ದ್ಯಾವಪ್ಪ ಜೀವಂತ ಇರೋ ವರೆಗೂ ಈ ದೇವರ ಸೇವಾ ಮಾಡಿದ. ಇವನ ನಂತರ ಇವನ ಮಕ್ಕಳು ಮುಂದುವರೆಸಿಕೊಂಡು ಬಂದರು. ಅವನ ನಂತರ ಅವನ ಮಕ್ಕಳಲ್ಲಿ ಮತ್ತೆ ದ್ಯಾವಪ್ಪ ಎನ್ನುವವನು ಮಾತ್ರ ಕಾದಂಬರಿಯ ಇನ್ನೊಂದು ದಿಕ್ಕಿನ ಮುಖವನ್ನು ಪರಿಚಯಿಸಿದನು.
ದೇವರು ದಿಂಡರು ಅಂತಾ ಕುಳಿತ್ರೆ ಹೊಟ್ಟೆ ತುಂಬಲ್ಲ. ದುಡಿಬೇಕು ದುಡಿದ್ರ ಹೊಟ್ಟೆ ತುಂಬುತ್ತ ದೇವರತ್ರ ಕುಂತ್ರ ಹೊಟ್ಟೇನೂ ತುಂಬಲ್ಲ ಬದುಕೂ ಸಾಗಲ್ಲ ಎಂಬ ಮನೋಭಾವದಿಂದಲೇ ದ್ಯಾವಪ್ಪ ಕ್ರಾಂತಿಕಾರಿಯಾಗಿ ಒಂದು ಚಳುವಳಿಯಲ್ಲಿ ಭಾಗವಹಿಸಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಅವರ ಖಾಲಿ ಕಾರನ್ನು ಸ್ಪೋಟಗೊಳಿಸಲು ಸಂಚು ಹಾಕಿ ಜೈಲು ಸೇರಿದ. ಆದರೂ ತಪ್ಪದೇ ಧರಮನಟ್ಟಿ ತೇರಿನ ಹಿಂದಿನ ರಾತ್ರಿ ಹಾಜರಿದ್ದು ಆ ಎಲ್ಲ ತೇರಿನ ಕಾರ್ಯ ಮುಗಿಸಿ ಮರಳಿ ಹೋಗುತ್ತಿದ್ದ. ಆದರೆ ಅದೊಂದು ವರುಷ ದ್ಯಾವಪ್ಪ ಬರಲೇ ಇಲ್ಲ. ಅಂದೇ ರಾತ್ರಿ ದೇವಸ್ಥಾನದ ಒಡವೆಗಳು ಕಳ್ಳತನವಾದವು. ಜಾತ್ರೆ ನಿಂತೋಯ್ತು. ಕಳ್ಳತನದಲ್ಲಿ ದ್ಯಾವಪ್ಪನದೇ ಪಾತ್ರ ಇದೆ ಎಂದು ಅನುಮಾನ ಪಟ್ಟರು. ಆದರೆ ಅದೆಲ್ಲ ಸುಳ್ಳಾಗಿತ್ತು. ದ್ಯಾವಪ್ಪ ಬಾಂಬೆದಲ್ಲಿ ಬಾಬಾ ಅಮ್ಟೆಯವರ ಆಶ್ರಮದಲ್ಲಿ ಕೆಲಸಕ್ಕೆ ಸೇರಿದ್ದ ಎಂದು ಕಾದಂಬರಿ ಕೊನೆಗೊಳ್ಳುತ್ತದೆ.
ಮುತ್ತಜ್ಜನ ಆಧ್ಯಾತ್ಮಿಕತೆ, ಮಗನ ಸಾಮಾಜಿ ಕಾರ್ಯದ ಮನ ಎರಡೂ ಒಂದಕ್ಕೊಂಡು ವಿಭಿನ್ನ ಮಾರ್ಗಗಳಾದರೂ ತಂದೆ ದೇವರಿಗಾಗಿ ಮಡದಿಯನ್ನು ಬಡಿದು ಕಣ್ಣೀರು ತರಿಸಿದ್ದ. ಆದರೆ ಮಗ ದ್ಯಾವಪ್ಪ ಗಂಡ ಸತ್ತ ಹೆಣ್ಣಿಗೆ ಬಾಳು ಕೊಡಲು ಹಂಬಲಿಸಿದ್ದ. ಸಮಾಜ ಭಾವಿಸಿದಂತೆ ಆ ಹೆಣ್ಣಿನೊಂದಿಗೆ ಅಸಭ್ಯವಾಗಿ ವರ್ತಿಸದೇ ಮೇರು ವ್ಯಕ್ತಿತ್ವದ ಗುಣದವನಾಗಿ ಆ ಹೆಣ್ಣಿಗೆ ಪ್ರತಿ ತಿಂಗಳೂ ತಪ್ಪದೇ ಅವಳ ಬದುಕಿಗೆ ಹಣವನ್ನು ಕಳಿಸುತ್ತಿದ್ದು. ಮಗ ದೇವರನ್ನು ಬಿಟ್ಟು ವಿಧವೇ ಹೆಣ್ಣಿನ ಕಣ್ಣಂಚಲಿ ಆನಂದಭಾಷ್ಪ ತರಿಸಿದ್ದ. ಆದೇ ಮುತ್ತಜ್ಜ ಅಂದು ದೇವರಿಗಾಗಿ ಮಗನ ಬಲಿಕೊಟ್ಟು ಹೆಂಡತಿಯನ್ನು ಗೋಳಾಡುವಂತೆ ಮಾಡಿದ್ದ.
ಮೊದಲಿದ್ದ ದೇವರ ಮೇಲಿನ ನಂಬಿಕೆಗಳು ಕುಸಿಲಾರಂಭಿಸಿದವು. ಮೊದಲಿಗೆ ಹತ್ತಾರು ಊರುಗಳನ್ನು ತಿರುಗಿ ರಕ್ತಶುದ್ಧಿ ಮಾಡಿಕೊಳ್ಳುತ್ತಲೇ ಎಲ್ಲ ದೇವರ ದರುಷನ ಪಡೆದು ಆಧ್ಯಾತ್ಮದ, ದೈವಿಕತೆಯಲ್ಲಿ ಮೇಲ್ಪಂಕ್ತಿಯಲ್ಲಿದ್ದ ಅಜ್ಜ. ಆದರೆ ಮೊಮ್ಮಗನನ್ನು ವಿಚಾರಿಸಿದಾಗ ಆ ಎಲ್ಲ ಗುಹೆ ಗುಂಡಾರಗಳಲ್ಲಿ ಕಳ್ಳರೇ ತುಂಬಿದ್ದಾರೆ ಅಲ್ಲಿ ಹೋಗಿ ಏನು ಪುಣ್ಯ ಪಡೆಯೋದಿದೆ. ಮೋಸಗಾರರೇ ತುಂಬಿದ ಜಗದೊಳಗೆ ನಮ್ಮ ಬದುಕನ್ನ ದೇವರ ಮೇಲೆ ಭಾರ ಹಾಕಿ ಕುಳಿತರೆ ಆದೀತೆ? ಎನ್ನುತ್ತಲೇ ದ್ಯಾವಪ್ಪ ಕೊನೆಗೆ ಸಾಮಾಜಿಕ ಕಾರ್ಯದಲ್ಲಿ ತೊಡಗಿದ.
ತೇರು ಪಾರಂಪರಿಕತೆಯ ಜೊತೆಗೆ ವಾಸ್ತವದ ಬದುಕನ್ನು ನೋಡುವ ಒಂದು ವಿಭಿನ್ನ ಕೃತಿಯಾಗಿ ಹೊರಹೊಮ್ಮುತ್ತದೆ. ಗೊಂದಲಿಗ್ಯಾರು ಹಾಡಿನ ಮೂಲಕ ಹೇಳುವ ವಿಶಿಷ್ಟ ರೂಪದ ಜಾನಪದ ಶೈಲಿಯನ್ನು ಅಳವಡಿಸಿಕೊಂಡಿರುವುದು ಕಾದಂಬರಿಗೆ ಇನ್ನಷ್ಟು ಮೆರಗು ನೀಡಿದೆ. ಕಾದಂಬರಿಯ ಮುಖ್ಯ ಪಾತ್ರಧಾರಿ ಸ್ವಾಂವಪ್ಪಜ್ಜ. ಅವನ ಬದುಕಿ ರೀತಿ, ಹಳ್ಳಿಯ ಜೀವನದ ಕುರಿತು, ಜಾತ್ರೆಯ ಕುರಿತು, ಅಲ್ಲಿಯ ಜನರ ಮನಸ್ಥಿತಿಗಳು, ಯುವ ಪೀಳಿಗೆಯವರು ಸ್ವಾಂವಪ್ಪಜ್ಜನನ್ನು ದೂಷಣೆಗೆ ಗುರಿ ಮಾಡುವ ರೀತಿ, ಕೊನೆಗೊಮ್ಮೆ ಸೌಮ್ಯ ಸ್ವಭಾವದ ಸ್ವಾಂವಪ್ಪಜ್ಜನನ್ನು ಜೈಲಿಗೂ ಕಳಿಸುವ ಕ್ರೂರ ಸಾಮಾಜಿಕ ವ್ಯವಸ್ಥೆ. ಅದರ ಕೊರಗಲ್ಲೇ ಕೊನೆಯುಸಿರೆಳೆಯುವ ಸ್ವಾಂವಪ್ಪಜ್ಜ. ಹೀಗೆ ಅಂದಿನ ಸಾಮಾಜಿಕ ಬದುಕಿನ ಎಲ್ಲ ಮಜಲುಗಳನ್ನು ಧರಮನಟ್ಟಿಯ ಸ್ವಾಂವಪ್ಪಜ್ಜ ವಿವರವಾಗಿ ಹೇಳಿದ್ದಾನೆ.
ಬಾಳವ್ವನ ವಿಧವೆ ಬಾಳಿಗೆ ಬೆಳಕಾದ ದ್ಯಾವಪ್ಪ. ಊರೆಲ್ಲ ಮಾತನಾಡುತ್ತಿತ್ತು ದ್ಯಾವಪ್ಪ ಬಾಳವ್ವನನ್ನು ಇಟ್ಟುಕೊಂಡಿದ್ದಾನೆ ಎಂದು ಆದರೆ ಪಾಟೀಲ್ ಎನ್ನುವವರು ಅವಳನ್ನು ಭೇಟಿಯಾಗಿ ಕೇಳಿದಾಗ ಎಲ್ಲ ವೃತ್ತಾಂತವನ್ನು ಹೇಳುತ್ತಾಳೆ. ಅಲ್ಲಿ ದ್ಯಾವಪ್ಪ ದೇವತಾ ಮನುಷ್ಯನಂತೆ ಗೋಚರಿಸುತ್ತಾನೆ. ಅವನ ಆ ಮನಸ್ಸೇ ಮನುಷ್ಯತ್ವದ ದೊಡ್ಡ ಗುಣವೆಂದು ಬಾಳವ್ವ ಕಣ್ಣೀರು ಸುರಿಸುತ್ತ ಅವನನ್ನು ನೆನೆಪಿಸಿಕೊಂಡು ಪಾಟೀಲರಿಗೆ ಹೇಳಿದಳು.
ಓದು ಮುಗಿದಾಗ ಮನದೊಳಗೆ ನೆನಪುಳಿಯುವ ಎರಡು ಮುಖ್ಯ ಪಾತ್ರಗಳೆಂದರ ಒಂದು ಕಾದಂಬರಿ ಆರಂಭದ ದ್ಯಾವಪ್ಪ ಇನ್ನೊಂದು ಕಾದಂಬರಿ ಮುಕ್ತಾಯದ ದ್ಯಾವಪ್ಪ. ಒಬ್ಬರು ಗತಕಾಲ. ಒಬ್ಬರು ವರ್ತಮಾನ. ಅಜ್ಜ ದ್ಯಾವಪ್ಪ ಧಾರ್ಮಿಕ ಭಕ್ತ. ಮೊಮ್ಮಗ ದ್ಯಾವಪ್ಪ ಧಾರ್ಮಿಕತೆಯಲ್ಲಿ ನಂಬಿಕೆ ಕಳೆದುಕೊಂಡವ. ಗತಕಾಲದೊಡನೆ ವಾಸ್ತವವನ್ನು ನೋಡುತ್ತಲೇ ಧರಮನಟ್ಟಿ ತೇರು ಎಳೆದು ಖುಷಿಪಟ್ಟಂತಾಯ್ತು. ವಿಭಿನ್ನ ಸಾಂಸ್ಕೃತಿಕ ಮಜಲುಗಳ ಪರಿಚಯವೂ ಆದಂತಾಯ್ತು. ನೀವೂ ಓದಿ ಖುಷಿಪಡಿ.
Reviews
There are no reviews yet.