ಬದುಕು ಮಲಗಿದವನನ್ನು ಕ್ಷಣ ಕ್ಷಣಕ್ಕೂ ಎಚ್ಚರಿಸುತ್ತದೆ. ಈ ಎಚ್ಚರಿಕೆಯನ್ನು ವ್ಯಕ್ತಿ ಅಪಾಯ ಎಂದು ಭಾವಿಸಿ ಅದರಿಂದ ಪಾರಾಗಲು ಹವಣಿಸುತ್ತಾನೆ. ನಿದ್ದೆಯೂ ಅಲ್ಲ ಎಚ್ಚರವೂ ಅಲ್ಲ; ಈ ಅವಸ್ಥೆಯಲ್ಲಿ ವೈಚಾರಿಕ ಸ್ವಾತಂತ್ರ್ಯವನ್ನು ಸೌಂದರ್ಯ ದೃಷ್ಠಿಯನ್ನು ನೈತಿಕ ಹೊಣೆಯನ್ನು ಬಿಟ್ಟು ಕೊಡುತ್ತಾನೆ. ಆದರೆ ಬದುಕು ಆಹ್ವಾನಗಳನ್ನು ಒಡ್ಡುತ್ತಲೇ ಹೋಗುತ್ತದೆ.
ಈ ಕೃತಿಯಲ್ಲಿ ಬದುಕಿನ ಸಾರ ಪ್ರತಿಮೆಗಳಿಂದ ಧ್ವನಿತವಾಗುತ್ತದೆ. ಇದರಲ್ಲಿ ಮಿಥ್ಯಾಚಾರಿಯ ವಿಡಂಬನೆ ಚಿತ್ರ ಇಲ್ಲ. ‘ಹುಚ್ಚು ಹಳ್ಳದ ಕಳ್ಳ ಹುದಲಲ್ಲಿ’ ಸಿಕ್ಕು ಹೊರಬರಲು ಹೆಣಗುವ, ಮತ್ತೂ ಆಳಕ್ಕೆ ಕುಸಿಯುವ ವ್ಯಕ್ತಿಯ ವ್ಯಥೆಯ ಕಥೆ ಇಲ್ಲಿದೆ.
Reviews
There are no reviews yet.