ಗೌರೀಶ ಕಾಯ್ಕಿಣಿ ಅವರ ಆಯ್ದ ಬರಹಗಳು
ಗೌರೀಶ ಕಾಯ್ಕಿಣಿ
ಗೌರೀಶ ವಿಟ್ಠಲ ಕಾಯ್ಕಿಣಿಯವರು ೧೨, ಸೆಪ್ಟೆಂಬರ್ ೧೯೧೩ರಂದು ಉತ್ತರಕನ್ನಡ ಜಿಲ್ಲೆಯ ಗೋಕರ್ಣದಲ್ಲಿ ಜನಿಸಿದರು. ಗೋಕರ್ಣ, ಕುಮಟಾಗಳಲ್ಲಿ ವಿದ್ಯಾಭ್ಯಾಸ ಮಾಡಿ, ಅಧ್ಯಾಪಕರಾಗಿ ಕೆಲಸ ಮಾಡಿದರು. ಬಹುಭಾಷಾ ವಿದ್ವಾಂಸರಾದ ಇವರು ಗೋಕರ್ಣದಂಥ ಸಣ್ಣ ಊರಿನಲ್ಲಿಯೇ ನೆಲೆಸಿ ಹಲವು ಕತೆ, ಕವಿತೆ, ನಾಟಕಗಳನ್ನೂ ಪೌರ್ವಾತ್ಯ ಮತ್ತು ಪಾಶ್ಚಿಮಾತ್ಯ ಕಾವ್ಯಶಾಸ್ತ್ರ ಮತ್ತು ತತ್ತ್ವಶಾಸ್ತ್ರಗಳ ಗ್ರಂಥಗಳನ್ನೂ ನೂರಾರು ವೈಚಾರಿಕ ಮತ್ತು ವಿಮರ್ಶಾಲೇಖನಗಳನ್ನೂ ಬರೆದಿದ್ದಾರೆ. ಇವರು ಹಲವುಕಾಲ ದಿನಕರ ದೇಸಾಯಿಯವರ ‘ಜನಸೇವಕ’ ಪತ್ರಿಕೆಯ ಸಂಪಾದಕರಾಗಿದ್ದರು. ‘ಕಂಪಿನ ಕರೆ: ಬೇಂದ್ರೆ ಕಾವ್ಯದೃಷ್ಟಿ’, ‘ವಿಚಾರವಾದ’, ‘ಕ್ರೌಂಚಧ್ವನಿ’, ‘ನವಮಾನವತಾವಾದ’ ಮುಂತಾದವು ಇವರ ಪ್ರಮುಖ ಕೃತಿಗಳು. ಹತ್ತು ಸಂಪುಟಗಳಲ್ಲಿ ಇವರ ಸಮಗ್ರ ಬರಹಗಳು ಪ್ರಕಟವಾಗಿವೆ. ಕನ್ನಡ ಸಾಹಿತ್ಯ ಪರಿಷತ್ತಿನ ವಜ್ರಮಹೋತ್ಸವ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ, ವರ್ಧಮಾನ ಪ್ರಶಸ್ತಿ ಮುಂತಾದ ಪುರಸ್ಕಾರಗಳು ಇವರಿಗೆ ಸಂದಿವೆ. ಇವರು ೧೪, ನವೆಂಬರ್ ೨೦೦೨ರಂದು ನಿಧನರಾದರು.
ಗೌರೀಶ ಕಾಯ್ಕಿಣಿ ಮುಖ್ಯ ಕೃತಿಗಳು
ನಾಟಕಗಳು / ರೂಪಕಗಳು:
ಕ್ರೌಂಚಧ್ವನಿ, ಯಶೋಧರಾ,
ವಾಸವದತ್ತಾ, ಅಗ್ನಿಕನ್ಯಾ-ದ್ರೌಪದಿ,
ಅಂಬೆ, ಸಂಕ್ರಾಂತಿ,
ಚಿದಂಬರ ಸ್ವಾರಸ್ಯ,
ಆಕಾಶ ನಾಟಕಗಳು
ವೈಚಾರಿಕ ಬರಹಗಳು:
ವಿಚಾರವಾದ, ಮಾರ್ಕ್ಸ್‌ವಾದ,
ನವಮಾನವತಾವಾದ,
ನಾಸ್ತಿಕನು ಮತ್ತು ದೇವರು,
ಆರ್ಕೆಸ್ಟ್ರಾ ಮತ್ತು ತಂಬೂರಿ, ಗುಣಗೌರವ,
ಪಶ್ಚಿಮದ ಪ್ರತಿಭೆ, ಜೀವನವಿಜ್ಞಾನ
ವಿಮರ್ಶಾಸಂಕಲನಗಳು:
ಕಂಪಿನ ಕರೆ (ಬೇಂದ್ರೆ ಕಾವ್ಯ ದೃಷ್ಟಿ),
ದಿನಕರ ದೇಸಾಯರ ಕಾವ್ಯ,
ವಿ.ಜಿ. ಭಟ್ಟರ ಕಾವ್ಯ,
ಚೆನ್ನವೀರ ಕಣವಿ ಕಾವ್ಯದೃಷ್ಟಿ,
ಸ್ವಚ್ಛಂದದಿಂದ ನವ್ಯದತ್ತ
ಬಿಡಿಲೇಖನಗಳು:
ಗೌರೀಶ ಕಾಯ್ಕಿಣಿ ಸಮಗ್ರ ಬರಹಗಳು (ಹತ್ತು ಸಂಪುಟ)
Reviews
There are no reviews yet.