ಶಿಕ್ಷೆಯನ್ನು ಎದುರಿಸುತ್ತಿರುವ ಕೈದಿಗಳ ಮಾನಸಿಕ ಸ್ಥಿತಿಯೇನು? ನ್ಯಾಯಾಲಯವು ತಮಗೆ ಕೊಟ್ಟ ಶಿಕ್ಷೆಯ ಬಗ್ಗೆ ಅವರ ಅಭಿಪ್ರಾಯಗಳೇನು? ಅವರು ಈ ಶಿಕ್ಷೆಯು ಸಮರ್ಪಕವೆಂದು ಒಪ್ಪಿಕೊಳ್ಳುವರೇ ಇಲ್ಲವೇ ತಾವು ತಪ್ಪನ್ನೇ ಮಾಡಿಲ್ಲ, ತಮಗೆ ವಿನಾಕಾರಣ ಶಿಕ್ಷೆಯಾಗಿದೆ ಎಂದು ಹೇಳುತ್ತಾರೆಯೇ? ಇಂತಹ ಕೈದಿಗಳು ತಮಗೆ ಘೋರ ರೂಪದ ಶಿಕ್ಷೆಯಾಗಿದೆ ಎಂದು ಖಿನ್ನತೆಯಿಂದ ಕೊರಗುತ್ತಿದ್ದಾರೆಯೇ? ಈ ಶಿಕ್ಷೆಯ ಕಾರಣವಾಗಿ ದೈಹಿಕವಾಗಿ ಅವರಿಗೆ ಕಾಯಿಲೆಗಳು ಬಂದಿವೆಯೇ? ಎನ್ನುವುದನ್ನು ನಿರೂಪಿಸಿದ್ದೇನೆ.
ಈ ಕೃತಿಯಲ್ಲಿ ಏಳು ಕಥೆಗಳಿವೆ. ಈ ಕಥೆಗಳಲ್ಲಿ ಬರುವ ಅಷ್ಟೂ ಕೈದಿಗಳನ್ನೂ ನಾನು ಭೇಟಿಯಾಗಲು ಸಾಧ್ಯವಾಗಿಲ್ಲ. ಅವರ ಕಥೆಗಳನ್ನು ಪೊಲೀಸ್ಅಧಿಕಾರಿಗಳ ಸಂದರ್ಶನಗಳು ಮತ್ತು ನ್ಯಾಯಾಲಯದ ಕಡತಗಳ ಮೂಲಕ ಸಂಗ್ರಹಿಸಿರುವೆ. ಹೀಗಾಗಿ ಈ ಕೃತಿಯಲ್ಲಿರುವ ಕಥೆಗಳು ಮೊದಲ ಕೃತಿಯಲ್ಲಿರುವ ಕಥೆಗಳಿಗಿಂತ ಭಿನ್ನವಾಗಿದೆ. ಈ ಕೃತಿಯಲ್ಲಿ ನಾನು ಭಾರತದ ಅಪರಾಧ ಚರಿತ್ರೆಯಲ್ಲಿ ಅತ್ಯಂತ ಹೀನ ಮತ್ತು ಭಯಂಕರವೆಂದು ಭಾವಿಸಲಾಗಿರುವ ಅಪರಾಧಗಳ ಬಗ್ಗೆ ಹೆಚ್ಚಿನ ಗಮನವನ್ನು ನೀಡಿದ್ದೇನೆ.
Reviews
There are no reviews yet.