ತಲೆದಂಡ ಈಗಾಗಲೇ ಈ ವಿಷಯವನ್ನೇ ವಸ್ತುವಾಗಿಟ್ಟುಕೊಂಡ ಹಲವಾರು ಕಾದಂಬರಿ, ನಾಟಕಗಳು ಕನ್ನಡದಲ್ಲಿ ಬಂದಿವೆ. ಅವುಗಳಲ್ಲಿ ಲಂಕೇಶ್ ಹಾಗೂ ಶಿವಪ್ರಕಾಶ್ ಬರೆದ ನಾಟಕಗಳು, ಬಿ. ಪುಟ್ಟಸ್ವಾಮಯ್ಯ – ಡಾ. ಎಚ್. ತಿಪ್ಪೇರುದ್ರಸ್ವಾಮಿ ಅವರ ಕಾದಂಬರಿಗಳು ವಿಶೇಷ ಪ್ರಶಂಸೆ ಗಳಿಸಿವೆ.
ಆದರೂ ಈ ನಾಟಕ ಬರೆದಿದ್ದೇನೆ.
ನೋಯುವ ಹಲ್ಲಿಗೆ ನಾಲಿಗೆ ಮತ್ತೆ ಮತ್ತೆ ಹೊರಳುವಂತೆ ಪ್ರತಿಯೊಬ್ಬ ಕನ್ನಡಿಗ ಮತ್ತೆ ಮತ್ತೆ ಆ ಯುಗದ ಬೆರಗುಗೊಳಿಸುವ ಪ್ರತಿಭೆಗೆ, ಆ ಉತ್ಸಾಹಕ್ಕೆ, ಮೌಲಿಕ ಪ್ರಶ್ನೆಗಳನ್ನು ಕೇಳುವ ಎದೆಗಾರಿಕೆಗೆ, ಗೆಲುವಿಗೆ, ನೋವಿಗೆ ಮರಳುವದು, ಅದನ್ನು ಹೊಸ ಸಂದರ್ಭದಲ್ಲಿ ಅರ್ಥೈಸಲು ಯತ್ನಿಸುವುದು ಅನಿವಾರ್ಯ.
ಗಿರೀಶ ಕಾರ್ನಾಡ
Reviews
There are no reviews yet.