ನನ್ನ ‘ಅಣ’ ಮೈಸೂರು ಅನಂತಸ್ವಾಮಿ:
ಅನೇಕ ಹಾಡುಗಳ ಲೋಕವನ್ನು ಕನ್ನಡ ಮನಸ್ಸಿನ ಮುಂದೆ ಹರಡಿದವರು ಮೈಸೂರು ಅನಂತಸ್ವಾಮಿ. ಕನ್ನಡ ಸಾಹಿತ್ಯ ಜನಸಾಮಾನ್ಯರ ಮನವನ್ನು ಹೊಕ್ಕಿದ್ದರೆ ಅದರಲ್ಲಿ ಹಿರಿದಾದ ಪಾತ್ರ ಮೈಸೂರು ಅನಂತಸ್ವಾಮಿಯವರದ್ದು. ಗೆಳತಿ ಎಚ್ ಎನ್ ಆರತಿ ಕಾರಣದಿಂದಾಗಿ ನಾನು ಮೈಸೂರು ಅನಂತಸ್ವಾಮಿ ಯವರ ಕುಟುಂಬ ಲೋಕದಲ್ಲಿ ಸೇರುತ್ತಾ ಹೋದೆ. ನಾನು ನಂತರ ‘ಈಟಿವಿ’ಗೆ ಬಂದಾಗಲೂ ಸುನೀತಾ ನನಗೆ `ಜನ ಗಣ ಮನ’ವನ್ನು ಸೃಷ್ಟಿಸಿಕೊಟ್ಟರು. ಈ ಕಾರ್ಯಕ್ರಮವಂತೂ ಅಮೆರಿಕಾದ ಹಲವು ಗಾಯಕರನ್ನು ಒಟ್ಟಿಗೆ ಬೆಸೆದ ಕಾರ್ಯಕ್ರಮ. ಹೊರನಾಡಿನಲ್ಲಿದ್ದು ಭಾರತವನ್ನು ಮಿಸ್ ಮಾಡಿಕೊಳ್ಳುತ್ತಿದ್ದವರು ಎದೆ ತುಂಬಿ ಹಾಡಿದರು. ಆ ನಂತರ ಸುನೀತಾ ಅಮೆರಿಕಾದ ಕನ್ನಡ ಲೋಕವನ್ನು ಪರಿಚಯಿಸುವ `ಹಾಯ್ ಅಮೆರಿಕಾ’ ಸರಣಿಯನ್ನು ರೂಪಿಸಿಕೊಟ್ಟರು.
ಅವರ ಜೊತೆ ನಡೆದ ನಿರಂತರ ಸಂವಾದದಿಂದ. ಆಕೆಯ ಶಿಸ್ತು, ಒಳನೋಟ ನನಗೆ ಈ ವೇಳೆಗೆ ಗೊತ್ತಾದ ಕಾರಣ `ಅವಧಿ’ (avadhimag.com) ಗೆ ಯಾಕೆ ಅಣ್ಣನ ಬಗ್ಗೆ ಬರೆಯಬಾರದು ಎಂದು ಕೇಳಿದೆ. ಸುನೀತಾ ಸದಾ ಉತ್ಸಾಹದ ಚಿಲುಮೆ. ಸಾಧ್ಯವಿಲ್ಲ ಎನ್ನುವ ಮಾತೇ ಗೊತ್ತಿರದ ಹುಡುಗಿ. ಹಾಗಾಗಿ ಅದರ ಬಗ್ಗೆ ಹೋಮ್ ವರ್ಕ್ ಶುರು ಮಾಡಿಯೇ ಬಿಟ್ಟರು.
ಈ ಕೃತಿ ಮೈಸೂರು ಅನಂತಸ್ವಾಮಿಯವರ ಬಗ್ಗೆ ಗೊತ್ತಿಲ್ಲದ ಅನೇಕ ಸಂಗತಿಗಳನ್ನು ನಮ್ಮ ಮುಂದಿಟ್ಟಿದೆ. ಕುವೆಂಪು ಹಾಗೂ ಕಾಳಿಂಗರಾಯರ ಬಗ್ಗೆ ಅವರಿಗಿದ್ದ ಅಗಾಧ ಪ್ರೀತಿಯನ್ನು ಪರಿಚಯಿಸುತ್ತದೆ. ಅವರ ತುಂಟತನ, ಹಾಸ್ಯ ಮನೋಭಾವದ ಝಲಕ್ ನೀಡುತ್ತದೆ. ಮೈಸೂರು ಅನಂತಸ್ವಾಮಿಯವರ ಬಗ್ಗೆ ಅವರ ಕುಟುಂಬದವರೇ ಬರೆದ ಮೊದಲ ಕೃತಿ ಇದು. ಸುನೀತಾ ತಮ್ಮ ಸಂಗ್ರಹದಲ್ಲಿದ್ದ ಅತಿ ಅಪರೂಪದ ಫೋಟೋಗಳನ್ನು ಜೊತೆಗೂಡಿಸುವುದರ ಮೂಲಕ ಈ ಕೃತಿಯ ಮೌಲ್ಯವನ್ನು ಇನ್ನಷ್ಟು ಹೆಚ್ಚಿಸಿದರು.
Reviews
There are no reviews yet.