Ebook

ಪಾಲಕರಿಗಾಗಿ

Original price was: $0.96.Current price is: $0.58.

ಪಾಲಕರಿಗಾಗಿ…….
(ಮಕ್ಕಳ ಶೈಕ್ಷಣಿಕ ಅಡಿಪಾಯ)
ಕಿರಿಯ ಪ್ರಾಥಮಿಕ ಹಂತದಲ್ಲಿಯೇ ಮಕ್ಕಳ ಶಿಕ್ಷಣಕ್ಕೆ ಭದ್ರವಾದ ತಳಹದಿ ಒದಗಿಸಿದರೆ ಮುಂದೆ ಅವರ ವ್ಯಕ್ತಿತ್ವ ವಿಕಾಸದ ದಾರಿ ಸುಗಮಗೊಳ್ಳಲು ಸಾಧ್ಯ. ಈ ಬಗ್ಗೆ ಸಾಕಷ್ಟು ಚಿಂತನೆ ನಡೆಸಿ, ತಮ್ಮ ಮೂವತ್ತೇಳು ವರ್ಷಗಳ ಶಿಕ್ಷಕ ವೃತ್ತಿಯ ಅನುಭವದ ಜೊತೆಗೆ ತಾಯಿಯಾಗಿ, ಅಜ್ಜಿಯಾಗಿ ಪಾಲಕರ ಹೊಣೆಗಾರಿಕೆಯನ್ನು ಸರಿಯಾಗಿ ಅರ್ಥಮಾಡಿಕೊಂಡ ಡಾ|| ಜಯಶ್ರೀ ಎಸ್. ಮುದಿಗೌಡರ, ಅಪೂರ್ವವಾದ ಕಾಳಜಿಯಿಂದ, ಸ್ಪಷ್ಟವಾದ ತಿಳವಳಿಕೆಯಿಂದ ಪ್ರಸ್ತುತ ಗ್ರಂಥವನ್ನು ರಚಿಸಿದ್ದಾರೆ. “ಬೆಸುಗೆಯ ನಿಟ್ಟು” ಎಂಬ ಮೊದಲ ಭಾಗದಲ್ಲಿ ೧) ಮನೆ ಮತ್ತು ತಾಯಿ ೨) ಶಿಕ್ಷಣ ಕ್ಷೇತ್ರ-ಹಿತಚಿಂತಕರು ಹಾಗೂ ೩) ಸಮಾಜ-ಹಿರಿಯರು ಅವಶ್ಯವಾಗಿ ಲಕ್ಷಿಸಬೇಕಾದ ಸಂಗತಿಗಳನ್ನು ಉಪಯುಕ್ತ ಸಲಹೆಗಳೊಂದಿಗೆ ವಿವರಿಸಲಾಗಿದೆ. ಬೋಧನೆಯ ಗರಿಷ್ಠ ಸಾಧನೆಯು ಶಿಕ್ಷಕರ ಸಂದರ್ಭೋಚಿತವಾದ ಬೋಧನಾ ಕಲೆಯ ಚಾಕಚಕ್ಯತೆಯಲ್ಲಿ ಮತ್ತು ಅವರ ವೃತ್ತಿ ಕಳಕಳಿಯಲ್ಲಿ ಅಡಗಿರುವುದನ್ನು ಎತ್ತಿ ತೋರಿಸಲಾಗಿದೆ.

ಪಾಲಕರಿಗಾಗಿ…….
(ಮಕ್ಕಳ ಶೈಕ್ಷಣಿಕ ಅಡಿಪಾಯ)
ಪ್ರಾಥಮಿಕ ಹಂತದ ಈಗಿನ ಶಿಕ್ಷಣಕ್ರಮದಲ್ಲಿಯ ಲೋಪದೋಷಗಳಿಂದಾಗಿ ಶಾಲೆಗಳು ಮಕ್ಕಳಿಗೆ ಆಕರ್ಷಕ ಕೇಂದ್ರವಾಗುವ ಬದಲು ಅನೇಕ ಬಗೆಯ ಆತಂಕಗಳ ತಾಣಗಳಾಗಿ ಪರಿಣಮಿಸಿವೆ. ಸರಿಯಾದ ಕಟ್ಟಡಗಳಿಲ್ಲ, ಸಮರ್ಪಕ ಉಪಕರಣಗಳಿಲ್ಲ, ವಾಚನಾಲಯ ಹಾಗೂ ಆಟದ ಮೈದಾನಗಳಿಲ್ಲ. ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಪ್ರತ್ಯೇಕ ರಂಗವೇದಿಕೆಗಳಿಲ್ಲ, ಎಷ್ಟೋ ಜನ ಶಿಕ್ಷಕರು ಆ ಊರುಗಳಲ್ಲಿ ವಾಸಿಸುವದೇ ಇಲ್ಲ. ಪರಿಸ್ಥಿತಿ ಹೀಗಿದ್ದರೂ ಪಾಲಕರು, ಶಿಕ್ಷಕರು, ಇಲಾಖೆಯ ಅಧಿಕಾರಿಗಳು, ಶಿಕ್ಷಣ ತಜ್ಞರು ಈ ಕಡೆಗೆ ವಿಶೇಷ ಗಮನ ಹರಿಸದಿರುವದು ಆತಂಕ ಹುಟ್ಟಿಸುತ್ತದೆ. ಈಗಿರುವ ಪಠ್ಯಪುಸ್ತಕ ಕ್ರಮದ ತಳಹದಿಯೂ ಭದ್ರವಾಗಿರದೆ ಆಗೀಗ ತರುವ ಬದಲಾವಣೆಗಳಿಂದ ಹೆಚ್ಚಿನ ಪ್ರಗತಿಯನ್ನು ಸಾಧಿಸಿದಂತೆ ಕಂಡುಬರುವುದಿಲ್ಲ. ಮಕ್ಕಳಲ್ಲಿ ಕುತೂಹಲ ಹುಟ್ಟಿಸಿ, ಅವರಲ್ಲಿ ಸಹಜವಾಗಿರುವ ಪ್ರತಿಭೆ, ಕೌಶಲ್ಯಗಳನ್ನು ಉತ್ತೇಜಿಸುವ ಅಂಶಗಳು ಪಠ್ಯಕ್ರಮದಲ್ಲಿ ಬಹಳ ಕಡಿಮೆ. ಪರೀಕ್ಷೆ ಎಂದರೆ ಅಲ್ಲಿ ಒಂದು ರೀತಿಯ ಭಯದ ವಾತಾವರಣವೇ ಈ ವರೆಗೂ ಇರುವದು ಕಂಡುಬರುತ್ತದೆ
ಕಿರಿಯ ಪ್ರಾಥಮಿಕ ಹಂತದಲ್ಲಿಯೇ ಮಕ್ಕಳ ಶಿಕ್ಷಣಕ್ಕೆ ಭದ್ರವಾದ ತಳಹದಿ ಒದಗಿಸಿದರೆ ಮುಂದೆ ಅವರ ವ್ಯಕ್ತಿತ್ವ ವಿಕಾಸದ ದಾರಿ ಸುಗಮಗೊಳ್ಳಲು ಸಾಧ್ಯ. ಈ ಬಗ್ಗೆ ಸಾಕಷ್ಟು ಚಿಂತನೆ ನಡೆಸಿ, ತಮ್ಮ ಮೂವತ್ತೇಳು ವರ್ಷಗಳ ಶಿಕ್ಷಕ ವೃತ್ತಿಯ ಅನುಭವದ ಜೊತೆಗೆ ತಾಯಿಯಾಗಿ, ಅಜ್ಜಿಯಾಗಿ ಪಾಲಕರ ಹೊಣೆಗಾರಿಕೆಯನ್ನು ಸರಿಯಾಗಿ ಅರ್ಥಮಾಡಿಕೊಂಡ ಡಾ|| ಜಯಶ್ರೀ ಎಸ್. ಮುದಿಗೌಡರ, ಅಪೂರ್ವವಾದ ಕಾಳಜಿಯಿಂದ, ಸ್ಪಷ್ಟವಾದ ತಿಳವಳಿಕೆಯಿಂದ ಪ್ರಸ್ತುತ ಗ್ರಂಥವನ್ನು ರಚಿಸಿದ್ದಾರೆ. “ಬೆಸುಗೆಯ ನಿಟ್ಟು” ಎಂಬ ಮೊದಲ ಭಾಗದಲ್ಲಿ ೧) ಮನೆ ಮತ್ತು ತಾಯಿ ೨) ಶಿಕ್ಷಣ ಕ್ಷೇತ್ರ-ಹಿತಚಿಂತಕರು ಹಾಗೂ ೩) ಸಮಾಜ-ಹಿರಿಯರು ಅವಶ್ಯವಾಗಿ ಲಕ್ಷಿಸಬೇಕಾದ ಸಂಗತಿಗಳನ್ನು ಉಪಯುಕ್ತ ಸಲಹೆಗಳೊಂದಿಗೆ ವಿವರಿಸಲಾಗಿದೆ. ಬೋಧನೆಯ ಗರಿಷ್ಠ ಸಾಧನೆಯು ಶಿಕ್ಷಕರ ಸಂದರ್ಭೋಚಿತವಾದ ಬೋಧನಾ ಕಲೆಯ ಚಾಕಚಕ್ಯತೆಯಲ್ಲಿ ಮತ್ತು ಅವರ ವೃತ್ತಿ ಕಳಕಳಿಯಲ್ಲಿ ಅಡಗಿರುವುದನ್ನು ಎತ್ತಿ ತೋರಿಸಲಾಗಿದೆ.

Additional information

Category

Author

Publisher

Language

Kannada

Book Format

Ebook

Reviews

There are no reviews yet.

Only logged in customers who have purchased this product may leave a review.