ಯಾವುದಾದರೊಂದು ವಸ್ತು ಅಥವಾ ಘಟನೆಯೊಂದಿಗೆ ತಮ್ಮ ಅನುಭವ, ತಮ್ಮ ಹಾಸ್ಯ ಪ್ರವೃತ್ತಿಯನ್ನು ಸೇರಿಸಿ ಬರೆದಾಗ ಅದು ಸುಂದರ ಪ್ರಬಂಧವಾಗುತ್ತದೆ. ಈ ಸಂಕಲನವೂ ಅನೇಕ ವೈವಿಧ್ಯತೆಯಿಂದ ಕೂಡಿವೆ. ಲೇಖಕರ ಪ್ಲಸ್ ಪಾಯಿಂಟ ಎನಿಸಿದ ಅಣುಕುವಾಡ, ಹಾಸ್ಯ ಪಂಚಗಳು, ಅನೇಕ ಕವಿಗಳ ಗೀತೆಗಳು ಹಾಸ್ಯದೊಂದಿಗೆ ತಳಕು ಹಾಕಿಕೊಂಡಿದೆ. ಉದಾಹರಣೆಗೆ ಬೇಂದ್ರೆಯವರ ಗಂಗಾವತರಣ ಇಲ್ಲಿ ‘ಬೆಲ್ಲಾವತರಣ’ ವಾಗಿದೆ. ಹಾಗಂತ ಇಲ್ಲಿ ಎಲ್ಲವನ್ನೂ ಹಾಸ್ಯಮಯವನ್ನಾಗಿ ಮಾಡಿಲ್ಲ. ಹಾಸ್ಯದ ರೂಪದಲ್ಲಿ ಗಂಭೀರ ವಿಷಯಗಳು ಅಡಗಿವೆ. ಉದಾಹರಣೆಯಾಗಿ ಟ್ರಾಫಿಕ್ ಪೋಲಿಸರ ಕಾರ್ಯಕ್ಷಮತೆ, ಹೆಣ್ಣು ಮತ್ತು ಹಣತೆಯ ವಿವರಣೆ ಮುಂತಾದವು. ಅರ್ಥರಹಿತ ಜಾಹಿರಾತುಗಳನ್ನು ಕಾಲೆಳೆದಿದ್ದಾರೆ. ಪುರಾಣ ಪ್ರಸಂಗ‌ಗಳನ್ನು ಅಭ್ಯಸಿಸಿ ಅಲ್ಲಿಯೂ ಕೂಡ ಹಾಸ್ಯವನ್ನ ಸೃಷ್ಟಿಸಿದ್ದಾರೆ. ಒಟ್ಟಾರೆ ಹೇಳಬೇಕೆಂದರೆ ರಾಮನಾಥರ ಈ ಸಂಕಲನವನ್ನು ಒಮ್ಮೆ ಓದಲು ಶುರು ಮಾಡಿದರೆ ಅದನ್ನು ಮುಗಿಸುವವರೆಗೆ ನೆಮ್ಮದಿಯಾಗುವದಿಲ್ಲ.

Additional information

Author

Publisher

Book Format

Ebook

Language

Kannada

Pages

172

Year Published

2020

Category

Reviews

There are no reviews yet.

Only logged in customers who have purchased this product may leave a review.