ಹಾವು-ಏಣಿಯ ಆಟ; ಆ ಆಟವನ್ನು ಆಡುವ ಹಾಸು. ಭಾರತದಲ್ಲಿ ಹುಟ್ಟಿ ಪ್ರಸಾರಗೊಂಡ ಆಟ ಇದೆಂದು ಪ್ರತೀತಿ. ವೈಕುಂಠ ಏಕಾದಶಿಯ ರಾತ್ರಿಯಲ್ಲಿ ಹೊತ್ತು ಕಳೆಯಲಿಕ್ಕಾಗಿ ಈ ಆಟ ಆಡಲಾಗುತ್ತಿತ್ತಂತೆ. ಹಲವು ಮಜಲುಗಳಲ್ಲಿ ಕಷ್ಟಸುಖಗಳನ್ನು ದಾಟಿ ಮೋಕ್ಷಕ್ಕೆ ತಲುಪುವ ಆಧ್ಯಾತ್ಮಿಕ ಅರ್ಥಗಳ ಹಿನ್ನೆಲೆಯೂ ಈ ಆಟಕ್ಕಿದೆಯಂತೆ. ತೆಲುಗುನಾಡಿನಲ್ಲಿ ಪ್ರಸಿದ್ಧವಾಗಿದ್ದ ಈ ಆಟವನ್ನು ಪಾಶ್ಚಿಮಾತ್ಯರೊಬ್ಬರು ೧೮೯೨ರಲ್ಲಿ ತಮ್ಮಲ್ಲಿಗೆ ಒಯ್ದು ಅಳವಡಿಸಿ ಇದಕ್ಕೆ ’ಸ್ನೇಕ್ಸ್ ಎಂಡ್ ಲ್ಯಾಡರ್‍ಸ್’ ಎಂಬ ಹೆಸರು ಕೊಟ್ಟರೆಂದು ಐತಿಹ್ಯವಿದೆ.ಹಲವು ವರ್ಷಗಳಿಂದ ನನ್ನ ತಲೆಯಲ್ಲಿ ಕೂತು, ಬೇರೆಬೇರೆ ರೂಪಗಳಲ್ಲಿ ಹೊರಗೆ ಬರಲಿಕ್ಕೆ ಹವಣಿಸುತ್ತಿದ್ದ ಈ ನಾಟಕವು ಈಗ ಪ್ರಸ್ತುತ ರೂಪದಲ್ಲಿ ಮೈದಾಳಿಕೊಂಡಿದೆ. ಮತ್ತು, ಹಾಗೆ ರೂಪುಗೊಳ್ಳುವಾಗ, ಕನ್ನಡ ಸಾಹಿತ್ಯ-ರಂಗಭೂಮಿಗಳ ಕೆಲವು ಸಾಲಸೋಲಗಳನ್ನು ಬೆನ್ನಮೇಲೆ ಏರಿಸಿಕೊಂಡೇ ಬಂದಿದೆ. ನನ್ನ ಹಿಂದಿನ ನಾಟಕಗಳಂತೆಯೇ ಈ ನಾಟಕದಲ್ಲೂ ಆರಂಭ ಮತ್ತು ಅಂತ್ಯಕ್ಕೆ ನಾನು ಸುಪ್ರಸಿದ್ಧ ಕನ್ನಡ ಕವಿತೆಯೊಂದನ್ನು ಬಳಸಿಕೊಂಡಿದ್ದೇನೆ.
Ebook
ಪರಮಪದ ಸೋಪಾನಪಟ
₹65.00
About this Ebook
Information
Additional information
Publisher | |
---|---|
Book Format | Ebook |
Language | Kannada |
Category |
Reviews
Only logged in customers who have purchased this product may leave a review.
Reviews
There are no reviews yet.