ಕೆ.ವಿ. ಸುಬ್ಬಣ್ಣ ಅವರ ಆಯ್ದ ಲೇಖನಗಳು
ಕೆ.ವಿ. ಸುಬ್ಬಣ್ಣ (20 ಫೆಬ್ರವರಿ 1932 – 16 ಜುಲೈ 2005)

ತಂದೆ: ಕೆ.ವಿ. ರಾಮಪ್ಪ, ತಾಯಿ: ಸಾವಿತ್ರಮ್ಮ; ಹೆಂಡತಿ: ಶೈಲಜಾ, ಮಗ: ಅಕ್ಷರ ಕೆ.ವಿ.; ವಾಸ: ಮುಂಡಿಗೇಸರ, ಸಾಗರ ತಾ.; ವೃತ್ತಿ: ಕೃಷಿ (ಮುಖ್ಯವಾಗಿ ಅಡಿಕೆ).
ವಿದ್ಯಾಭ್ಯಾಸ – ಪ್ರಾಥಮಿಕ: ಭೀಮನಕೋಣೆ, ಸಾಗರ; ಇಂಟರ್‌ಮೀಡಿಯೆಟ್: ಶಿವಮೊಗ್ಗ; ಪದವಿ: ಬಿ.ಎ. ಆನರ್ಸ್: ಮೈಸೂರು ವಿಶ್ವವಿದ್ಯಾಲಯ, ಮೈಸೂರು, 1953 (ಪ್ರಥಮ ರ್‍ಯಾಂಕ್). 1954ರಿಂದ ಊರಿನಲ್ಲಿ ನೆಲೆಸಿ ಸ್ಥಳೀಯ ಸಂಸ್ಥೆಗಳೊಂದಿಗೆ ಕೆಲಸ, ನೀನಾಸಮ್ ಸಂಸ್ಥೆಯ ಸ್ಥಾಪಕ ಸದಸ್ಯ (ಸ್ಥಾಪನೆ:1949), ಅಕ್ಷರ ಪ್ರಕಾಶನ ಸಂಸ್ಥೆಯ ಮುಖ್ಯಸ್ಥ (ಆರಂಭ: 1957).
ಪ್ರಶಸ್ತಿಗಳು: ಸೋವಿಯೆತ್ ಲ್ಯಾಂಡ್ ನೆಹರೂ ಪ್ರಶಸ್ತಿ (‘ಗೋರ್ಕಿಯ ಕಥೆಗಳು’); ರಾಮೊನ್ ಮ್ಯಾಗ್‌ಸೆಸೆ ಪ್ರಶಸ್ತಿ (1991); ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ (‘ಕವಿರಾಜ ಮಾರ್ಗ ಮತ್ತು ಕನ್ನಡ ಜಗತ್ತು’); ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ; ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಮತ್ತು ಪುಸ್ತಕ ಬಹುಮಾನಗಳು (‘ಸೆಜುವಾನ್ ನಗರದ ಸಾಧ್ವಿ’, ‘ನಮ್ಮ ತವಕ ತಲ್ಲಣಗಳು’); ಮಧ್ಯಪ್ರದೇಶ ಸರ್ಕಾರದ ಕಾಳಿದಾಸ ಸಮ್ಮಾನ (2001).
ಕೆ.ವಿ. ಸುಬ್ಬಣ್ಣ: ಪ್ರಕಟಿತ ಕೃತಿಗಳು ಮತ್ತು ರಂಗಕೃತಿಗಳು

ಪ್ರಕಟಿತ ಪುಸ್ತಕಗಳು:
ಪ್ರಕಾಶಕರ ಹೆಸರು ಉಲ್ಲೇಖವಾದವನ್ನು ಬಿಟ್ಟರೆ ಉಳಿದವು ಅಕ್ಷರ ಪ್ರಕಾಶನದಿಂದ ಪ್ರಕಟವಾಗಿವೆ.
1950 – ಕೈಲಾಸಂ ದರ್ಶನ (ಸಂ.), ವಿಮರ್ಶಾತ್ಮಕ ಲೇಖನಗಳ ಸಂಕಲನ, ನೀಲಕಂಠೇಶ್ವರ ನಾಟ್ಯಸೇವಾಸಂಘ, ಹೆಗ್ಗೋಡು.
1952 – ನಾವು ತಿನ್ನುವ ಅಡಕೆ (ಪರಿಚಯ), ವಯಸ್ಕರ ಶಿಕ್ಷಣ ಸಮಿತಿ, ಮೈಸೂರು.
1952 – ಜೇನು ಸಾಕುವ ಬಗೆ (ಪರಿಚಯ), ವಯಸ್ಕರ ಶಿಕ್ಷಣ ಸಮಿತಿ, ಮೈಸೂರು.
1953 – ಗೋರ್ಕಿಯ ಕಥೆಗಳು (ಅನುವಾದ), ಮೊದಲ ಪ್ರಕಾಶಕರು: ಜನಶಕ್ತಿ ಪ್ರಕಾಶನ, ಬೆಂಗಳೂರು, ಅಕ್ಷರ ಪ್ರಕಾಶನದಿಂದ ಮರುಮುದ್ರಣಗಳು.
1954 – ಬಾಗಿನ (ಸಂ. ಹಾ. ಮಾ. ನಾಯಕರೊಂದಿಗೆ), ಎಸ್‌. ವಿ. ರಂಗಣ್ಣ ಸಂಭಾವನ ಗ್ರಂಥ, ಮಹಾರಾಜಾ ಕಾಲೇಜು, ಮೈಸೂರು.
1957 – ಅಭಿಸಾರ (ರೇಡಿಯೋ ನಾಟಕಗಳ ಸಂಕಲನ), ನೀಲಕಂಠೇಶ್ವರ ನಾಟ್ಯ ಸೇವಾ ಸಂಘ.
1957 – ಹೂವು ಚೆಲ್ಲಿದ ಹಾದಿಯಲ್ಲಿ (ಕವಿತೆಗಳು)
1958 – ದಶರೂಪಕ (ಧನಂಜಯನ ‘ದಶರೂಪಕ’ದ ಅನುವಾದ, ಸಂಸ್ಕೃತದಿಂದ, ಪ್ರಸ್ತಾವನೆ ವ್ಯಾಖ್ಯಾನ ಸಹಿತ), 1992ರಲ್ಲಿ ಎರಡನೇ ಮುದ್ರಣ.
1958 – ಅವರು ನೀಡಿದ ದೀಪ (ಜಾನಪದ ಸಾಹಿತ್ಯ ಪರಿಚಯ)
1970 – ಕಾಡಿನಲ್ಲಿ ಕಥೆ (ಮಕ್ಕಳ ನಾಟಕ)
1974 – ಚಲನಚಿತ್ರದ ಮಹಾನೌಕೆ (ಐಸೆನ್‌ಸ್ಟೈನ್ ಜೀವನ ಮತ್ತು ಕೃತಿ, ‘ಬ್ಯಾಟಲ್‌ಶಿಪ್ ಪೊಟೆಮ್‌ಕಿನ್‌’ ಚಿತ್ರವಿಮರ್ಶೆ; ಚಿತ್ರಲೇಖನದ ಅನುವಾದ)
1974 – ಅಂಚೆಮನೆ (ಮಕ್ಕಳ ನಾಟಕ, ರಬೀಂದ್ರನಾಥ ಟಾಗೋರ್ ನಾಟಕದ ರೂಪಾಂತರ)
1977 – ಭಗವದಜ್ಜುಕೀಯ ಮತ್ತು ಸೂಳೆ ಸನ್ಯಾಸಿ (ಸಂಸ್ಕೃತ ನಾಟಕದ ಅನುವಾದ ಮತ್ತು ರೂಪಾಂತರ)
1979 – ಬೈಸಿಕಲ್ ಥೀವ್ಸ್‌ (ಚಿತ್ರಲೇಖನದ ಅನುವಾದ)
1979 – ನಾಟಕ ಮತ್ತು ಸಿನೆಮಾ (ವಿಮರ್ಶೆ)
1979 – ಅಭಿವೃದ್ಧಿಗಾಗಿ ಸಿನೆಮಾ (ವಿಮರ್ಶೆ)
1980 – ರಶೊಮೊನ್ (ಜಪಾನಿ ಚಲನಚಿತ್ರದ ಪರಿಚಯ, ಕುರೊಸವನ ಮುಖ್ಯ ಚಿತ್ರಗಳ ಪರಿಚಯ, ರಶೊಮೊನ್ ಚಿತ್ರದ ಅವಲೋಕನ -ವಿಮರ್ಶೆ, ರಶೊಮೊನ್ ಚಿತ್ರಲೇಖನದ ಅನುವಾದ, ಈ ಚಿತ್ರಕ್ಕೆ ಕುರೊಸವ ಆಧರಿಸಿದ ಅಕತಗುವನ ಎರಡು ಕತೆಗಳ ಅನುವಾದ)
1980 – ಸಿನೆಮಾದ ದೂರಚಿತ್ರ ಸಮೀಪ ಚಿತ್ರಗಳು (ಜಾಗತಿಕ ಚಲನಚಿತ್ರದ ಇತಿಹಾಸ, ಬೇರೆಬೇರೆ ದೇಶಗಳ ಹೆಸರಾಂತ ಚಲನಚಿತ್ರ ಕೃತಿಗಳ ಬಗ್ಗೆ ಮಾಹಿತಿ, ಪರಿಚಯ, ವಿಮರ್ಶೆ), ಸಹ ಲೇಖಕರು : ಅಕ್ಷರ ಕೆ.ವಿ.
1980 – ಮಾರ್ಕ್ಸ್‌ ಮತ್ತು ಗಾಂಧಿ (ಮಧುದಂಡವತೆ ಅವರ ಪುಸ್ತಕದ ಅನುವಾದ)
1980 – ಪಥೇರ್ ಪಾಂಚಾಲಿ (ಚಿತ್ರಲೇಖನದ ಅನುವಾದ)
1981 – ಸಿನೆಮಾದ ಯಂತ್ರಭಾಷೆ (ಸಿನೆಮಾದ ಹಿನ್ನೆಲೆ, ಹುಟ್ಟು, ಯಂತ್ರ, ತಂತ್ರ, ಭಾಷೆ – ವಿವರವಾದ ಮಾಹಿತಿ), ಸಹ ಲೇಖಕರು : ಅಕ್ಷರ ಕೆ.ವಿ.
1981 – ಬೆಟ್ಟಕ್ಕೆ ಚಳಿಯಾದರೆ (ಮಕ್ಕಳ ನಾಟಕ), ಸಹ ಲೇಖಕರು : ಅಕ್ಷರ ಕೆ.ವಿ.
1982 – ರಂಗದಲ್ಲಿ ಅಂತರಂಗ (ಸ್ತಾನಿಸ್ಲಾವೆಸ್ಕಿ ಪುಸ್ತಕದ ಅನುವಾದ)
1983 – ರಂಗಮಾಧ್ಯಮ – ಚಿತ್ರಮಾಧ್ಯಮ (ವಿಮರ್ಶೆ)
1984 – ಜಯಂಟ್ ಮಾಮಾ (ಮಕ್ಕಳ ನಾಟಕ)
1985 – ಝೆನ್ (ಝೆನ್ ಬೌದ್ಧಪಂಥದ ಪರಿಚಯ; ಒಗಟು, ಕವಿತೆ, ಪ್ರಸಂಗಗಳ ಅನುವಾದ)
1985 – ನನ್ನ ಪ್ರೀತಿಯ ಹಿರೊಶಿಮಾ (ನೈಟ್ ಅಂಡ್ ಫಾಗ್‌, ಹಿರೊಶಿಮಾ ಮಾನ್ ಅಮೊರ್ ಚಿತ್ರಲೇಖನಗಳ ಅನುವಾದ; ವಿಮರ್ಶೆ)
1987 – ತಾಯಿ (ಬ್ರೆಕ್ಟ್‌ ನಾಟಕ ಅನುವಾದ)
1987 – ಮೂರು ಕಾಸಿನ ಸಂಗೀತ ನಾಟಕ (ಬ್ರೆಕ್ಟ್‌ ನಾಟಕ ಅನುವಾದ)
1987 – ಸೆಜುವಾನ್ ನಗರದ ಸಾಧ್ವಿ (ಬ್ರೆಕ್ಟ್‌ ನಾಟಕ ಅನುವಾದ)
1988 – ಲೋಕ ಶಾಕುಂತಲ (ಕಾಲಿದಾಸನ ಅಭಿಜ್ಞಾನ ಶಾಕುಂತಲಮ್ ಆಧರಿಸಿದ ನಾಟಕ)
1992 – ವೊಯ್‌ಜೆಕ್ (ಬುಶ್ನರ್ ಅವರ ಜರ್ಮನ್ ನಾಟಕದ ಅನುವಾದ)
1992 – ವಿದಿಶೆಯ ವಿದೂಷಕ (ಕಾಳಿದಾಸನ ಮಾಲವಿಕಾಗ್ನಿಮಿತ್ರಂ ಆಧರಿಸಿದ ನಾಟಕ)
1992 – ಕೆ.ವಿ. ಸುಬ್ಬಣ್ಣ ಅವರ ಆಯ್ದ ಬರಹಗಳು (ಸಂ: ಟಿ.ಪಿ. ಅಶೋಕ), ಕನ್ನಡ ವಿಶ್ವವಿದ್ಯಾಲಯ, ಹಂಪಿ.
1994 – ಅಥೆನ್ಸಿನ ಅರ್ಥವಂತ (ಶೇಕ್‌ಸ್ಪಿಯರ್ ನಾಟಕ ಅನುವಾದ)
1995 – ನಮ್ಮ ತವಕ ತಲ್ಲಣಗಳು (ಲೇಖನಗಳು), ಅಭಿನವ ಪ್ರಕಾಶನ, ಬೆಂಗಳೂರು.
1995 – ಕುವೆಂಪುಗೆ ಪುಟ್ಟ ಕನ್ನಡಿ (ಕುವೆಂಪು ಕುರಿತ ಬರಹ), ಸಾಹಿತ್ಯ ಅಕಾಡೆಮಿ, ಬೆಂಗಳೂರು.
1998 – ಸ್ವರಾಜ್ಯದ ಹಾದಿಹೆಜ್ಜೆಗಳು (ಗಾಂಧಿ ಬರಹಗಳ ಅನುವಾದ, ಕರ್ನಾಟಕ ಸಂಘ, ಪುತ್ತೂರು)
1999 – ರಂಗಭೂಮಿ ಮತ್ತು ಸಮುದಾಯ (ಲೇಖನಗಳು), ಶಿವರಾಮ ಕಾರಂತ ಅಧ್ಯಯನ ಕೇಂದ್ರ, ಪುತ್ತೂರು.
1999 – ಮಹಾತ್ಮ (ಮುಕುಂದ ರಾವ್ ನಾಟಕ ಅನುವಾದ)
2000 – ಕವಿರಾಜಮಾರ್ಗ ಮತ್ತು ಕನ್ನಡ ಜಗತ್ತು (ಕನ್ನಡ ಕುರಿತ ಲೇಖನಗಳು).
2001 – ಮಾಮಾಮೋಷಿ (ಮೋಲಿಯೆರ್ ನಾಟಕ ಅನುವಾದ)
2004 – ಅರೆಶತಮಾನದ ಅಲೆಬರಹಗಳು (ಸಂ. ಟಿ.ಪಿ. ಅಶೋಕ, ಮೊದಲ ಆವೃತ್ತಿ)

Additional information

Category

Author

Publisher

Book Format

Ebook

Language

Kannada

Reviews

There are no reviews yet.

Only logged in customers who have purchased this product may leave a review.