Additional information
Category | |
---|---|
Author | |
Publisher | |
Language | Kannada |
Book Format | Ebook |
Original price was: ₹125.00.₹75.00Current price is: ₹75.00.
ಕೈಲಾಸ-ಮಾನಸ ಸರೋವರಗಳ ಯಾತ್ರೆ ಅದೊಂದು ಯಾತ್ರೆಗಳ ಯಾತ್ರೆ. ಅಗತ್ಯ ಮಾನಸಿಕ ಮತ್ತು ದೈಹಿಕ ದಾರ್ಢ್ಯತೆ ಇದ್ದರೆ ಮಾತ್ರ ಈ ಯಾತ್ರೆ ಪೂರೈಸಬಹುದು. ಭಾರತೀಯರ ಅದರಲ್ಲೂ ಹಿಂದೂ ಧರ್ಮಾನುಯಾಯಿಗಳ ಪಾಲಿಗೆ ಶಿವ ಆರಾಧ್ಯ ದೈವ. ದೇವಾನುದೇವತಗಳಲ್ಲಿ ಅಗಗ್ರಣ್ಯ. ಶಿವನ ಆವಾಸ ಸ್ಥಾನ ಕೈಲಾಸ ಪರ್ವತವೆಂದೂ, ವಿಷ್ಣುವಿನ ವಾಸಸ್ಥಾನ ಮಾನಸ ಸರೋವರವೆಂದೂ ಎಲ್ಲ ಭಾವುಕ ಭಕ್ತರ ತಲೆ ತಲಾಂತರದ ನಂಬಿಕೆ. ಪುರಾಣ, ಪುಣ್ಯಕತೆಗಳ ಪ್ರಕಾರ ಹಿಮಾಲಯ ಮತ್ತು ಕೈಲಾಸ ಪರಿಸರದ ಲೋಕ ದೇವಲೋಕ. ಜನಮಾನಸದಲ್ಲಿ ಈ ನಂಬಿಕೆ ಬೇರೂರಿನಿಂತಿದೆ. ಕೈಲಾಸ ಪರ್ವತ ಅದೊಂದು ಅಳಿವಿಲ್ಲದ ನೈಸರ್ಗಿಕ ಸ್ಥಾವರ. ಮಾನಸ ಸರೋವರ, ಕಿನ್ನರ ಲೋಕದ ಬತ್ತದ ಆಗರ. ಅವುಗಳ ಯಾತ್ರೆ ಆಸ್ತಿಕರ ಜೀವಮಾನದ ಆಶೆ.
ಕೈಲಾಸಮಾನಸದೊಂದಿಗೆ ಹಿಮಾಲಯ, ಟಿಬೆಟ್, ನೇಪಾಳ ಕುರಿತು ಹಲವಾರು ವಿಷಯಗಳನ್ನು ಪ್ರವಾಸದ ವೇಳೆ ಅರಿಯಲು ಸಾಧ್ಯವಾಯಿತು. ಆದ್ದರಿಂದ ಹಿಮಾಲಯದ ವಿಭಿನ್ನ ಪ್ರಾಕೃತಿಕ ವೈಚಿತ್ರ್ಯಗಳ ಬಗ್ಗೆ, ಪರಿಸರದ ಬಗ್ಗೆ ಕೆಲವು ಅಂಶಗಳು ಈ ಕಥನದಲ್ಲಿ ಸೇರಿಕೊಂಡಿವೆ.
Category | |
---|---|
Author | |
Publisher | |
Language | Kannada |
Book Format | Ebook |
Only logged in customers who have purchased this product may leave a review.
Reviews
There are no reviews yet.