ಮಳೆಬಿಲ್ಲು
ಕಾಲೇಜು ವಿದ್ಯಾರ್ಥಿಗಳಿಗಾಗಿ ಏಕಾಂಕ ನಾಟಕಗಳು ಮತ್ತು ರೂಪಕಗಳು

ಶಿಕ್ಷಣದ ಜತೆಗೆ ವಿದ್ಯಾರ್ಥಿಗಳ ಪ್ರತಿಭಾ ಪ್ರದರ್ಶನಕ್ಕೆ ವೇದಿಕೆಯನ್ನೊದಗಿಸುವುದು ಪ್ರತಿಯೊಂದು ಕಾಲೇಜಿನ ಕರ್ತವ್ಯ. ಯಾಕೆಂದರೆ ಶಿಕ್ಷಣವೆಂದರೆ ಬರೇ ಪಾಠ ಪಟ್ಟಿಯಲ್ಲಿರುವ ಪುಸ್ತಕಗಳ ಓದು, ಅಧ್ಯಯನ, ಪರೀಕ್ಷೆ, ಅಂಕಗಳು ಮತ್ತು ಪದವಿ ಪಡೆಯುವುದಲ್ಲ. ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸುವುದು ವಿದ್ಯಾರ್ಥಿಯ ಶಿಕ್ಷಣವನ್ನು ಪೂರ್ತಿಗೊಳಿಸುತ್ತದೆ. ಕೇವಲ ವಾರ್ಷಿಕೋತ್ಸವದ ಸಂದರ್ಭಗಳಲ್ಲಿ ಮಾತ್ರವಲ್ಲದೆ ವರ್ಷದುದ್ದಕ್ಕೂ ಇಂಥ ಚಟುವಟಿಕೆಗಳಿಗೆ ವಿದ್ಯಾರ್ಥಿಗಳಿಗೆ ಅವಕಾಶ ಸಿಗಬೇಕು ಎನ್ನುವ ದೃಷ್ಟಿಯಿಂದ ವಿಶ್ವವಿದ್ಯಾನಿಲಯಗಳು ಇಂದು ಪಠ್ಯೇತರ ಚಟುವಟಿಕೆಗಳಲ್ಲಿ ಮಾಡುವ ಸಾಧನೆಗಳಿಗೂ ಅಂಕಗಳನ್ನು ನೀಡತೊಡಗಿರುವುದು ಸ್ವಾಗತಾರ್ಹ.

ವಿದ್ಯಾರ್ಥಿಗಳು ಇವತ್ತು ಸುಲಭ ಸಾಧ್ಯವಾಗುವಂಥ ಕಲಾ ಚಟುವಟಿಕೆಗಳಿಗೆ ಆದ್ಯತೆ ನೀಡಿ ಯಾವುದೇ ರೀತಿಯ ತಾಲೀಮು ನಡೆಸದೆಯೇ ಸುಮ್ಮನೆ ಮೈಕುಲುಕಿಸುವ , ಕಸರತ್ತಿನಂತೆ ಕಾಣುವ ನೃತ್ಯಗಳನ್ನು ಧ್ವನಿಸುರುಳಿಗಳ ಅಬ್ಬರದ ಸಂಗೀತಕ್ಕೆ ಹೆಜ್ಜೆ ಹಾಕಿ ಕುಣಿಯುವುದನ್ನೇ ಮಹಾಪ್ರತಿಭೆ ಎಂದು ತಪ್ಪಾಗಿ ತಿಳಿದುಕೊಂಡು ಪ್ರದರ್ಶನ ನೀಡುತ್ತಾರೆ. ನಾಟಕ ಪ್ರದರ್ಶನದ ಪ್ರತಿಭೆ ಅವರಲ್ಲಿ ಇಲ್ಲವೆಂದಲ್ಲ. ಆದರೆ ಅದಕ್ಕೆ ನಿರ್ದೇಶಕನಾದವನು ಗ್ರಂಥಾಲಯಕ್ಕೆ ಹೋಗಿ ಒಳ್ಳೆಯ ನಾಟಕವನ್ನು ಆಯ್ಕೆ ಮಾಡಿಕೊಳ್ಳಬೇಕು, ನಟನೆಯ ಪ್ರತಿಭೆಯಿರುವ ಹಲವರನ್ನು ಸೇರಿಸಬೇಕು, ಸಂಭಾಷಣೆಗಳನ್ನು ಧ್ವನಿಪೂರ್ಣವಾಗಿ ನಿರ್ವಹಿಸಲು ಕಲಿಯಬೇಕು, ಬಾಯಿಪಾಠ ಮಾಡಿಕೊಳ್ಳಬೇಕು, ಚಲನವಲನ-ಹಾವಭಾವಗಳ ಬಗ್ಗೆ ಅಧ್ಯಯನ ನಡೆಸಬೇಕು, ರಂಗ ಪರಿಕರ, ವೇಷಭೂಷಣ, ಬೆಳಕು, ಸಂಗೀತ-ಇವೆಲ್ಲದರ ಚಿತ್ರಣವನ್ನು ಮನಸ್ಸಿನಲ್ಲೇ ಚಿತ್ರಿಸಿಕೊಂಡು ಪ್ರದರ್ಶನಕ್ಕೆ ತಯಾರಿ ನಡೆಸಬೇಕು, ದಿನಗಟ್ಟಲೆ ತಾಲೀಮು ನಡೆಸಬೇಕು…ಒಂದೇ ಎರಡೇ..? ನಾಟಕವೆಂದರೆ ಒಂದು ಸಮೂಹ ಪ್ರಯತ್ನ. ಪಾತ್ರ ವಹಿಸುವ ಕಲಾವಿದರಲ್ಲಿ ಪ್ರತಿಭೆಯಿದ್ದರೆ ಸಾಲದು. ಶಿಸ್ತು, ಕರ್ತವ್ಯನಿಷ್ಠೆ, ತಂಡದವರೊಂದಿಗೆ ಹೊಂದಿಕೊಳ್ಳುವ ಗುಣ, ಸಿಕ್ಕಿದ ಪಾತ್ರ ಸಣ್ಣದಿರಲಿ ದೊಡ್ಡದಿರಲಿ ಏನೂ ಅಸಮಾಧಾನ ಪಡದೆ ಅದನ್ನು ಅಚ್ಚುಕಟ್ಟಾಗಿ ನಿರ್ವಹಿಸುವ ಮನೋಸಿದ್ಧತೆ ಇರಬೇಕು. ನಾಟಕ ಪ್ರದರ್ಶನದ ದಿವಸ ರಂಗದ ಹಿಂದೆಯೂ ಮುಂದೆಯೂ ಬೇಕಾದ ಎಲ್ಲ ಕೆಲಸಗಳಿಗೆ ಸಹಕಾರ ನೀಡುವ ಮನೋಭವ ಇರಬೇಕು. ಒಂದು ತಂಡವು ಇಷ್ಟು ಚೆನ್ನಾಗಿ ಕೆಲಸ ಮಾಡಿ ನಾಟಕ ಯಶಸ್ಸು ಗಳಿಸಿತೆಂದರೆ ಅದರಲ್ಲಿ ಸಿಗುವ ಆನಂದ ಹೇಳತೀರದು. ವಿದ್ಯಾರ್ಥಿಗಳ ಪಾಲಿಗೆ ಇದೊಂದು ಸಂಘಜೀವನದ ಪಾಠವೂ ಆಗುತ್ತದೆ ಮತ್ತು ಪರಿಣಮವಾಗಿ ಅವರರ ವ್ಯಕ್ತಿತ್ವ ವಿಕಸನಕ್ಕೂ ದಾರಿಯಾಗುತ್ತದೆ.

Additional information

Category

Author

Book Format

Ebook

Language

Kannada

Publisher

Reviews

There are no reviews yet.

Only logged in customers who have purchased this product may leave a review.