ಅರೆಶತಮಾನದ  ಅಲೆಬರಹಗಳು
ಕನ್ನಡದ ಲೇಖಕ-ಚಿಂತಕ-ರಂಗಕರ್ಮಿಯಾಗಿದ್ದ ಕೆ.ವಿ. ಸುಬ್ಬಣ್ಣ (೧೯೩೨-೨೦೦೫) ಅವರು ಸುಮಾರು ಐವತ್ತು ವರ್ಷಗಳ ಕಾಲ ಬೇರೆಬೇರೆ ಸಂದರ್ಭಗಳಲ್ಲಿ ಬರೆದ ಲೇಖನಗಳ ಸಮಗ್ರ ಸಂಕಲನ ಇದು. ಪ್ರಸ್ತುತ, ಪರಿಷ್ಕೃತ ಎರಡನೆಯ ಆವೃತ್ತಿಯಲ್ಲಿ ಆರು ವಿಭಾಗಗಳಿದ್ದು – ಸಮಾಜ, ಸಂಸ್ಕೃತಿ, ಸಾಹಿತ್ಯ, ಕಲೆಗಳು, ವ್ಯಕ್ತಿಗಳು ಮತ್ತು ಕೃತಿಗಳು – ಈ ವಿಚಾರಗಳನ್ನು ಕುರಿತ ಲೇಖನಗುಚ್ಛಗಳು ಇಲ್ಲಿ ಸೇರಿವೆ. ಸುಬ್ಬಣ್ಣನವರು ವಾಚಕರವಾಣಿಗೆ ಬರೆದ ಕಿರುಬರಹಗಳಿಂದ ಮೊದಲುಗೊಂಡು ಅವರ ಪೂರ್ಣಪ್ರಮಾಣದ ಪುಸ್ತಕಗಳೇ ಆದ `ಕವಿರಾಜಮಾರ್ಗ ಮತ್ತು ಕನ್ನಡ ಜಗತ್ತು?, `ಕುವೆಂಪುಗೆ ಪುಟ್ಟ ಕನ್ನಡಿ?ಗಳವರೆಗೆ ನಾನಾ ಬಗೆಯ ಬರವಣಿಗೆಗಳು ಇದರಲ್ಲಿ ಸೇರಿವೆ. `ಅಡಕೆಯ ಮಾನ?, `ಶ್ರೇಷ್ಠತೆಯ ವ್ಯಸನ?, `ಗೋಕುಲ ನಿರ್ಗಮನ?, `ನೀನಾಸಮ್ ಹಿನ್ನೆಲೆಯ ಸೆಲೆ?, `ರಂಗಭೂಮಿ ಮತ್ತು ಸಮುದಾಯ?, `ಗಂಧರ್ವ ಸಂವಹನ? – ಮೊದಲಾದ ೯೫ ಲೇಖನಗಳು ಇಲ್ಲಿವೆ. ಕನ್ನಡ ರಂಗಭೂಮಿ, ಸಾಹಿತ್ಯ, ಕಲೆಗಳು ಮತ್ತು ಸಮಕಾಲೀನ ವ್ಯಕ್ತಿಗಳು ಮತ್ತು ವಿದ್ಯಮಾನಗಳಿಗೆ ವಿಮರ್ಶಾತ್ಮಕವಾದ ಕ್ರಿಯಾಶೀಲ ಮನಸ್ಸೊಂದು ಪ್ರತಿಸ್ಪಂದಿಸಿದ ಬಗೆಯನ್ನು ಈ ಲೇಖನಗಳು ಪ್ರತಿಫಲಿಸುತ್ತವೆ. ಖ್ಯಾತ ವಿಮರ್ಶಕ ಟಿ.ಪಿ. ಅಶೋಕ ಅವರು ವಿಸ್ತಾರವಾದ ಪ್ರಸ್ತಾವನೆಯೊಂದಿಗೆ ಈ ಸಂಕಲನವನ್ನು ಸಂಪಾದನೆ ಮಾಡಿದ್ದಾರೆ.

Additional information

Category

Author

Publisher

Language

Kannada

Book Format

Ebook

Reviews

There are no reviews yet.

Only logged in customers who have purchased this product may leave a review.