‘ತ್ರೀ ಪೆನ್ನಿ ಅಪೇರಾ’ ಬ್ರೆಖ್ಟ್‌ನ ಮುಖ್ಯ ನಾಟಕಗಳಲ್ಲಿ ಒಂದು. ಎಪಿಕ್ ನಾಟಕ ಶೈಲಿಯ ಮೊದಲ ಹಾಗೂ ಉತ್ಕೃಷ್ಟ ನಾಟಕ. 18ನೇ ಶತಮಾನದ ಇಂಗ್ಲೆಂಡ್‍ನ ಜಾನ್‍ಗೇ ಎಂಬಾತ ಬರೆದ ‘ಬೆಗ್ಗರ್ಸ್ ಅಪೇರಾ’ವನ್ನು ಬಹುಮಟ್ಟಿಗೆ ಆಧರಿಸಿದ ಈ ನಾಟಕ ಅಂತಿಮವಾಗಿ ಅದಕ್ಕಿಂತ ತೀರ ಬೇರೆಯಾದ, ಬ್ರೆಖ್ಟ್‌ನ ಸ್ವಂತದ ದರ್ಶನವನ್ನು ಬಿಂಬಿಸುವ ಅನನ್ಯ ಕೃತಿಯಾಗಿದೆ. ಜಗತ್ತಿನಾದ್ಯಂತ ಅಸಂಖ್ಯ ಭಾಷೆಗಳಲ್ಲಿ ಅನುವಾದಗೊಂಡ ಈ ನಾಟಕ ಎಲ್ಲ ಕಡೆ ರಂಗದ ಮೇಲೆ ಅಪಾರ ಯಶಸ್ಸು ಗಳಿಸಿಕೊಂಡಿದೆ. ನಿರ್ದೇಶಕರನ್ನು, ನಟರನ್ನೂ ಅನಂತರ ಪ್ರೇಕ್ಷಕರನ್ನೂ ಹಾಗೆ ಆಕರ್ಷಿಸುವಲ್ಲಿ ಇದು ವಿಶ್ವ ನಾಟಕಗಳಲ್ಲೇ ಪ್ರಥಮ ಪಂಕ್ತಿಯದಾಗುತ್ತದೆ.
…ಪ್ರೇಮ ದಾಂಪತ್ಯ ಕರುಣಗಳಂಥ ಮೂಲಭೂತ ಮೌಲ್ಯಗಳೇ ಢಾಂಭಿಕ ನಟನೆಯಾಗುವ ದುರಂತವನ್ನು ಕಂಡು ಬ್ರೆಖ್ಟ್ ಭಾವುಕನಾಗಿ ಅಳುವುದಿಲ್ಲ; ಗಹಗಹಿಸಿ ನಗುತ್ತಾನೆ… ಈ ಅಪಮೌಲ್ಯಕ್ಕೆ ಕಾರಣವಾದ ಬಂಡವಾಳಶಾಹೀ ಸಂಸ್ಕೃತಿ ಚರಿತ್ರೆಯ ಕೊನೆಯ ಘಟ್ಟವಲ್ಲ, ಮನುಷ್ಯನ ಸ್ಥಾಯೀ ಸ್ಥಿತಿಯಲ್ಲ ಎಂಬುದು ಬ್ರೆಖ್ಟ್‌ನ ವಿಶ್ವಾಸ. ಇದು ಬದಲಾಗುವಂಥಾದ್ದು ಎಂಬುದು ಅವನ ನಂಬಿಕೆ, ಬದಲಿಸಬೇಕು ಎಂಬುದು ಅವನ ರಾಜಕೀಯ ಆಶಯ.
ಪ್ರಸ್ತುತ ಅನುವಾದವು ಉದ್ದಕ್ಕೂ ರಂಗಪ್ರದರ್ಶನದ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡದ್ದು; ಈಗಾಗಲೇ ಕರ್ನಾಟಕದ ಅನೇಕ ಕಡೆಗಳಲ್ಲಿ ಪ್ರದರ್ಶಿತವಾಗಿ ಒಪ್ಪಿತವಾದದ್ದು.
Reviews
There are no reviews yet.