ಇದೊಂಥರಾ ಆತ್ಮ ಕಥೆ:
ಆರ್ ಟಿ ವಿಠ್ಠಲಮೂರ್ತಿ ಅವರ ಬರವಣಿಗೆಯಲ್ಲಿ ದೇವರಾಜ ಅರಸು, ದೇವೇಗೌಡ, ವೀರೇಂದ್ರ ಪಾಟೀಲ್, ಎಸ್ ಎಂ ಕೃಷ್ಣ, ಧರ್ಮಸಿಂಗ್, ಕುಮಾರಸ್ವಾಮಿ ಮಾತ್ರ ಇದ್ದಾರೆ ಎಂದುಕೊಂಡರೆ ತಪ್ಪು. ನಮಗೇ ಗೊತ್ತೆ ಆಗದಂತೆ ಸಿದ್ದರಾಮಯ್ಯನವರ ಮನೆಯಲ್ಲಿ ಅಡುಗೆ ಮಾಡುವಾತ, ಹಿಮಾಚಲದ ತಪ್ಪಲಲ್ಲಿ ಟೀ ಮಾಡುವವ, ಕಡಿದಾಳ ಮಂಜಪ್ಪನವರ ಮುಂದೆ ನಿಂತ ಸೊಂಟ ಬಾಗಿದ ಮುದುಕಿ, ಬಂಗಾರಪ್ಪನವರು ಕಂಡ ಮಳೆಯ ಹೊಡೆತಕ್ಕೆ ಸಿಕ್ಕಿದ ಹಣ್ಣು ಹಣ್ಣು ಮುದುಕಿ, ಜೋಳದ ರೊಟ್ಟಿ, ಝನಕಾ ಮಾಡಿಕೊಟ್ಟ ವೀರೇಂದ್ರ ಪಾಟೀಲರ ಪತ್ನಿ, ಸಾಗರ ಬೆಣ್ಣೆ ದೋಸೆ ಕೃಷ್ಣಪ್ಪ, ವಿಜಯಪುರದ ಸಿದ್ಧೇಶ್ವರ ಸ್ವಾಮೀಜಿ, ಕೊಡೆ ಕದ್ದು ಕೊಡುತ್ತಿದ್ದ ಪಾಂಡು, ರಪ್ಪನೆ ಮುಖಕ್ಕೆ ಬಿಗಿದ ಗಂಗಮ್ಮಜ್ಜಿ, ಫ್ರೆಂಡ್ ಅಂಡ್ ಗೈಡ್ ಮೋಹನಣ್ಣ… ಹೀಗೆ ಜನಸಾಮಾನ್ಯರ ಗಡಣವೇ ಇದೆ. ಮುಖ್ಯಮಂತ್ರಿಗಳ ಕಥೆಗಳು ಮಾತ್ರ ಕುತೂಹಲಕರ ಎಂದು ಕೊಂಡವರಿಗೆ ಥಟ್ಟನೆ ಆರ್ ಟಿ ಇವರೆಲ್ಲರ ಲೋಕವನ್ನು ಬಿಚ್ಚಿ ಕೊಡುತ್ತಾರೆ.
ರಾಗಿಮುದ್ದೆ ತಿನ್ನುವುದನ್ನು ದೇವೇಗೌಡರಿಂದಲು, ಜೋಳದ ರೊಟ್ಟಿ ಮುರಿಯುವುದನ್ನು ವೀರೇಂದ್ರ ಪಾಟೀಲರಿಂದಲೂ, ಆಹಾ! ಎನ್ನುವ ವಿವಿಧ ಭಕ್ಷಗಳನ್ನು ಜೀವರಾಜ ಆಳ್ವರಿಂದಲೂ, ಲಾನ್ ನಲ್ಲಿ ಕುಳಿತು ಟೀ ಸವಿಯುವುದನ್ನು ರಾಮಕೃಷ್ಣ ಹೆಗಡೆಯವರಿಂದಲೂ.. ಹೀಗೆ ಇದೊಂದು ‘ಥರಾವರಿ’ ಆತ್ಮಕಥೆ.
Reviews
There are no reviews yet.