ಸೆಪ್ಟಂಬರ್ 11,2001ರ ಮುಂಜಾನೆ ಅಮೆರಿಕದ ಕೀರ್ತಿ ಶಿಖರಗಳಾದ ಪೆಂಟಗಾನ್ ಮತ್ತು ವರ್ಲ್ಡ್ ಟ್ರೇಡಿಂಗ್ ಸೆಂಟರ್ ಕಟ್ಟಡಗಳೊಳಕ್ಕೆ ಒಸಾಮಾ ಬಿನ್ ಲ್ಯಾಡೆನ್‍ನ ಅನುಚರರು ತುಂಬಿದ ವಿಮಾನಗಳನ್ನು ನುಗ್ಗಿಸಿ ನೆಲಸಮ ಮಾಡಿದ ಘಳಿಗೆಯಿಂದ ಈಚೆಗೆ ಇಡೀ ಜಗತ್ತೇ ಮುಸ್ಲಿಂ ಪ್ರಪಂಚದೆಡೆಗೆ ಬೇರೆಯದೇ ಅವಗಾಹನೆಯಿಟ್ಟುಕೊಂಡು ನೋಡತೊಡಗಿದೆ. ಭಾರತ ದೇಶದಲ್ಲಿ ನಮ್ಮ ಮನೆ-ಶಾಲೆ-ಕಚೇರಿಗಳ ಆಸುಪಾಸಿನಲ್ಲಿ, ಇಲ್ಲಿನ ಮಸೀದಿಗಳಲ್ಲಿ, ಮಾರುಕಟ್ಟೆಗಳಲ್ಲಿ ಕಾಣಸಿಗುವ, ನಮ್ಮ ಬಾಲ್ಯದ ಗೆಳೆಯರಂತಹ, ಅಣ್ಣ ತಮ್ಮಂದಿರಂತಹ ಸಾತ್ವಿಕ ಮುಸಲ್ಮಾನರನ್ನು ನೋಡುವುದು ಬೇರೆ. ಕರಾರುವಾಕ್ಕಾಗಿ ವರ್ಷಕ್ಕೊಂದು ಸಲ ಧರ್ಮಯುದ್ಧ ಮಾಡಬೇಕು, ಮುಸ್ಲಿಮರಲ್ಲದ ‘ಕಾಫಿರ’ರನ್ನ (non believers), ಬೈಬಲ್ ಎಂಬ ಪುಸ್ತಕಕ್ಕೆ ನಿಷ್ಠರಾಗಿರುವ ಕ್ರಿಶ್ಚಿಯನ್ನರನ್ನ, ಯಹೂದಿಗಳನ್ನ, ಹಿಂದೂಗಳನ್ನ ಮತ್ತು ಬೌದ್ಧರನ್ನ ನಿರ್ನಾಮ ಮಾಡುವ ತನಕ (ಅಥವಾ ಅವರು ಇಸ್ಲಾಂ ಧರ್ಮವನ್ನು ಅಂಗೀಕರಿಸುವ ತನಕ) ನಿರಂತರವಾಗಿ ಪ್ರತಿಯೊಬ್ಬ ಸದೃಢ ಮುಸ್ಲಿಂ ಗಂಡಸೂ ಜಿಹಾದ್ ಎಂದು ಕರೆಯಲ್ಪಡುವ ಧರ್ಮಯುದ್ಧವನ್ನು ಮಾಡುತ್ತಲೇ ಇರಬೇಕು ಎಂದು ನಂಬಿ, ಅದಕ್ಕಾಗಿ ಮನೆ, ಸಂಸಾರ, ವ್ಯವಸಾಯ, ಕೂಲಿ, ಓದು, ಕಡೆಗೆ ದೇಶವನ್ನೂ ತೊರೆದು ಹೆಗಲಿಗೆ ಬಂದೂಕು ತೊಡಿಸಿ ರಕ್ತ ಪಿಪಾಸುಗಳಂತೆ ಸಾವಿರಾರು ಮೈಲಿ ಅಲೆಯುತ್ತ ಹತ್ಯೆಗಳನ್ನೆಸಗುವ ಇಸ್ಲಾಮಿಕ್ ಧರ್ಮ ಯೋಧರನ್ನು ನೋಡುವುದೇ ಬೇರೆ. ನಾನು ನೋಡಿ ಬಂದ ಜಗತ್ತು ಅಂಥ ಮುಸಲ್ಮಾನರದು. ಒಬ್ಬ ಬ್ರಾಹ್ಮಣ ಮನುಸ್ಮತಿಯ ಪ್ರಕಾರ ‘ಯಾವ ಹೆಣ್ಣೂ ಸ್ವಾತಂತ್ರ್ಯಕ್ಕೆ ಅರ್ಹಳಲ್ಲ’ ಎಂದು ಘೋಷಿಸಿದರೆ ಅವನನ್ನು ನಾನು ಎಂಥ ತಿರಸ್ಕಾರದಿಂದ ನೋಡುತ್ತೇನೆಯೋ ಅದೇ ರೀತಿ ಒಬ್ಬ ಮುಸಲ್ಮಾನ, ಇಸ್ಲಾಂ ಧರ್ಮದ ಹಾಗೂ ಪವಿತ್ರ ಗ್ರಂಥ ಕುರಾನದ ಪ್ರಕಾರ ‘ಹಿಂದೂಗಳು ಮತ್ತು ಬೌದ್ಧ ಧರ್ಮೀಯರು ಇಸ್ಲಾಂ ಧರ್ಮಕ್ಕೆ ಶರಣಾಗದೆ ಹೋದರೆ ಅವರನ್ನು ಕೊಂದು ಹಾಕಬೇಕು. ಹಾಗೆ ಕೊಲ್ಲುವಾಗ ಮಕ್ಕಳು, ಸ್ತ್ರೀಯರು ವೃದ್ಧರು ಮತ್ತು ಅಂಗವಿಕಲರು ಮುಂತಾದವರನ್ನು ಕೊಲ್ಲದಂತೆ ಎಚ್ಚರಿಕೆ ವಹಿಸಬೇಕು. ಏಕೆಂದರೆ, ಸೆರೆಸಿಕ್ಕ ಸ್ತ್ರೀಯರು ನಮ್ಮ ಸ್ವತ್ತುಗಳಾಗಿರುತ್ತಾರೆ. ಅವರನ್ನು ಕೊಲ್ಲುವುದು ಸರಿಯಲ್ಲ. ಆದರೆ ಇಸ್ಲಾಮಿಕ್ ಕಾನೂನನ್ನು ಗೌರವಿಸದೆ ಹೋದಲ್ಲಿ ಇಡೀ ಜನಾಂಗವನ್ನೇ ಕೊಂದು ಬಿಡಬಹುದು’ ಎಂದು ಹೇಳಿದರೆ-ಅವನನ್ನು ನಾನು ಅದೇ ತಿರಸ್ಕಾರದಿಂದ ನೋಡುತ್ತೇನೆ.
ಇತಿಹಾಸ ಓದಿಕೊಂಡಿರುವ ನನಗೆ ನೆಲದಿಂದ ನೆಲಕ್ಕೆ, ದೇಶದಿಂದ ದೇಶಕ್ಕೆ ಕಾನೂನು ಕಟ್ಟಳೆ, ಸಂಪ್ರದಾಯಗಳು ಬದಲಾಗುತ್ತವೆಂದು ಚೆನ್ನಾಗಿ ಗೊತ್ತು. ಯೂರಪ್‍ನಲ್ಲಿ ಇವತ್ತು ಸಲಿಂಗ ಕಾಮಿಗಳು ಶಾಸನಸಭೆಯಲ್ಲಿ ತಮಗೆ ಮೀಸಲಾತಿ ನೀಡಬೇಕು ಎಂದು ಬೃಹತ್ ಮೆರವಣಿಗೆಗಳನ್ನು ಮಾಡುತ್ತಿದ್ದಾರೆ.

Additional information

Category

Author

Publisher

Book Format

Ebook

Pages

300

Language

Kannada

Year Published

2002

Reviews

There are no reviews yet.

Only logged in customers who have purchased this product may leave a review.