವಿಧ್ವಂಸಕ ಕೃತ್ಯಗಳನ್ನು ದಮನಗೊಳಿಸಿ, ದೇಶದಲ್ಲಿ ಶಾಂತಿ ಸ್ಥಾಪನೆ ಹಾಗೂ ರಕ್ಷಣಾ ಕಾರ್ಯದಲ್ಲಿ ತನ್ನ ಜೀವನ ಹಂಗು ತೊರೆದು ಸದಾ ತೊಡಗಿಸಿ ಕೊಂಡಿರುವ ಸೈನಿಕನ ಜೀವನ, ಆತಂಕ ಹಾಗೂ ಅಭದ್ರತೆಯಿಂದ ಕೂಡಿದ್ದಾಗಿರುತ್ತದೆ. ಇಂದಿನ ಆಧುನಿಕ ಯುಗದಲ್ಲಿ ಪಾರಂಪರಿಕ ಯುದ್ದವ್ಯೂಹ ಬದಲಾಗಿ ಅಸಂಪ್ರದಾಯಕ ಯುದ್ದಗಳು ಹಾಗೂ ಅನಿರೀಕ್ಷಿತ ಹೋರಾಟಗಳು ಹೆಚ್ಚಾಗುತ್ತಿರುವುದರ ಜೊತೆಗೆ, ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಹೊಸ ತಂತ್ರಜ್ಞಾನ ಹಾಗೂ ಹೊಸ ಯುದ್ದತಂತ್ರಗಳೊಂದಿಗೆ ಉಪಯೋಗಿಸುತ್ತಿರುವುದರಿಂದ, ವಿಶ್ವದಲ್ಲಿ ಅಶಾಂತಿ ಹೆಚ್ಚಾಗುತ್ತಿರುವುದನ್ನು ನಾವು ದಿನನಿತ್ಯ ನೋಡುತ್ತಿದ್ದೇವೆ. ಸೈನಿಕನ ಕಾರ್ಯ ವ್ಯಾಪ್ತಿ ಗಡಿಗಳಿಗೆ ಮಾತ್ರ ಸೀಮಿತವಾಗದೆ ದೇಶದ ಆತಂರಿಕ ಶಾಂತಿ ಕಾಪಾಡುವಲ್ಲಿ ಕೂಡ ಮಹತ್ವದ ಪಾತ್ರವಹಿಸಿದೆ. ಇವುಗಳ ಬಗ್ಗೆ ಜನಸಾಮಾನ್ಯರ ಜಾಗೃತಿಗೊಂಡರೆ ಸಮಾಜಕ್ಕೆ ಉಪಯುಕ್ತವಾಗುವುದರಲ್ಲಿ ಸಂದೇಹವಿಲ್ಲ.
-100%
Ebook
ಯುದ್ದ ಯೋಧ
Author: S. C. Sardeshpande
Original price was: $1.80.$0.00Current price is: $0.00.
ಯುದ್ದ ಯೋಧ
ಈ ಪುಸ್ತಕವು ಭಾರತೀಯ ಸೇನೆಯನ್ನು ಪರಿಚಯಿಸುತ್ತದೆ.
About this Ebook
Information
Additional information
Category | |
---|---|
Author | |
Publisher | |
Language | Kannada |
Book Format | Ebook |
Reviews
Only logged in customers who have purchased this product may leave a review.
Reviews
There are no reviews yet.