ಸುಮಾರು ಮೂರುವರೆ ದಶಕದಲ್ಲಿ ಕಥೆ, ಕವನ, ಕಾದಂಬರಿ, ಮಕ್ಕಳ ಸಾಹಿತ್ಯ, ಹಾಸ್ಯ, ನಾಟಕ, ಜೀವನ ಚರಿತ್ರೆ ಮುಂತಾದ ಸಾಹಿತ್ಯದ ಹಲವು ಪ್ರಕಾರಗಳ ಕೃತಿ ರಚನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವವರು ಶ್ರೀಮತಿ ಕೆ.ಎಂ.ವಿಜಯಲಕ್ಷ್ಮಿ ಅವರು. ಅವರ ಕಥೆಗಳು, ಕಾದಂಬರಿಗಳು, ಅಂಕಣ ಬರಹಗಳು ಸಾಹಿತಿಗಳ ಗಮನ ಸೆಳೆದಿವೆ. ಅವರ ನಾಟಕಗಳು ಹಾಗೂ ಮಕ್ಕಳ ನಾಟಕಗಳು ನೋಡುಗರ ಮನರಂಜಿಸಿವೆ.
ಕಥೆ, ಕಾದಂಬರಿಗಳನ್ನು ಬರೆಯುವದರಲ್ಲಿ ತೋರಿಸುವ ಉತ್ಸಾಹ, ಶ್ರದ್ಧೆ ಮತ್ತು ಆಸಕ್ತಿಯನ್ನೇ, ಈ ‘ಮಹಿಳಾಭಿನಂದನ’ ಕೃತಿಯನ್ನು ರಚಿಸುವಲ್ಲಿ ಮತ್ತು ಇದಕ್ಕಾಗಿ ಅಗತ್ಯ ಮಾಹಿತಿಗಳನ್ನು ಸಂಗ್ರಹಿಸುವಲ್ಲಯೂ ಅವರು ತೋರಿರುವುದು ಕಾಣುತ್ತದೆ ಕನ್ನಡದ ಚರಿತ್ರೆ, ಭಾಷೆ ಮತ್ತು ಮಹಿಳಾ ಸಾಹಿತ್ಯದಲ್ಲಿ ವಿಜಯಲಕ್ಷ್ಮಿ ಅವರಿಗಿರುವ ಆಳವಾದ ಪ್ರೀತಿ ಹಾಗೂ ಶ್ರದ್ಧೆಗಳೇ; ಕಳೆದ ಶತಮಾನದ ಏಳನೇ ದಶಕದಿಂದ ಪ್ರಕಟಗೊಂಡಿರುವ ಅಭಿನಂದನ ಮತ್ತು ಸಂಸ್ಮರಣ ಗ್ರಂಥಗಳ ಕುರಿತು ಮಾಹಿತಿ ಸಂಗ್ರಹಿಸುವ ಕಾರ್ಯದಲ್ಲಿ ಸಾಕಷ್ಟು ಯಶಸ್ಸನ್ನು ದೊರಕಿಸಿ ಕೊಟ್ಟಿವೆ ಎನ್ನಬಹುದು.
Reviews
There are no reviews yet.