Ebook

ಲಕ್ಷ್ಮೀಶನ ಜೈಮಿನಿಭಾರತ ಪ್ರವೇಶ

Author: K V Subbanna

60.00

ಲಕ್ಷ್ಮೀಶನ ಜೈಮಿನಿಭಾರತ ಪ್ರವೇಶ
ಲಕ್ಷ್ಮೀಶ
ಕನ್ನಡನಾಡಿನ ಕಾವ್ಯವಾಚನ ಸಂಪ್ರದಾಯಗಳಿಗೆ ಅತ್ಯಂತ ಪ್ರೀತಿಪಾತ್ರನಾಗಿರುವ ಲಕ್ಷ್ಮೀಶ ತನ್ನ ಪ್ರಸಿದ್ಧ ‘ಜೈಮಿನಿ ಭಾರತ’ವನ್ನು ರಚಿಸಿದ್ದು ಸಂಸ್ಕೃತದ ಜೈಮಿನಿಯ ‘ಅಶ್ವಮೇಧಪರ್ವ’ ಎಂಬ ಕೃತಿಯನ್ನು ಆಧರಿಸಿ. ಈತ ಸುಮಾರಾಗಿ ಕ್ರಿ.ಶ. ೧೬ನೆಯ ಶತಮಾನದ ಪ್ರಥಮಾರ್ಧದಲ್ಲಿ ಬದುಕಿ ಕಾವ್ಯರಚನೆ ಮಾಡಿದ್ದಾನೆಂದು ಭಾವಿಸಲಾಗಿದೆಯಾದರೂ ವಿದ್ವಾಂಸರು ಕ್ರಿ.ಶ. ೧೨ನೆಯ ಶತಮಾನದಿಂದ ೧೮ನೆಯ ಶತಮಾನದವರೆಗೂ ಈತನ ಕಾಲವನ್ನು ಬೇರೆಬೇರೆ ಆಧಾರಗಳ ಮೂಲಕ ವಿಭಿನ್ನವಾಗಿ ವ್ಯಾಖ್ಯಾನಿಸಿದ್ದಾರೆ. ಇವತ್ತಿನ ಚಿಕ್ಕಮಗಳೂರು ಜಿಲ್ಲೆಯ ದೇವನೂರು ಈತನ ಊರು ಎಂಬುದು ಸಾಧಾರಣವಾಗಿ ಒಪ್ಪಿತವಾಗಿದ್ದರೂ ಈತ ಗುಲ್ಬರ್ಗಾ ಜಿಲ್ಲೆಯ ಸುರಪುರ ಸಮೀಪದ ದೇವಪುರದವನು ಎಂಬ ವಾದವೂ ಇದೆ. ‘ಜೈಮಿನಿಭಾರತ’ವನ್ನು ಬಿಟ್ಟು ಇನ್ನಾವುದೇ ಕೃತಿಗಳನ್ನು ಆತ ರಚಿಸಿದ ಬಗ್ಗೆ ಉಲ್ಲೇಖಗಳಿಲ್ಲ. ಈತನ ಶೈಲಿಯನ್ನು ನೋಡಿ ಈತನಿಗೆ ‘ಉಪಮಾಲೋಲ’ ಎಂಬೊಂದು ವಿಶೇಷಣ ಒದಗಿಬಂದಿದೆ; ಈತನಿಗೆ ‘ಕರ್ಣಾಟಕ ಕವಿಚೂತವನಚೈತ್ರ’ ಎಂಬೊಂದು ಬಿರುದು ಕೂಡ ಮುಂದಿನ ಕವಿಗಳಿಂದ ಪ್ರಾಪ್ತವಾಗಿದೆ.
ಜೈಮಿನಿ ಭಾರತ ಕುರಿತ ಮುಖ್ಯ ಕೃತಿಗಳು

ಕೃತಿ ಸಂಪಾದನೆ:
ಲಕ್ಷ್ಮೀಶ ಕವಿಯ ಕನ್ನಡ ಜೈಮಿನಿ ಭಾರತ (ಸಂಪಾದಕರು: ದೇವುಡು ನರಸಿಂಹ ಶಾಸ್ತ್ರಿ ಮತ್ತು ಬಿ.ಶಿವಮೂರ್ತಿ ಶಾಸ್ತ್ರಿ)
ಕನ್ನಡ ಜೈಮಿನಿಭಾರತ (ಸಂ: ದಕ್ಷಿಣಾಮೂರ್ತಿ ಶಾಸ್ತ್ರಿ)
ಕನ್ನಡ ಜೈಮಿನಿಭಾರತ (ಸಂ: ಪಿ.ಆರ್. ಕರಿಬಸವ ಶಾಸ್ತ್ರಿ)
ಕನ್ನಡ ಜೈಮಿನಿಭಾರತ (ಸಂ: ದೊಡ್ಡಬೆಲೆ ಲ. ನಾರಾಯಣ ಶಾಸ್ತ್ರಿ)
ಕನ್ನಡ ಜೈಮಿನಿಭಾರತ (ಸಂ: ಕೆ. ನಂಜುಂಡ ಶಾಸ್ತ್ರಿ)
ಕನ್ನಡ ಜೈಮಿನಿಭಾರತ (ಸಂ: ಬಿ.ಎಸ್. ಕೃಷ್ಣಪ್ಪನವರು)
ಜೈಮಿನಿ ಭಾರತ ಸಂಗ್ರಹ (ಸಂ: ಜಿ. ಗುಂಡಣ್ಣ)

ಪುಸ್ತಕಗಳು:
ಕವಿ ಲಕ್ಷ್ಮೀಶ (ಚಿಕ್ಕಮಗಳೂರು ಕರ್ಣಾಟಕ ಸಂಘ, ೧೯೩೩)
ಲಕ್ಷ್ಮೀಶ (ಎನ್. ಅನಂತರಂಗಾಚಾರ್)
ಶ್ರೀ ಕವಿ ಲಕ್ಷ್ಮೀಶ (ಜಿ.ಎಸ್. ಸಿದ್ದಲಿಂಗಯ್ಯ)
ಮಹಾಕವಿ ಲಕ್ಷ್ಮೀಶನ ಜನ್ಮ ಮತ್ತು ಕಾಲ (ಸಿ.ಕೆ. ನಾಗರಾಜರಾವ್)

ಲೇಖನಗಳು:
ಕನ್ನಡ ಕವಿ ಲಕ್ಷ್ಮೀಶ (ಎಂ.ಗೋವಿಂದ ಪೈ)
ಲಕ್ಷ್ಮೀಶನ ಅಶ್ವಮೇಧ ಸಾದೃಶ್ಯಗಳು (ದ.ರಾ. ಬೇಂದ್ರೆ)
ಉಪಮಾಲೋಲ ಲಕ್ಷ್ಮೀಶ (ಕೆ.ವಿ. ಪುಟ್ಟಪ್ಪ)
ಲಕ್ಷ್ಮೀಶ (ತ.ಸು. ವೆಂಕಣ್ಣಯ್ಯ)
ಜೈಮಿನಿಭಾರತ: ವಿಚಾರ ವಿಮರ್ಶೆ (ಆರ್. ವಿ. ಜಾಗೀರದಾರ್)
ಜೈಮಿನಿಭಾರತ, ಲಕ್ಷ್ಮೀಶನ ಶೈಲಿ (ಕೀರ್ತಿನಾಥ ಕುರ್ತಕೋಟಿ)

Additional information

Category

Author

Publisher

Language

Kannada

Book Format

Ebook

Reviews

There are no reviews yet.

Only logged in customers who have purchased this product may leave a review.