ಎಂದಿನಂತೆ ಬೆಳಿಗ್ಗೆ ನಾನು ನನ್ನ ಹೊಂಡಾ ಸಿಟಿಕಾರಿನಲ್ಲಿ ಕುಳಿತು ಮೈನ್ ಸರ್ಕಲ್ಲಿಗೆ ಬಂದಾಗ ಟಿಪ್ ಟಾಪಾಗಿಯೂ ನಿಫಾರಂನಲ್ಲಿ ಡ್ಯೂಟಿ ಮಾಡುತ್ತಿದ್ದ ಟ್ರಾಫಿಕ್ ಕಾನ್ಸ್‌ಟೇಬಲ್ ಭರಮಯ್ಯನನ್ನನ್ನು ಕಂಡು ಕೈಯೆತ್ತಿ ವಿಶ್ ಮಾಡಿದ , ಮುಗುಳ್ನಕ್ಕು ತಲೆಯಾಡಿಸಿದ. ನಾನೂ ಅಂತೆಯೇ ಕಿಟಕಿಯ ಹೊರಗೆ ಒಂದು ಕೈಯೆತ್ತಿ ವಿಶ್ ಮಾಡಿ ಸಿಗ್ನಲ್ ದಾಟಿಹೊರಟೆ. ಹಾಗೆ ನೋಡಿದರೆ ನಾನು ದೊಡ್ಡ ಪೋಲಿಸ್ ಅಧಿಕಾರಿಯೂ ಅಲ್ಲ, ರಾಜಕೀಯ ವಿಐಪಿಯೂ ಅಲ್ಲ.
ಆದರೆ ನಾನೂ ಭರಮಯ್ಯ ಒಂದೇ ಕಾರ್ಪೊರೇಷನ್ ಶಾಲೆಯಲ್ಲಿ ಒಂದರಿಂದ ಹತ್ತನೆಯ ಕ್ಲಾಸ್‌ವರೆಗೆ ಓದಿದವರು. ಕದ್ದುಮುಚ್ಚಿ ಭಟ್ಟರ ಅಂಗಡಿ ಬಜ್ಜಿ ತಿಂದು ಮೇಷ್ಟ್ರ ಕಣ್ಣಿಗೆ ಬಿದ್ದು ಅದೇ ಬೆಂಚ್ ಮೇಲೆ ನಿಂತವರು, ಸ್ಕೂಲ್ ಬ್ಯಾಗಿನಲ್ಲಿ ಸಣ್ಣ ಟ್ರಾನ್ಸಿಸ್ಟರ್ ಅಡಗಿಸಿ ಕೊಂಡು ಹಿಂದಿನ ಬೆಂಚಿನಲ್ಲಿ ಅಕ್ಕಪಕ್ಕ ಕುಳಿತು ವರ್ಲ್ಡ್ ಕಪ್ ಕ್ರಿಕೆಟ್ ಮ್ಯಾಚಿನ ಕಾಮೆಂಟರಿ ಕೇಳಿ ಸಿಕ್ಕಿ ಹಾಕಿಕೊಂಡು ಕ್ಲಾಸಿನಾಚೆಗೆ ಇಡೀ ದಿನ ನಿಂತು ಪನಿಶ್ ಮೆಂಟ್ ಅನುಭವಿಸಿದವರು.
ಆದರೆ ವಿಧಿ ವಿಲಾಸ ನೋಡಿ, ನಾನಿಂದು ಇದೇ ನಗರದ ಪ್ರತಿಷ್ಟಿತ ಕ್ರಿಮಿನಲ್ ಅಡ್ವೋಕೇಟ್‌ಗಳ ಸಾಲಿನಲ್ಲಿ ಸಂಜಯಕುಮಾರ್, ಎಲ್. ಎಲ್. ಎಮ್. ಎಂದು ಉಲ್ಲೇಖಿತನಾಗಿದ್ದೇನೆ. ನನ್ನ ಗೆಳೆಯ ಭರಮಯ್ಯ ಅದೇಕೋ ಹತ್ತನೇ ತರಗತಿ ನಂತರ ಪುಸ್ತಕದ ಹುಳುವಾಗಿ ಕಠಿಣ ಪರಿಶ್ರಮ ಪಡುತ್ತಿದ್ದ ನನಗಿಂತಾ ತೀರಾ ಭಿನ್ನವಾದ ದಾರಿಯನ್ನು ಹಿಡಿದ
…ಓದಿರಿ ನಾಗೇಶ್ ಕುಮಾರ್ ಅವರ ಒಂದು ವೈವಿಧ್ಯಮಯ ಕಥಾ ಸಂಕಲನ.
Reviews
There are no reviews yet.