ಕಾಡಿನ ರಹಸ್ಯ ಕಾಡಲ್ಲೇ ಉಳಿಯಬೇಕು ಎಂದು ವಿನೋದ್ ಎಲ್ಲೋ ಒಂದು ಕಡೆ ಹೇಳುತ್ತಾರೆ. ಆದರೆ ಕಾಡಿನ ಗರ್ಭದೊಳಗೆ ಮನುಷ್ಯ ನಡೆಸುವ ಹಾವಳಿ ಮಿತಿಮೀರಿದಾಗ ನಿಸರ್ಗ ಹೊಮ್ಮಿಸುವ ಆಕ್ರಂದವನ್ನು ಎಲ್ಲೆಡೆ, ಎಲ್ಲರಿಗೆ ಕೇಳಿಸಬೇಕೆಂಬ ತುಡಿತವೂ ಅವರಿಗಿದೆ. ಈ ‘ಡೈರಿ’ಯ ಮೂಲಕ ಅವರು ಮೂಕ ಜೀವಲೋಕವನ್ನು ಮಾತಾಡಿಸಿದ್ದಾರೆ. ಕನ್ನಡ ನಾಡು ಎಂದರೆ ಬರೀ ಮನುಷ್ಯರದ್ದೇ ಕತೆ ಎಂಬಂತೆ, ಗಡಿ ಎಂದರೆ ಬರೀ ಭಾಷೆ ಎಂಬಂತೆ ಅದರ ಸಂರಕ್ಷಣೆಗೆ ಸನ್ನದ್ಧರಾಗುತ್ತೇವೆ. ಕನ್ನಡತನವನ್ನು ಸಂಭ್ರಮಿಸಿ ಧ್ವನಿವರ್ಧಕಗಳ ಮೂಲಕ ತಿಂಗಳಿಡೀ ಕುಣಿದಾಡುತ್ತೇವೆ. ನಮ್ಮವರದೇ ತುಳಿತಕ್ಕೆ ಸಿಕ್ಕು, ನಮ್ಮವರದೇ ಅನಾದರಕ್ಕೆ ತುತ್ತಾಗಿ ದಿನದಿನಕ್ಕೆ ಅವಸಾನದಂಚಿಗೆ ಬರುತ್ತಿರುವ ವನ್ಯಜೀವಿಗಳ ಕ್ಷೀಣ ಆಕ್ರಂದನಕ್ಕೆ ಈ ಕೃತಿ ಒಂದು ಧ್ವನಿವರ್ಧಕವಾಗಿದೆ. ಅದು ನಮ್ಮದೇ ಧ್ವನಿ ಎಂದು ನಮಗೆ ಮನದಟ್ಟಾಗಬೇಕಷ್ಟೆ.
ವಿನೋದಕುಮಾರ ಬಿ ನಾಯ್ಕ ಅವರ ಕಾಡಿನ, ಕಾಡು ಪ್ರಾಣಿಗಳ ಕುರಿತಾದ ಲೇಖನಗಳನ್ನು ಒಳಗೊಂಡಿದೆ.
Reviews
There are no reviews yet.