ಮೊದಲಿನಿಂದಲೂ ಸತಿ ಸಾವಿತ್ರಿ, ಗಾಂಧಾರಿ, ಸೀತೆ, ಮಾದ್ರಿ ಹೀಗೆ ಹಲವಾರು ಉದಾಹರಣೆಗಳೊಂದಿಗೆ ಪುರುಷಾನುಸಾರಿಯಾಗಿರುವಂತೆಯೇ ಅವಳ ಬದುಕನ್ನು ವೈಭವೀಕರಿಸಲಾಯಿತು. ಪುರಾಣ, ಇತಿಹಾಸ, ವರ್ತಮಾನ ಎಲ್ಲಾ ಕಾಲದ ಸಾಹಿತಿಗಳು ಪ್ರಮುಖ ಸ್ತ್ರೀ ಪಾತ್ರಗಳಲ್ಲಿ ಹುಡುಕಿದ್ದು ಸಾಂಪ್ರದಾಯಿಕ ಕಟ್ಟುಕಟ್ಟಲೆಯ ನೀತಿ ನಿಯಮಗಳಲ್ಲಿ ಬಂಧಿತವಾದ ಮಹಿಳೆಯನ್ನೇ. ಅವಳೇ ಸ್ತ್ರೀತ್ವಕ್ಕೆ ಒಂದು ಮಾದರಿಯೂ ಆದಳು! ಪಠ್ಯಪುಸ್ತಕಗಳಲ್ಲಿಯೂ ಇದೇ ಮಾದರಿಯ ಸ್ತ್ರೀತ್ವವನ್ನು ಬೋಧಿಸಲಾಯಿತು. ೭೦ರ ದಶಕದ ನಂತರ ಈ ಎಲ್ಲಾ ಪಾತ್ರಗಳನ್ನು ಮರುಚಿಂತನೆಗೆ ಒಳಪಡಿಸಲಾಯಿತು. ಬುದ್ಧನನ್ನು ಪ್ರಶ್ನಿಸುವ ಯಶೋಧರೆ, ಇಡೀ ಪ್ರಭುತ್ವವನ್ನು ಪ್ರಶ್ನಿಸುವ ಅಮೃತಮತಿ, ಸಾಮಾಜಿಕ ಮೌಲ್ಯಗಳನ್ನು ಪ್ರಶ್ನಿಸುವ ದ್ರೌಪದಿ, ಮುಂದೆ ಪುರುಷ ಪ್ರಧಾನತೆಯನ್ನು ಪ್ರಶ್ನಿಸುವ ಅಕ್ಕಮಹಾದೇವಿ ಇಂಥ ಪಾತ್ರಗಳ ದಿಟ್ಟ, ನೇರ ನಡೆಯ ಮುಖಾಂತರ ಸ್ತ್ರೀ ಸ್ವಾತಂತ್ರ್ಯವನ್ನು ಸಮಾನತೆಯನ್ನು ಎತ್ತಿ ಹಿಡಿಯಲಾಯಿತು. ಇದು ಸಾಮಾಜಿಕ ಸಂಕಷ್ಟಗಳನ್ನು ಪ್ರಶ್ನಿಸಿದ ಬಗೆಯ ರಚನೆಯಾದರೆ ಸ್ವಾನುಭವನಿಷ್ಠ ಕೃತಿಗಳಲ್ಲಿ ಸದ್ಯದ ಸಮಕಾಲೀನ ವಿದ್ಯಮಾನಗಳ ಹಿನ್ನೆಲೆಯಲ್ಲಿ ಸ್ತ್ರೀತ್ವದ ಘನತೆಯನ್ನು ಎತ್ತಿಹಿಡಿಯುವ ಧೈರ್ಯವನ್ನು ನಮ್ಮ ಲೇಖಕಿಯರು ದಿಟ್ಟತನದಿಂದ ನೆರವೇರಿಸುತ್ತಿದ್ದಾರೆ.

Additional information

Author

Publisher

Book Format

Ebook

Language

Kannada

Pages

184

Year Published

2021

ISBN

978-81-953845-7-0

Category

Reviews

There are no reviews yet.

Only logged in customers who have purchased this product may leave a review.