ಬದುಕೆಂಬ ಮಹಾಸಾಗರದಿಂದ ಬೊಗಸೆ ನೀರು ಕೈಯಲ್ಲಿ ಹಿಡಿದು ಅದು ಕೈಸೊಂದುಗಳಲ್ಲಿ ಹರಿದುಹೋಗುವ ಮುನ್ನ ಅದರ ಗುಣಲಕ್ಷಣವನ್ನು ಹಾಸ್ಯದ ಕಡುಗಣ್ಣಲ್ಲಿ ನೋಡುವ ಕಥೆಯಿದು… ಹೀಗೊಂದು ಮುನ್ನುಡಿಯ ಸಾಲು ಬರೆದಿಟ್ಟವನು ಮುದ್ರಣಕ್ಕೆ ಮುಂಚೆ, ಈ ಕಥಾನಕಕ್ಕೆ ಮುನ್ನುಡಿ, ಹಿನ್ನುಡಿಗಳ ಭಾರ ಬೇಕಿಲ್ಲ ಎನಿಸಿ ಕೈಬಿಟ್ಟಿದ್ದೆ. ಆದರೆ ಇದನ್ನು ಹಾಕಿದ್ದರೆ ಓದುಗರ ಕೆಲ ಗೊಂದಲ ಪರಿಹಾರವಾಗುತ್ತಿತ್ತೇನೋ. ಇರಲಿ, ಈಗ ಅದನ್ನು ದಾಖಲಿಸಿದ್ದೇನೆ.
ಕಾದಂಬರಿಯಲ್ಲಿನ ತೆಲುಗು ಸಂಭಾಷಣೆಗಳಿಗೆ ಕನ್ನಡ ಅನುವಾದ ಹಾಕಿದ್ದರೆ ಸರಿಯಿತ್ತು ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ, ಆದರೆ ನಾನು ಉದ್ದೇಶಪೂರ್ವಕವಾಗೇ ಅದನ್ನು ಮಾಡಿಲ್ಲ. ಅದನ್ನು ಕಥಾನಕಕ್ಕೆ ಎಷ್ಟು ಬೇಕೋ ಅಷ್ಟೇ ಬಳಸಿದ್ದೇನೆ, ಮತ್ತು ವಾತಾವರಣ ಕಟ್ಟಿಕೊಡಲು ಬಳಸಿದ ತಂತ್ರವೂ ಅದಾಗಿದೆ. ಆ ಭಾಷೆಯ ಕೆಲವು ಬೈಗುಳ ಬಳಕೆಯಾಗಿದೆ, ಅದು ಅದರಲ್ಲೇ ಇದ್ದರೆ ಚೆಂದ, ಅದನ್ನು ಪುನಃ ಕನ್ನಡದಲ್ಲಿ ಅನುವಾದಿಸಿದರೆ ವಾಚ್ಯವಾಗುತ್ತೆ. ಅದು ದ್ರಾವಿಡ ಭಾಷಾ ಸಮೂಹದ ಭಾಷೆಯೇ ಆಗಿರುವುದರಿಂದ ತೀರಾ ಗಂಭೀರವಾದ ತೊಡಕು ಅಲ್ಲ ಎಂಬುದು ನನ್ನ ಮತ.
ಲೇಖಕನಾಗಿ ಹೊಸ ಪ್ರಯತ್ನಗಳನ್ನು ಮಾಡುತ್ತಾ ಹಳೆಯ ವಾಸನೆಗಳನ್ನು ತೊಡೆಯುತ್ತಾ ಮುನ್ನಡೆಯಬೇಕೆಂಬುದು ನನ್ನ ಆದ್ಯತೆ. ಪ್ರತಿ ಕೃತಿ ಬರೆವಾಗಲೂ ಜನ ಮೆಚ್ಚುತ್ತಾರೋ, ಇಲ್ಲವೋ ಎಂಬ ಭಯವೂ, ಹೊಸದು ಪ್ರಯತ್ನಿಸದೆ ಇದ್ದರೆ ಬರೆಯುದಾದರೂ ಏತಕ್ಕೆ ಎಂಬ ಸ್ವಂತ ಆಗ್ರಹವೂ ಸೆಣಸಾಡುತ್ತಲೇ ಇರುತ್ತದೆ. ನನ್ನ ಮಟ್ಟಿಗಂತೂ ಹೊಸದು ಹುಡುಕುವ ತ್ರಾಣ ಕಳೆದುಕೊಂಡ ದಿನ ನಾನು ಬರೆಯುವುದನ್ನೇ ನಿಲ್ಲಿಸಿಬಿಡುತ್ತೇನೆ.
ನಿರಂತರವಾಗಿ ಪ್ರೋತ್ಸಾಹಿಸುತ್ತಿರುವ ಓದುಗ ವೃಂದಕ್ಕೆ ಧನ್ಯವಾದಗಳು…
-ಕರಣಂ ಪವನ್ ಪ್ರಸಾದ್
-10%
Availability: In StockPrintbook
ರಾಯಕೊಂಡ
Author: Karanam Pavan Prasad
Original price was: $2.40.$2.16Current price is: $2.16.
About this Printbook
Information
Additional information
Book Format | Printbook |
---|---|
Author | |
Category | |
Language | Kannada |
Publisher | |
Pages | 205 |
Year Published | 2020 |
Reviews
Only logged in customers who have purchased this product may leave a review.
Reviews
There are no reviews yet.