“ಈ ಶಾಲೆಯ ಎರಡು ಕೊಠಡಿಗಳು ರಾತ್ರಿ ವೇಳೆ ವಿದ್ಯಾರ್ಥಿಗಳ ವಸತಿಗೃಹಗಳಾಗುತ್ತವೆ. ಪೋಷಕರು ಕೆಲಸಕ್ಕಾಗಿ ವಲಸೆ ಹೋಗುವುದರಿಂದ ಇಲ್ಲಿನ ಮಕ್ಕಳು ಶಾಲೆ ತಪ್ಪಿಸಿಕೊಳ್ಳಬಾರದು ಎನ್ನುವುದೇ ಇದರ ಉದ್ದೇಶ”
ಸರ್ಕಾರಿ ಶಾಲೆಗಳು ನಿಜವಾದ ಅರ್ಥದಲ್ಲಿ ಸಾರ್ವಜನಿಕ ಶಾಲೆಗಳಾಗಿವೆ. ಅವು ಅತ್ಯಂತ ಅನನುಕೂಲಕರ ಪ್ರದೇಶದಲ್ಲಿನ ತೀರ ಅವಕಾಶ ವಂಚಿತರಾದ ವಿದ್ಯಾರ್ಥಿಗಳನ್ನೂ ಒಳಗೊಂಡಂತೆ ಎಲ್ಲೆಡೆಗಳಲ್ಲಿಯೂ ಎಲ್ಲರಿಗೂ ಉಪಯುಕ್ತ ಸೇವೆ ನೀಡುತ್ತ ಬಂದಿವೆ. ಅಜೀಂ ಪ್ರೇಮ್‌ಜಿ ಫೌಂಡೇಷನ್‌ನ ಕಾರ್ಯನಿಮಿತ್ತವಾಗಿ ಸುಮಾರು ಎರಡು ದಶಕಗಳಿಂದ ದೇಶದುದ್ದಗಲಕ್ಕೂ ಸುತ್ತಾಡುತ್ತಿರುವ ఎనో ಗಿರಿಧರ್ ದೂರದ ಮೂಲೆಯಲ್ಲಿರುವ ಪ್ರದೇಶಗಳಿಗೆ ಸಂಚರಿಸಿ ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯನ್ನು ಅವಲೋಕಿಸಿದ್ದಾರೆ. ಅವಧಿಯಲ್ಲಿ, ತಮ್ಮ ಆರೈಕೆಯಲ್ಲಿರುವ ಮಕ್ಕಳ ಏಳಿಗೆಗಾಗಿ ಗಾಢವಾಗಿ ಸಮರ್ಪಿಸಿಕೊಂಡಿರುವ ನೂರಾರು ಮಂದಿ ಸರ್ಕಾರಿ ಶಿಕ್ಷಕರುಗಳೊಂದಿಗೆ ಅವರು ಶಾಲಾ ಒಡನಾಡಿದ್ದಾರೆ. ಪ್ರತಿಯೊಂದು ಮಗುವೂ ಕಅಯಬಲ್ಲದು ಎಂಬ ಉತ್ಕಟವಾದ ನಂಬಿಕೆ ಹೊಂದಿರುವ ಇವರು ಎಲ್ಲಾ ಮಿತಿಗಳನ್ನೂ ಮೀರಿ ಕಾರ್ಯಪ್ರವೃತ್ತರಾಗಿದ್ದಾರೆ.
Reviews
There are no reviews yet.